ಈ ಜ್ಯೂಸ್ ಕುಡಿದರೆ ಸುಡುಬಿಸಿಲಿಗೆ ಕಾಡುವ ಹೀಟ್ ಸ್ಟ್ರೋಕ್ ಅಪಾಯದಿಂದ ಸಿಗುತ್ತೆ ಪರಿಹಾರ

Heat Stroke: ವೈದ್ಯರು ಸಾಮಾನ್ಯವಾಗಿ ಹೊರಗಿನ ಆಹಾರದಿಂದ ದೂರ ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ. ಕೆಲವರಿಗೆ ಕೆಲಸದ ನಿಮಿತ್ತ ಬಿಸಿಲಿನಲ್ಲಿಯೇ ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚರ್ಮದ ದದ್ದುಗಳಾಗುವ ಸಾಧ್ಯತೆ ಹೆಚ್ಚು.

Written by - Bhavishya Shetty | Last Updated : May 24, 2024, 04:55 PM IST
    • ಹೆಚ್ಚು ಹೊತ್ತು ಬಿಸಿಲಿನಲ್ಲಿ ಉಳಿಯುವುದರಿಂದ ಹೀಟ್ ಸ್ಟ್ರೋಕ್ ಬರುವ ಸಾಧ್ಯತೆ
    • ರಕ್ತದೊತ್ತಡದಲ್ಲಿ ಇಳಿಕೆ ಮತ್ತು ಆಯಾಸದ ಸಮಸ್ಯೆಯೂ ಬರಬಹುದು
    • ನೀರು ಕುಡಿಯುವುದರ ಜೊತೆಗೆ ಎಳನೀರನ್ನು ಸೇವಿಸುವುದು ಸಹ ಉತ್ತಮ
ಈ ಜ್ಯೂಸ್ ಕುಡಿದರೆ ಸುಡುಬಿಸಿಲಿಗೆ ಕಾಡುವ ಹೀಟ್ ಸ್ಟ್ರೋಕ್ ಅಪಾಯದಿಂದ ಸಿಗುತ್ತೆ ಪರಿಹಾರ title=
heat stroke home remedies

Heat Stroke: ದಕ್ಷಿಣ ಭಾರತದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿದೆ. ಆದರೆ ಉತ್ತರ ಭಾರತದಲ್ಲಿ ಬಿರುಬಿಸಿಲಿಗೆ ಜನರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಾಗಲಿ, ದೊಡ್ಡವರಾಗಲಿ ಎಲ್ಲರೂ ಸ್ವಲ್ಪ ಎಚ್ಚರದಿಂದ ಇರಬೇಕಾಗುತ್ತದೆ. ಈ ದಿನಗಳಲ್ಲಿ, ಆಹಾರದ ಬಗ್ಗೆ ಅಥವಾ ಮನೆಯಿಂದ ಹೊರಗೆ ಹೋಗುವಾಗ ಸಣ್ಣ ಅಜಾಗರೂಕತೆ ಕೂಡ ನಿಮ್ಮನ್ನು ದೊಡ್ಡ ಅಪಾಯಕ್ಕೆ ತಳ್ಳುತ್ತದೆ.

ಇದನ್ನೂ ಓದಿ:  ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!

ವೈದ್ಯರು ಸಾಮಾನ್ಯವಾಗಿ ಹೊರಗಿನ ಆಹಾರದಿಂದ ದೂರ ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ. ಕೆಲವರಿಗೆ ಕೆಲಸದ ನಿಮಿತ್ತ ಬಿಸಿಲಿನಲ್ಲಿಯೇ ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚರ್ಮದ ದದ್ದುಗಳಾಗುವ ಸಾಧ್ಯತೆ ಹೆಚ್ಚು. ಅತಿಯಾದ ಬೆವರುವಿಕೆಯಿಂದಾಗಿ, ಕೆಂಪು ದದ್ದುಗಳು ಅಥವಾ ಇತರ ಚರ್ಮ ಸಂಬಂಧಿತ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೆಚ್ಚಿನ ಸೂರ್ಯನ ಬೆಳಕು ಮತ್ತು ಹೆಚ್ಚುತ್ತಿರುವ ತಾಪಮಾನದಿಂದಾಗಿ ಶಾಖದ ಹೊಡೆತದ ಸಮಸ್ಯೆ ಅಥವಾ ಹೀಟ್ ಸ್ಟ್ರೋಕ್ ಸಮಸ್ಯೆ ಕಂಡುಬರುತ್ತದೆ.

ಹೆಚ್ಚು ಹೊತ್ತು ಬಿಸಿಲಿನಲ್ಲಿ ಉಳಿಯುವುದರಿಂದ ಹೀಟ್ ಸ್ಟ್ರೋಕ್ ಬರುವ ಸಾಧ್ಯತೆ ಇದೆ. ಇದರಿಂದ ರಕ್ತದೊತ್ತಡದಲ್ಲಿ ಇಳಿಕೆ ಮತ್ತು ಆಯಾಸದ ಸಮಸ್ಯೆಯೂ ಬರಬಹುದು. ಕೆಲವೊಮ್ಮೆ ಈ ಕಾರಣದಿಂದಾಗಿ ಹೃದಯ ಬಡಿತವೂ ಸಹ ಪರಿಣಾಮ ಬೀರುತ್ತದೆ.

ದಿನಗಳಲ್ಲಿ ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಎಳನೀರನ್ನು ಸೇವಿಸುವುದು ಸಹ ಉತ್ತಮ. ಇದು ಸೋಡಿಯಂ, ಪೊಟ್ಯಾಸಿಯಮ್ ಮುಂತಾದ ಎಲೆಕ್ಟ್ರೋಲೈಟ್‌’ಗಳನ್ನು ಒದಗಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಬೇಸಿಗೆಯಲ್ಲಿ ನಿರಂತರ ಬೆವರುವಿಕೆಯಿಂದ ದೇಹದಲ್ಲಿ ಉಪ್ಪಿನ ಕೊರತೆ ಉಂಟಾಗುತ್ತದೆ. ಹೀಗಾಗಿ ಎಳನೀರನ್ನು ಕುಡಿದರೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

ವಾಂತಿ ಅಥವಾ ಅತಿಸಾರದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ORS ದ್ರಾವಣವನ್ನು ಮನೆಯಲ್ಲಿಯೇ ತಯಾರಿಸಬಹುದು. ರಕ್ತದೊತ್ತಡದ ಸಮಸ್ಯೆ ಇಲ್ಲದಿದ್ದರೆ, ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಬಹುದು. ತಾಜಾ ಹಣ್ಣುಗಳ ಜ್ಯೂಸ್’ನ್ನು ಹೊರಗಿನ ಬದಲು ಮನೆಯಲ್ಲಿಯೇ ಮಾಡಿ. ಮೊಸರು ಮತ್ತು ಲಸ್ಸಿಯನ್ನೂ ಸೇವಿಸಿ. ಹೀಗೆ ಮಾಡುವುದರಿಂದ ನಿರ್ಜಲೀಕರಣವನ್ನು ತಪ್ಪಿಸುವುದು ಮಾತ್ರವಲ್ಲದೆ ಹೊಟ್ಟೆಗೆ ತಂಪು ನೀಡುತ್ತದೆ.

ಇವುಗಳ ಹೊರತಾಗಿ ಬೆಳಗಿನ ಉಪಹಾರದ ಬಳಿಕ ಕೆಲವೊಂದು ಜ್ಯೂಸ್’ಗಳನ್ನು ಕುಡಿದರೆ ದಿನಪೂರ್ತಿ ದೇಹ ತಂಪಾಗಿರುತ್ತೆ. ಜೊತೆಗೆ ಹೀಟ್ ಸ್ಟ್ರೋಕ್ ಅಪಾಯವೂ ಕಡಿಮೆಯಾಗುತ್ತದೆ. ಮಜ್ಜಿಗೆ, ಕೊತ್ತಂಬರಿ ನೀರು, ಮಾವಿನ ಜ್ಯೂಸ್, ಹುಣಸೆ ಜ್ಯೂಸ್, ಈರುಳ್ಳಿ ರಸ ಇವುಗಳನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು.

ಇದನ್ನೂ ಓದಿ: ಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News