ದೇಹ ನೀಡುವ ಈ ಒಂದು ಸೂಚನೆಯಿಂದ ತಿಳಿದುಕೊಳ್ಳಿ ನಿಮ್ಮನ್ನು ಮಧುಮೇಹ ಬಾಧಿಸಿರಬಹುದು .!

ದೇಹವು ಹೆಚ್ಚು ಬೆವರಲು ಪ್ರಾರಂಭಿಸಿದಾಗ, ಅದು ಮಧುಮೇಹದ ಬಗೆಗಿನ ಎಚ್ಚರಿಕೆಯ  ಗಂಟೆಯಾಗಿರುತ್ತದೆ. ಇದರರ್ಥ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು  ನಿಯಂತ್ರಣದಲ್ಲಿ ಇಲ್ಲ ಎಂದರ್ಥ.

Written by - Ranjitha R K | Last Updated : Aug 18, 2022, 09:17 AM IST
  • ಮಧುಮೇಹ ಕಾಯಿಲೆಯಲ್ಲಿ ವ್ಯಕ್ತಿ ಜೀವನಪರ್ಯಂತ ನರಳಬೇಕಾಗುತ್ತದೆ.
  • ಮಧುಮೇಹವಿದ್ದಾಗ ಆಹಾರ ಜೀವನಶೈಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
  • ಇಲ್ಲವಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ.
ದೇಹ ನೀಡುವ ಈ ಒಂದು ಸೂಚನೆಯಿಂದ ತಿಳಿದುಕೊಳ್ಳಿ ನಿಮ್ಮನ್ನು ಮಧುಮೇಹ ಬಾಧಿಸಿರಬಹುದು .!  title=
diabetes early symptoms (file photo)

ಬೆಂಗಳೂರು : ಮಧುಮೇಹ ಕಾಯಿಲೆ ಒಮ್ಮೆ ಬಂತೆಂದರೆ, ಆ ವ್ಯಕ್ತಿ  ಜೀವನಪರ್ಯಂತ ನರಳಬೇಕಾಗುತ್ತದೆ. ಮಧುಮೇಹವಿದ್ದಾಗ ಆಹಾರ ಜೀವನಶೈಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಇದು ಹೀಗೆಯೇ ಮುಂದುವರೆದರೆ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಮಧುಮೇಹ ಎನ್ನುವುದು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಹಾಗಾಗಿ ಮಧುಮೇಹದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿರುತ್ತದೆ.  

ದೇಹವು ಸಾಮಾನ್ಯಕ್ಕಿಂತ ಹೆಚ್ಚು ಬೆವರಲು ಪ್ರಾರಂಭಿಸಿದಾಗ : 
ದೇಹ ಬೆವರುವುದು ತುಂಬಾ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ಬೇಸಿಗೆಯಲ್ಲಿ ಮತ್ತು ಆರ್ದ್ರ ವಾತಾವರಣದಲ್ಲಿ ಹೆಚ್ಚು ಸಾಮಾನ್ಯ. ಆದರೆ ವಿಪರೀತವಾಗಿ ಬೆವರುತ್ತಿದ್ದೇವೆ ಎಂದು ಅನಿಸಿದರೆ, ಎಚ್ಚರಿಕೆಯ ಅಗತ್ಯವಿದೆ. ಈ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸೆಕೆಂಡರಿ ಹೈಪರ್ಹೈಡ್ರೋಸಿಸ್ ಎಂದು ಕರೆಯಲಾಗುತ್ತದೆ. ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಅನೇಕ ರೋಗಗಳ ಸಂಕೇತವಾಗಿರಬಹುದು.

ಇದನ್ನೂ ಓದಿ : Overhydration : ಹೆಚ್ಚು ನೀರು ಕುಡಿಯುವುದು ಕಿಡ್ನಿಗೆ ಹಾನಿಕಾರಕ! ಯಾಕೆ ಗೊತ್ತಾ?

ಅತಿಯಾದ ಬೆವರುವಿಕೆಯ ಕಾರಣ : 
ದೇಹವು ಹೆಚ್ಚು ಬೆವರಲು ಪ್ರಾರಂಭಿಸಿದಾಗ, ಅದು ಮಧುಮೇಹದ ಬಗೆಗಿನ ಎಚ್ಚರಿಕೆಯ  ಗಂಟೆಯಾಗಿರುತ್ತದೆ. ಇದರರ್ಥ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇಲ್ಲ ಎಂದರ್ಥ. ಈ ಕಾರಣದಿಂದಾಗಿ ದೇಹದಿಂದ ವಿಭಿನ್ನ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ವಿಶೇಷವಾಗಿ ಅಡ್ರಿನಾಲಿನ್ ಬಿಡುಗಡೆಯಾದಾಗ, ದೇಹದಿಂದ ಬಹಳಷ್ಟು ಬೆವರು ಹೋಗಲು ಪ್ರಾರಂಭವಾಗುತ್ತದೆ. ಮಧುಮೇಹವು ನಮ್ಮ ಬೆವರು ಗ್ರಂಥಿಗಳ ಮೇಲೆ ಪರಿಣಾಮ ಬೀರಬಹುದು. 

ಅತಿಯಾದ ಬೆವರುವಿಕೆಯನ್ನು ಕೇವಲ ಮಧುಮೇಹದ ಲಕ್ಷಣವೆಂದು ಪರಿಗಣಿಸುವುದು ಅನಿವಾರ್ಯವಲ್ಲ. ಇತರ ಹಲವು ಕಾರಣಗಲಿನ್ದಲೂ ಹೀಗಾಗಬಹುದು. ಸ್ಥೂಲಕಾಯಕ ಹೊಂದಿದ್ದು, ಸೆಕೆಂಡರಿ  ಹೈಪರ್ಹೈಡ್ರೋಸಿಸ್ ನಿಮ್ಮ ದೇಹವನ್ನು ಆಕ್ರಮಿಸಬಹುದು.  ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದು, ಇದರಿಂದಾಗಿ ಹೆಚ್ಚು ಬೆವರುವುದು ಪ್ರಾರಂಭವಾಗುತ್ತದೆ. 

ಇದನ್ನೂ ಓದಿ : ಮಕ್ಕಳ ಒಣ ಕೆಮ್ಮನ್ನು ಕ್ಷಣ ಮಾತ್ರದಲ್ಲಿ ನಿವಾರಿಸುತ್ತದೆ ಈ ಮನೆ ಮದ್ದು

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News