How To Reduce Belly Fat: ಖಾಲಿ ಹೊಟ್ಟೆಯಲ್ಲಿ ಈ ಟೀ ಕುಡಿಯುವುದರಿಂದ ಕರಗುತ್ತೆ ಬೆಲ್ಲಿ ಫ್ಯಾಟ್!

How To Reduce Belly Fat: ಹಳದಿ ಚಹಾವನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ನೀವೂ ತೂಕ ಇಳಿಸಿಕೊಳ್ಳಲು ಬಯಸಿದರೆ ಇಂದಿನಿಂದ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅರಿಶಿನದ ಟೀ ಕುಡಿಯುವುದನ್ನು ರೂಢಿಸಿಕೊಳ್ಳಿ.

Written by - Yashaswini V | Last Updated : Mar 21, 2022, 08:39 AM IST
  • ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಚಹಾವನ್ನು ಕುಡಿಯಿರಿ
  • ನೀವು ಈ ಪ್ರಯೋಜನಗಳನ್ನು ಪಡೆಯುತ್ತೀರಿ
  • ಹೊಟ್ಟೆಯ ಕೊಬ್ಬು ಕೂಡ ಕಡಿಮೆಯಾಗುತ್ತದೆ
How To Reduce Belly Fat: ಖಾಲಿ ಹೊಟ್ಟೆಯಲ್ಲಿ ಈ ಟೀ ಕುಡಿಯುವುದರಿಂದ ಕರಗುತ್ತೆ ಬೆಲ್ಲಿ ಫ್ಯಾಟ್! title=
Belly Fat Reduce tea

How To Reduce Belly Fat: ಸಾಮಾನ್ಯವಾಗಿ ಅನೇಕರು ಟೀ ಕುಡಿಯುವ ಮುನ್ನ ಯೋಚಿಸುತ್ತಾರೆ. ಚಹಾದಲ್ಲಿನ ಸಕ್ಕರೆಯ ಪ್ರಮಾಣವು ತೂಕವನ್ನು ಕಳೆದುಕೊಳ್ಳುವ ಬದಲು ತೂಕವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚಿನ ಜನರು ನಂಬುತ್ತಾರೆ. ಹಾಗಾಗಿಯೇ ಟೀ ಕುಡಿಯಲು ಎಷ್ಟೇ ಮನಸ್ಸಾದರೂ ಟೀ ಸೇವನೆಯನ್ನು ತಪ್ಪಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಬದಲು ನಿಮ್ಮ ತೂಕ ಕಡಿಮೆ ಮಾಡಲು ಸಹಾಯಕವಾಗುವ ಚಹಾವನ್ನು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬಹುದು.  ಈ ಚಹಾ ಸಾಮಾನ್ಯ ಚಹಾ ಅಲ್ಲ, ಹಳದಿ ಚಹಾ. ಹಳದಿ ಚಹಾವು ತೂಕ ಇಳಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯಿರಿ.

ನೀವು ಚಹಾವನ್ನು ಇಷ್ಟಪಡುತ್ತಿದ್ದರೆ ಮತ್ತು ತೂಕ ಹೆಚ್ಚಾಗುವ ಭಯದಿಂದಾಗಿ ಚಹಾ ಕುಡಿಯುವುದನ್ನು ತಪ್ಪಿಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯೋಗವಾಗಬಹುದು.  ನೀವು ಚಹಾ ಪ್ರಿಯರಾಗಿದ್ದರೆ ಇಂದಿನಿಂದ ಸಾಮಾನ್ಯ ಚಹಾ ಸೇವನೆ ಬದಲಿಗೆ ಹಳದಿ ಚಹಾ (Turmeric Tea) ಕುಡಿಯುವುದನ್ನು ರೂಢಿಸಿಕೊಳ್ಳಿ. ಈ ಚಹಾವನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವ ಮೂಲಕ ದೇಹವನ್ನು ಬಲಪಡಿಸುತ್ತದೆ.

ಇದನ್ನೂ ಓದಿ- Belly Fat Reduce: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ 2 ಹಣ್ಣುಗಳಿಂದ ದೂರವಿರಿ

ಅರಿಶಿನದಲ್ಲಿ ಈ ಗುಣಲಕ್ಷಣಗಳು ಕಂಡು ಬರುತ್ತವೆ:
ವರದಿಗಳ ಪ್ರಕಾರ, ಅರಿಶಿನದಲ್ಲಿ ವಿಟಮಿನ್ ಬಿ (Vitamin B), ಸಿ, ಒಮೆಗಾ-3 ಕೊಬ್ಬಿನಾಮ್ಲಗಳು, ಆಲ್ಫಾ-ಲಿನೋಲಿಕ್ ಆಮ್ಲ, ಫೈಬರ್, ಪೊಟ್ಯಾಸಿಯಮ್ ಮತ್ತು ಕಬ್ಬಿಣವಿದೆ, ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಮಾತ್ರವಲ್ಲ ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹ ಸಹಾಯಕವಾಗಿದೆ. ಆದ್ದರಿಂದ ನಿತ್ಯ ಖಾಲಿ ಹೊಟ್ಟೆಯಲ್ಲಿ ಅರಿಶಿನ ಚಹಾವನ್ನು ಕುಡಿಯಲು ಪ್ರಯತ್ನಿಸಿ.

ಇದನ್ನೂ ಓದಿ- Weight Loss: ವ್ಯಾಯಾಮದ ಅಗತ್ಯವಿಲ್ಲ, ತ್ವರಿತವಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಈ ಎಣ್ಣೆ

ಅರಿಶಿನದ ಚಹಾ ತಯಾರಿಸುವುದು ಹೇಗೆ?
ತೂಕನಷ್ಟಕ್ಕೆ ಸಹಾಯಕವಾದ ಅರಿಶಿನ ಚಹಾ ತಯಾರಿಸಲು ಬೇಕಾಗುವ ಪದಾರ್ಥಗಳು: ಒಂದು ಕಪ್ ನೀರು, ಒಂದು ಸಣ್ಣ ಅರಿಶಿನದ ಕೊಂಬು ಅಥವಾ ಅರಿಶಿನ ಪುಡಿ, ಜೀರಿಗೆ.

ಚಹಾವನ್ನು ತಯಾರಿಸಲು ಮೊದಲು ಒಂದು ಕಪ್ ನೀರನ್ನು ಕುಡಿಯಲು ಇಡಿ. ನೀರು ಚೆನ್ನಾಗಿ ಕುದ್ದ ಬಳಿಕ ತುರಿದ ಅರಿಶಿನದ ಕೊಂಬು ಅಥವಾ ಅರ್ಧ ಚಮಚದಷ್ಟು ಅರಿಶಿನ ಪುಡಿ ಮತ್ತು ಸ್ವಲ್ಪ ಜೀರಿಗೆಯನ್ನು ಸೇರಿಸಿ ಮತ್ತೆ ಕುದಿಯಲು ಬಿಡಿ. ಅದು ಚೆನ್ನಾಗಿ ಕುದ್ದ ಬಳಿಕ ಸೋಸಿ ಅದನ್ನು ಸೇವಿಸಿ.

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. Zee ಮೀಡಿಯಾ ಇವುಗಳನ್ನು ದೃಢೀಕರಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News