ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಸವಿದರೆ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು

Fennel Milk Benefits: ಹಾಲು ಪರಿಪೂರ್ಣ ಆಹಾರ. ಉತ್ತಮ ಆರೋಗ್ಯಕ್ಕೆ ನಿತ್ಯ ಒಂದು ಲೋಟ ಹಾಲು ಸೇವಿಸುವುದು ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಅಂತೆಯೇ ಊಟವಾದ ಬಳಿಕ ಜೀರ್ಣಕ್ರಿಯೆ ಚೆನ್ನಾಗಿ ಆಗಲೆಂದು ಕೆಲವರು ಸೋಂಪಿನ ಕಾಳುಗಳನ್ನು ಸೇವಿಸುತ್ತಾರೆ. ಆದರೆ, ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Dec 7, 2022, 09:13 AM IST
  • ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಹಾಲು ಅತ್ಯಗತ್ಯ.
  • ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳು ಸೋಂಪಿನಲ್ಲಿ ಹೇರಳವಾಗಿವೆ.
  • ಇವೆರಡನ್ನೂ ಒಟ್ಟಿಗೆ ಬೆರೆಸಿ ಕುಡಿಯುವುದರಿಂದ ಯಾವ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯಿರಿ...
ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಸವಿದರೆ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು  title=
Fennel Milk Benefits

Fennel Milk Benefits: ಸೂಪರ್ ಫುಡ್ ಎಂದು ಪರಿಗಣಿಸಲಾಗುವ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಫೆನ್ನೆಲ್‌ನಲ್ಲಿ ಎಂದರೆ ಸೋಂಪಿನಲ್ಲಿ  ತಾಮ್ರ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ಹೇರಳವಾಗಿವೆ. ಹಾಗಾಗಿಯೇ, ಹಾಲು ಮತ್ತು ಸೋಂಪು ಎರಡೂ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗಲಿವೆ. 

ವಾಸ್ತವವಾಗಿ, ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಹಾಲು ಅತ್ಯಗತ್ಯ. ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳು ಸೋಂಪಿನಲ್ಲಿ ಹೇರಳವಾಗಿವೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಕುಡಿಯುವುದರಿಂದ ಯಾವ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯಿರಿ...

ಬಾಯಿಯ ದುರ್ವಾಸನೆಯಿಂದ ಮುಕ್ತಿ:
ನಮ್ಮಲ್ಲಿ ಹಲವರು ಚೆನ್ನಾಗಿ ಬ್ರೇಶ್ ಮಾಡಿದರೂ, ಒರಲ್ ಹೆಲ್ತ್ ಬಗ್ಗೆ ಹೆಚ್ಚು ಗಮನಹರಿಸಿದರೂ ಕೂಡ ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಹೊರಬರಲಾಗದೆ ಪರಿತಪಿಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಹಾಲಿನೊಂದಿಗೆ ಫೆನ್ನಲ್ ಬೆರೆಸಿ ಸೇವಿಸುವುದರಿಂದ ಇದರಿಂದ ಪರಿಹಾರ ಪಡೆಯಬಹುದು.

ಇದನ್ನೂ ಓದಿ-  Sweet Potatoes For Weight Loss: ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ಈ ರೀತಿ ಸೇವಿಸಿ

ಜ್ಞಾಪಕಶಕ್ತಿ ಚುತುಕುಗೊಳ್ಳಲು:
ಕೆಲವರು ತಮ್ಮ ಮಕ್ಕಳಿಗೆ ಬಾದಾಮಿ ತಿನ್ನಿಸಿದರು, ಎಷ್ಟೇ ಧ್ಯಾನ ಮಾಡಿಸಿದರೂ ಕೂಡ ಅವರ ನೆನಪಿನ ಶಕ್ತಿ ಚುರುಕಾಗಿಲ್ಲ ಎಂದು ದೂರುತ್ತಾರೆ. ಅಂತಹವರು ತಮ್ಮ ಮಕ್ಕಳಿಗೆ ಹಾಲಿನೊಂದಿಗೆ ಸೋಂಪನ್ನು ಮಿಕ್ಸ್ ಮಾಡಿ ಕುಡಿಯಲು ನೀಡಿ. ಇದರಿಂದ ಅವರ ಜ್ಞಾಪಕಶಕ್ತಿ ಚುರುಕಾಗುತ್ತದೆ. ವಾಸ್ತವವಾಗಿ, ಫೆನ್ನೆಲ್‌ನಲ್ಲಿರುವ ಪೋಷಕಾಂಶಗಳು ಮೆದುಳನ್ನು ರಿಫ್ರೆಶ್ ಮಾಡಲು ಮತ್ತು ಅದನ್ನು ಸಕ್ರಿಯವಾಗಿಸಲು ಸಹಾಯ ಮಾಡುತ್ತದೆ. 

ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು:
ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕೂಡ ಫೆನ್ನಲ್ ಹಾಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಪಿರಿಯಡ್ಸ್ ಸಮಯದಲ್ಲಿ ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಸವಿದರೆ ಅನಿಯಮಿತ ಋತುಚಕ್ರದ ಸಮಸ್ಯೆ, ಪ್ರಿರಿಯಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಜೀರ್ಣಕ್ರಿಯೆ ಸಮಸ್ಯೆ:
ಮೊದಲೇ ತಿಳಿಸಿದಂತೆ ಫೆನ್ನಲ್‌ನಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಲ್ಲ ಹಲವು ಔಷಧೀಯ ಗುಣಗಳಿವೆ. ಹಾಗಾಗಿ, ಹಾಲಿನಲ್ಲಿ ಇದನ್ನು ಬೆರೆಸಿ ಕುಡಿಯುವುದರಿಂದ ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಪದೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Cabbage Benefits: ಎಲೆಕೋಸು ಸೇವನೆಯಿಂದ ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು

ದೃಷ್ಟಿ:
ಫೆನ್ನೆಲ್‌ನಲ್ಲಿರುವ ಪೋಷಕಾಂಶಗಳು ಕಣ್ಣುಗಳಿಗೆ ಪ್ರಯೋಜನಕಾರಿ ಆಗಿವೆ. ಹಾಗಾಗಿ ಸೋಂಪಿನ ಸೇವನೆಯಿಂದ ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಮಾತ್ರವಲ್ಲ ಇದು ದೃಷ್ಟಿಯನ್ನು ಹೆಚ್ಚಿಸುತ್ತದೆ. ಉತ್ತಮ ಕಣ್ಣಿನ ಆರೋಗ್ಯಕ್ಕೆ ಸೋಂಪನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಉತ್ತಮ ಎನ್ನಲಾಗುವುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News