Health Tips: ಒಂದೇ ವಾರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಲು ಈ ತರಕಾರಿಯ ಚಹಾ ಕುಡಿಯಿರಿ

Health Tips: ಹಾಗಲಕಾಯಿ ಸಾಮಾನ್ಯವಾಗಿ ನಮ್ಮ ನೆಚ್ಚಿನ ತರಕಾರಿಗಳ ಪಟ್ಟಿಯಲ್ಲಿ ಕಂಡುಬರುತ್ತದೆ. ಇದು ನಮ್ಮ ಆರೋಗ್ಯಕ್ಕೆ ನಂಬಲಾಗದಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದು ಅಧರಕ್ಕೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನು ನೀಡುವ ತರಕಾರಿಯಾಗಿದೆ.

Written by - Bhavishya Shetty | Last Updated : Feb 27, 2023, 06:33 PM IST
    • ಹಾಗಲಕಾಯಿ ಸಾಮಾನ್ಯವಾಗಿ ನಮ್ಮ ನೆಚ್ಚಿನ ತರಕಾರಿಗಳ ಪಟ್ಟಿಯಲ್ಲಿ ಕಂಡುಬರುತ್ತದೆ.
    • ಇದು ನಮ್ಮ ಆರೋಗ್ಯಕ್ಕೆ ನಂಬಲಾಗದಷ್ಟು ಪ್ರಯೋಜನಗಳನ್ನು ನೀಡುತ್ತದೆ.
    • ಇದು ಅಧರಕ್ಕೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನು ನೀಡುವ ತರಕಾರಿಯಾಗಿದೆ.
Health Tips: ಒಂದೇ ವಾರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಲು ಈ ತರಕಾರಿಯ ಚಹಾ ಕುಡಿಯಿರಿ title=
Bitter gourd

Health Tips: ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಹಾಗಲಕಾಯಿಯನ್ನು ತಿನ್ನುವುದರಿಂದ ನಿಮ್ಮ ಶ್ರಮ ಶೀಘ್ರವೇ ಯಶಸ್ವಿಯಾಗುವಂತೆ ಮಾಡುತ್ತದೆ. ಇನ್ನು ಹಾಗಲಕಾಯಿ ಕಷಾಯ ಅಥವಾ ಚಹಾ ಮಾಡಿ ಕುಡಿದರೆ ರಕ್ತನಾಳದಲ್ಲಿರುವ ಕೊಲೆಸ್ಟ್ರಾಲ್ ಶೀಘ್ರವೇ ಕಡಿಮೆಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಇದನ್ನೂ ಓದಿ:  Viral Video: ಪುಟ್ಟ ಪೋರನ ಬೆನ್ನಮೇಲೆ ಮೊಸಳೆ… ಹೊತ್ತುಕೊಂಡು ಸಾಗುತ್ತಿದ್ದಂತೆ ಆಗಿದ್ದೇನು…? ಈ ವಿಡಿಯೋ ನೋಡಿ!

ಹಾಗಲಕಾಯಿ ಸಾಮಾನ್ಯವಾಗಿ ನಮ್ಮ ನೆಚ್ಚಿನ ತರಕಾರಿಗಳ ಪಟ್ಟಿಯಲ್ಲಿ ಕಂಡುಬರುತ್ತದೆ. ಇದು ನಮ್ಮ ಆರೋಗ್ಯಕ್ಕೆ ನಂಬಲಾಗದಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದು ಅಧರಕ್ಕೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನು ನೀಡುವ ತರಕಾರಿಯಾಗಿದೆ.

ಈ ತರಕಾರಿಯನ್ನು ಎಷ್ಟು ವಿಶೇಷವಾಗಿ ಬೇಯಿಸಲಾಗುತ್ತದೆ ಅಥವಾ ಈ ತರಕಾರಿಯ ಕಹಿ ರುಚಿಯನ್ನು ಮರೆಮಾಡಲು ಎಷ್ಟು ಮಸಾಲೆಗಳನ್ನು ಬಳಸಲಾಗುತ್ತದೆ ಎಂಬುದು ಮುಖ್ಯವಲ್ಲ, ಆ ಕಹಿಯಿಂದಲೇ ನಮ್ಮ ಆರೋಗ್ಯ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದು ನಿಮಗೆ ತಿಳಿದಿದೆಯೇ?

ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಅದರ ಸಹಾಯದಿಂದ ದೇಹದ ಆಂತರಿಕ ಶುದ್ಧೀಕರಣವನ್ನು ಮಾಡಲಾಗುತ್ತದೆ. ಈ ಮೂಲಕ ನಾವು ಅನೇಕ ರೋಗಗಳಿಂದ ರಕ್ಷಿಸಲ್ಪಡುತ್ತೇವೆ. ಆದರೆ ಇದು ತುಂಬಾ ಕಹಿಯಾಗಿದ್ದು, ಕುಡಿಯುವುದು ಅಷ್ಟೊಂದು ಸುಲಭವಲ್ಲ.

ಹಾಗಲಕಾಯಿಯ ಲಾಭವನ್ನು ನೀವು ಇನ್ನೊಂದು ರೀತಿಯಲ್ಲಿ ಪಡೆಯಲು ಬಯಸಿದರೆ, ಅದರ ಸಹಾಯದಿಂದ ಅದ್ಭುತವಾದ ಗಿಡಮೂಲಿಕೆ ಚಹಾವನ್ನು ತಯಾರಿಸಬಹುದು. ಈ ಪಾನೀಯವು ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ಅದರ ಪ್ರಯೋಜನಗಳು ಅಪಾರವಾಗಿವೆ.

ಹಾಗಲಕಾಯಿ ಟೀ ತಯಾರಿಸುವುದು ಹೇಗೆ?

ಹಾಗಲಕಾಯಿ ಚಹಾವು ಒಂದು ಗಿಡಮೂಲಿಕೆ ಪಾನೀಯವಾಗಿದ್ದು, ಹಾಗಲಕಾಯಿಯ ಒಣಗಿದ ಹೋಳುಗಳನ್ನು ನೀರಿನಲ್ಲಿ ನೆನೆಸಿ ತಯಾರಿಸಲಾಗುತ್ತದೆ. ಇದನ್ನು ಔಷಧೀಯ ಚಹಾವಾಗಿ ಮಾರಾಟ ಮಾಡಲಾಗುತ್ತದೆ. ಹಾಗಲಕಾಯಿ ಚಹಾವು ಪುಡಿ ಅಥವಾ ಸಾರ ರೂಪದಲ್ಲಿ ಲಭ್ಯವಿದೆ. ಇದನ್ನು ಗೋಹ್ಯಾ ಟೀ ಎಂದೂ ಕರೆಯುತ್ತಾರೆ ಮತ್ತು ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹಾಗಲಕಾಯಿಯ ರಸಕ್ಕಿಂತ ಭಿನ್ನವಾಗಿ, ಹಾಗಲಕಾಯಿ ಚಹಾವನ್ನು ಅದರ ಎಲೆಗಳು, ಹಣ್ಣುಗಳು ಮತ್ತು ಬೀಜಗಳನ್ನು ಬಳಸಿ ಏಕಕಾಲದಲ್ಲಿ ತಯಾರಿಸಬಹುದು.

ಇದನ್ನೂ ಓದಿ: IND vs AUS: ಟೆಸ್ಟ್’ನಲ್ಲಿ ನಿರಂತರ ಸೋಲು: ಈ ಆಟಗಾರನ ವಿರುದ್ಧವೇ ತಿರುಗಿಬಿದ್ದ ಆಸೀಸ್ ಅನುಭವಿ

ಹಾಗಲಕಾಯಿ ಚಹಾದಲ್ಲಿ ಉರಿಯೂತ ನಿವಾರಕ ಗುಣಗಳಿದ್ದು, ಇದರ ಸಹಾಯದಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ನೀವು ದಿನಕ್ಕೆ ಎರಡು ಬಾರಿ ಈ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News