Magic Tea For Weight Loss: ಪ್ರಸ್ತುತ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ಒಬೆಸಿಟಿ, ಬೊಜ್ಜು. ಅತಿಯಾದ ಬೊಜ್ಜು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅತಿಯಾದ ತೂಕ ಹೆಚ್ಚಳವು ಹಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿಯೇ, ತೂಕ ಇಳಿಸಿಕೊಳ್ಳಲು ಜನರು ಯೋಗ, ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ ಹೀಗೆ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ವಿಪರ್ಯಾಸವೆಂದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಗಮನಾರ್ಹ ಪರಿಣಾಮ ಗೋಚರಿಸದೆ ಪರಿತಪಿಸುತ್ತಾರೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಮಸಾಲೆ ಪದಾರ್ಥಗಳಿಂದ ನೀವು ಸುಲಭವಾಗಿ ತೂಕ ಇಳಿಸಬಹುದು.
ವಾಸ್ತವವಾಗಿ, ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಎಣ್ಣೆಯುಕ್ತ ಆಹಾರಗಳ ಜೊತೆಗೆ ಮೊದಲು ಟೀ, ಕಾಫಿ ಸೇವನೆಯನ್ನು ಕಡಿಮೆ ಮಾಡುತ್ತೇವೆ. ಕೆಲವರಂತೂ ಟೀ, ಕಾಫಿಯನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಮಸಾಲೆ ಪದಾರ್ಥಗಳಿಂದ ತಯಾರಿಸಬಹುದಾದ ಚಹಾದಿಂದ ಸುಲಭವಾಗಿ ನೈಸರ್ಗಿಕವಾಗಿ ತೂಕ ಇಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಆ ಮಸಾಲೆ ಪದಾರ್ಥಗಳು ಸೋಂಪು ಮತ್ತು ಜೀರಿಗೆ. ಸಾಮಾನ್ಯವಾಗಿ ಒಗ್ಗರಣೆ ಹಾಕುವಾಗ ತಪ್ಪದೇ ಜೀರಿಗೆ ಬಳಸುತ್ತೇವೆ. ಕೆಲವು ಆಹಾರಗಳಲ್ಲಿ ಮತ್ತು ಊಟದ ಬಳಿಕ ಸೋಂಪು ಸೇವಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ, ಇವೆರಡೂ ಮಸಾಲೆಗಳನ್ನು ಬಳಸುವುದರಿಂದ ನೀವು ನೈಸರ್ಗಿಕವಾಗಿ ತೂಕ ಕಡಿಮೆ ಮಾಡಬಹುದು.
ಸೋಂಪು ಮತ್ತು ಜೀರಿಗೆ ಎರಡೂ ಮಸಾಲೆ ಪದಾರ್ಥಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳಲ್ಲಿ ಉತ್ತಮ ಪ್ರಮಾಣದ ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಫೈಬರ್ಗಳು ಕೂಡ ಕಂಡು ಬರುತ್ತವೆ. ಈ ಮಸಾಲೆಗಳನ್ನು ಬಳಸಿ ತಯಾರಿಸಲಾದ ಮ್ಯಾಜಿಕ್ ಟೀ ಸೇವನೆಯಿಂದ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಇದನ್ನೂ ಓದಿ- Weight Loss: ತೂಕ ಇಳಿಕೆಗೆ ಮಧ್ಯಾಹ್ನದ ಊಟದಲ್ಲಿರಲಿ ಈ ಮೂರು ಪದಾರ್ಥಗಳು
ಮ್ಯಾಜಿಕ್ ಟೀ ತಯಾರಿಸುವುದು ಹೇಗೆ?
ತೂಕ ಇಳಿಕೆಗಾಗಿ ಮ್ಯಾಜಿಕ್ ಟೀ ತಯಾರಿಸಲು ಮೊದಲು ಅರ್ಧ ಚಮಚ ಸೋಂಪು ಮತ್ತು ಅರ್ಧ ಚಮಚ ಜೀರಿಗೆಯನ್ನು ತೆಗೆದುಕೊಳ್ಳಿ. ಅವೆರಡನ್ನೂ ಒಟ್ಟಿಗೆ ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಆ ನೀರನ್ನು ಚೆನ್ನಾಗಿ ಕುದಿಸಿ, ಫಿಲ್ಟರ್ ಮಾಡಿ ಕುಡಿಯಿರಿ.
ಇದನ್ನೂ ಓದಿ- Belly Fat Reduce Tips: ಒಂದೇ ವಾರದಲ್ಲಿ ಆರೋಗ್ಯಕರವಾಗಿ ಸೊಂಟವನ್ನು ತೆಳ್ಳಗಾಗಿಸಲು ಪರಂಗಿಯನ್ನು ಈ ರೀತಿ ಸೇವಿಸಿ
ಸೋಂಪು-ಜೀರಿಗೆಯಿಂದ ತಯಾರಿಸಿದ ಚಹಾವನ್ನು ಯಾವ ಸಮಯದಲ್ಲಿ ಸೇವಿಸುವುದು ಉತ್ತಮ?
ನೀವು ತೂಕ ಇಳಿಕೆಗಾಗಿ ಈ ಸೋಂಪು-ಜೀರಿಗೆಯಿಂದ ತಯಾರಿಸಿದ ಮ್ಯಾಜಿಕ್ ಚಹಾವನ್ನು ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಚಹಾವು ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಹೋಗುತ್ತವೆ. ನಿತ್ಯ ಈ ಚಹಾ ಸೇವನೆಯಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸಲಿದ್ದು, ದೇಹದ ಬೊಜ್ಜು ಕಡಿಮೆ ಆಗುವುದರ ಜೊತೆಗೆ ಇದು ನಿಮ್ಮನ್ನು ಅನೇಕ ರೋಗಗಳಿಂದಲೂ ದೂರವಿರಿಸುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೆಲವು ಮನೆಮದ್ದುಗಳನ್ನು ಆಧರಿಸಿವೆ. ಇದನ್ನು ಪ್ರಯತ್ನಿಸುವ ಮೊದಲು ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.