Coconut Water: ದಿನಕ್ಕೆ ಒಮ್ಮೆಯಾದರೂ ಎಳನೀರು ಸೇವಿಸಿದರೆ ಸಿಗುತ್ತೆ ಈ 5 ಪ್ರಯೋಜನ

Coconut Water: ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ನೀವು ಕೇಳಿರಬಹುದು. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಳನೀರನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಇದರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?  

Written by - Yashaswini V | Last Updated : Feb 9, 2022, 12:56 PM IST
  • ಪ್ರತಿದಿನ ಎಳನೀರು ಸೇವನೆ ಉತ್ತಮ ಆರೋಗ್ಯ ನೀಡುತ್ತದೆ
  • ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ
  • ಎಳನೀರು ಸೇವನೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ
Coconut Water: ದಿನಕ್ಕೆ ಒಮ್ಮೆಯಾದರೂ ಎಳನೀರು ಸೇವಿಸಿದರೆ ಸಿಗುತ್ತೆ ಈ 5 ಪ್ರಯೋಜನ title=
Coconut Water Benefits

Coconut Water: ಇನ್ನೇನು ಕೆಲವೇ ವಾರಗಳಲ್ಲಿ ಬೇಸಿಗೆ ಕಾಲ ಆರಂಭವಾಗಲಿದೆ, ಈ ಋತುವಿನಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ನೀರಲ್ಲದೆ ಹಲವು ಬಗೆಯ ಹಣ್ಣಿನ ಜ್ಯೂಸ್ ಗಳನ್ನು ಕುಡಿಯಲು ಇಚ್ಚಿಸುತ್ತಾರೆ. ಈ ಪ್ರವಾಸದಲ್ಲಿ ಅನೇಕ ಜನರು ತೆಂಗಿನ ನೀರನ್ನು ತುಂಬಾ ಇಷ್ಟಪಡುತ್ತಾರೆ. ಎಳನೀರನ್ನು ನಿತ್ಯ ಕುಡಿಯುವುದರಿಂದ ಹಲವು ಆರೋಗ್ಯಕರ ಪಯೋಜನಗಳಿವೆ. 

ಎಳನೀರು ಸೇವನೆಯಿಂದ ಸಿಗುವ 5 ಪ್ರಯೋಜನಗಳಿವು:
ಬಾಯಾರಿಕೆ ಆದಾಗ ಎಳನೀರನ್ನು ಕುಡಿಯುವುದು ಉತ್ತಮ ಮತ್ತು ಆರೋಗ್ಯಕರ (Coconut Water Benefits) ಆಯ್ಕೆಯಾಗಿದೆ. ಏಕೆಂದರೆ ಇದು ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಕಡಿಮೆ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದಲ್ಲದೆ, ಎಲೆಕ್ಟ್ರೋಲೈಟ್ಗಳು, ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ಗಳು ಸಹ ಹೇರಳವಾಗಿ ಕಂಡುಬರುತ್ತವೆ. ಎಳನೀರು ಕುಡಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳನ್ನು ತಿಳಿಯೋಣ.

1. ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ:
ಎಳನೀರನ್ನು (Coconut Water) ಕುಡಿಯುವುದು ನಿಮ್ಮನ್ನು ಹೈಡ್ರೇಟ್ ಮಾಡಲು ಆರೋಗ್ಯಕರ ಮಾರ್ಗವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದು ಬೆವರುವಿಕೆಯಿಂದಾಗಿ ದೇಹದಲ್ಲಿ ನೀರಿನ ಕೊರತೆ ಆಗುವುದನ್ನು ಅನುಮತಿಸುವುದಿಲ್ಲ.

ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ಈ 8 ವಸ್ತುಗಳನ್ನು ತಮ್ಮ ಡಯೆಟ್ ನಲ್ಲಿ ಸೇರಿಸಿಕೊಂಡರೆ ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ

2. ಕಡಿಮೆ ಕ್ಯಾಲೋರಿಗಳು:
ಎಳನೀರು ಇತರ ಹಣ್ಣಿನ ರಸಗಳಿಗಿಂತ ಕಡಿಮೆ ಸಕ್ಕರೆ, ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ, ಆದ್ದರಿಂದ ಇದು ದೇಹಕ್ಕೆ ಹಾನಿ ಮಾಡುವುದಿಲ್ಲ.

3. ಕೊಲೆಸ್ಟ್ರಾಲ್ ಮುಕ್ತ ಆಹಾರ:
ಎಳನೀರಿನಲ್ಲಿ 94 ಪ್ರತಿಶತದಷ್ಟು ನೀರಿನ ಅಂಶವಿದೆ, ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತ ಪಾನೀಯವಾಗಿದೆ, ಇದರ ಹೊರತಾಗಿ ತೆಂಗಿನಕಾಯಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

4. ಚರ್ಮವು ಆರೋಗ್ಯಕರವಾಗಿರುತ್ತದೆ:
ಎಳನೀರು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದನ್ನು ಕುಡಿಯುವುದರಿಂದ ಉತ್ಕರ್ಷಣ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ.
 
ಇದನ್ನೂ ಓದಿ- Weight Loss: ತೂಕ ಇಳಿಸಲು ದಕ್ಷಿಣ ಭಾರತದ ಆಹಾರ ಅತ್ಯುತ್ತಮ ಆಯ್ಕೆ

5. ಮೂತ್ರಪಿಂಡಗಳಿಗೆ ಪ್ರಯೋಜನಕಾರಿ:
ಎಳನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ ಮತ್ತು ನಿಮ್ಮ ದೇಹದ ಕೊಳೆಯೂ ಹೊರಬರುತ್ತದೆ. ಇದರಿಂದಾಗಿ ಮೂತ್ರದಿಂದ ಪೊಟ್ಯಾಸಿಯಮ್, ಕ್ಲೋರೈಡ್ ಮತ್ತು ಸಿಟ್ರೇಟ್ ಹೊರಬರುತ್ತದೆ, ಇದು ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News