ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?

ಖಿನ್ನತೆ ಮತ್ತು ಆತಂಕಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತು ನಂತರ ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿರಬಹುದು. ಪ್ರಸವದ ನಂತರದ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಗಂಭೀರ ಮಾನಸಿಕ ಸಮಸ್ಯೆಯಾಗಿದೆ. 

Written by - Chetana Devarmani | Last Updated : Aug 3, 2022, 06:00 PM IST
  • ಖಿನ್ನತೆ ಮತ್ತು ಆತಂಕಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತು ನಂತರ ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿರಬಹುದು.
  • ಪ್ರಸವದ ನಂತರದ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಗಂಭೀರ ಮಾನಸಿಕ ಸಮಸ್ಯೆಯಾಗಿದೆ.
  • ದುಃಖ, ನಿಷ್ಪ್ರಯೋಜಕತೆ ಮತ್ತು ಹತಾಶೆಯಂತಹ ನಿರಂತರ ಮತ್ತು ಆತಂಕದಂತಹ ಸನ್ನಿವೇಶಗಳು ಅಥವಾ ಮನಸ್ಥಿತಿಗಳು ತಾಯಂದಿರಲ್ಲಿ ಕಾಣಿಸಿಕೊಳ್ಳುತ್ತದೆ.
ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?  title=
ತಾಯಂದಿರು

ಖಿನ್ನತೆ ಮತ್ತು ಆತಂಕಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತು ನಂತರ ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿರಬಹುದು. ಪ್ರಸವದ ನಂತರದ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಗಂಭೀರ ಮಾನಸಿಕ ಸಮಸ್ಯೆಯಾಗಿದೆ. ದುಃಖ, ನಿಷ್ಪ್ರಯೋಜಕತೆ ಮತ್ತು ಹತಾಶೆಯಂತಹ ನಿರಂತರ  ಮತ್ತು ಆತಂಕದಂತಹ ಸನ್ನಿವೇಶಗಳು ಅಥವಾ ಮನಸ್ಥಿತಿಗಳು ತಾಯಂದಿರಲ್ಲಿ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯ ನಂತರ ತಾಯಿಯು ಇಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ಅದು ತನ್ನ ಮಗುವಿನ ಅಗತ್ಯತೆಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ: Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್

ಹೆರಿಗೆಯ ನಂತರ ನಿಮ್ಮ ಮಾನಸಿಕ ಆರೋಗ್ಯ ಮತ್ತು ಹಾಲುಣಿಸುವುದರ ಮಧ್ಯೆ ನಿಕಟ ಸಂಬಂಧವಿರುತ್ತದೆ. ಖಿನ್ನತೆ ಅಥವಾ ಆತಂಕವು ಸ್ತನ್ಯಪಾನದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುವ ಸಾಧ್ಯತೆಗಳಿವೆ. ಇದರ ಪರಿಣಾಮ ಪ್ರಸವಾನಂತರದಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯು ತಾಯಂದಿರು ಮಗುವಿನೊಂದಿಗೆ ಬಾಂಧವ್ಯವನ್ನು ಕಷ್ಟಕರವಾದ ರೀತಿಯಲ್ಲಿ ಎದುರಿಸುತ್ತಾರೆ. ಇದು ಸ್ತನ್ಯಪಾನ ಮಾಡುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ತಾಯಿಯು ಸ್ತನ್ಯಪಾನವನ್ನು ಆರಂಭಿಸಲು ಅಥವಾ ಉಳಿಸಿಕೊಳ್ಳಲು ಹಲವಾರು ತೊಂದರೆಗಳನ್ನು ಎದುರಿಸಬಹುದು.

ಈ ಹಿನ್ನೆಲೆಯಲ್ಲಿ ತಾಯಂದಿರುವ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸ್ಥಿತಿಯ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಪ್ರಸವಾನಂತರ ಖಿನ್ನತೆಯ ಎಚ್ಚರಿಕೆಯ ಚಿಹ್ನೆಗಳು:

  • ಎಲ್ಲಾ ಸಂದರ್ಭದಲ್ಲಿಯೂ ಭಾವನೆಯಲ್ಲಿ ಕಡಿಮೆ ಎಂದು ಭಾಸವಾಗುವುದು
  • ನೀವು ಒಮ್ಮೆ ಆನಂದಿಸಿದ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು
  • ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆಗಳನ್ನು ಅನುಭವಿಸುವುದು, ಇದು ದೈನಂದಿನವಾಗಿರಬಹುದು
  • ನಿಮ್ಮ ಮಲಗುವ ರೀತಿಗಳು ಬದಲಾಗಿವೆ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ
  • ದುಃಖ ಮತ್ತು ಅಪರಾಧಿ ಪ್ರಜ್ಞೆ ನಿಮ್ಮಿಂದ ದೂರವಾಗುವುದಿಲ್ಲ

ನೀವು ಸ್ವಯಂ-ಹಾನಿಯ ಬಗ್ಗೆ ಯೋಚಿಸುತ್ತೀರಿ- ಮುಂದುವರಿದ ಹಂತಗಳಲ್ಲಿ ಪ್ರಸವಾನಂತರದ ಖಿನ್ನತೆಯು ತಾಯಿಗೆ ಸ್ವಯಂ-ಹಾನಿಕಾರಕ ಆಲೋಚನೆಗಳನ್ನು ತರಬಹುದಾಗಿದೆ

ಸಹಾಯ ಮತ್ತು ಚಿಕಿತ್ಸೆ ಪಡೆಯುವುದು:

ಇಂತಹ ಲಕ್ಷಣಗಳು ಕಂಡು ಬಂದು ದಿನದಿಂದ ದಿನಕ್ಕೆ ಹೆಚ್ಚಾಗಿ ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೆ, ನೀವು ವೃತ್ತಿಪರ ತಜ್ಞರ ಸಹಾಯವನ್ನು ಪಡೆಯಬೇಕಾಗುತ್ತದೆ.
ತಜ್ಞ ವೈದ್ಯರು ತಾಯಂದಿರ ಸ್ಥಿತಿಯನ್ನು ವಿಶ್ಲೇಷಿಸಲು ಆಕೆಯೊಂದಿಗೆ ಆಪ್ತ ಸಮಾಲೋಚನೆ ನಡೆಸಬಹುದು. ನಿಮ್ಮ ವೈಯಕ್ತಿಯ ಪ್ರಕರಣವನ್ನು ಅವಲಂಬಿಸಿ, ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಚರ್ಚಿಸಬಹುದು. ಪ್ರಸವಾನಂತರದ ಖಿನ್ನತೆಗೆ ಚಿಕಿತ್ಸೆಯು ಔಷಧಿಗಳನ್ನು ಒಳಗೊಂಡಿರಬಹುದು ಅಥವಾ ನೀವು ಚಿಕಿತ್ಸೆಗೆ ವೈದ್ಯರ ಬಳಿಗೆ ಹೋಗಬಹುದು. ವೈಯಕ್ತಿಕ ಅಥವಾ ಗುಂಪು ಚಿಕಿತ್ಸೆಯಂತಹ ಕೆಲವು ಚಿಕಿತ್ಸೆಗಳು ತಾಯಿಗೆ ಅಗತ್ಯವಿರುವ ಸೂಕ್ತವಾದ ಮಾನಸಿಕ ಆರೋಗ್ಯ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Cold Water ಕುಡಿಯುವುದರಿಂದ ಈ ಆರೋಗ್ಯ ಸಮಸ್ಯೆ ಫಿಕ್ಸ್‌!!

ಸ್ತನ್ಯಪಾನವು ತಾಯಿ ಮತ್ತು ಮಗುವಿಗೆ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ತಾಯಿಯು ತನ್ನ ಮಾನಸಿಕ ಆರೋಗ್ಯದ ಕಾರಣದಿಂದ ಸ್ತನ್ಯಪಾನ ಮಾಡಿಸಲು ಸಾಧ್ಯವಾಗದಿದ್ದರೆ ಅದಕ್ಕೆ ತಾನು ತಪ್ಪಿತಸ್ಥಳೆಂದು ಭಾವಿಸಬಾರದು. ಈ ವಿಚಾರದಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಲು ಮತ್ತು ಸ್ತನ್ಯಪಾನವನ್ನು ಆರಂಭಿಸುವ ಸಂಬಂಧ ತಾಯಿಯು ವೈದ್ಯರ ಸಹಾಯವನ್ನು ಪಡೆದುಕೊಳ್ಳಬಹುದು. ಒಂದು ವೇಳೆ, ಅದು ಸಾಧ್ಯವಾಗದಿದ್ದಲ್ಲಿ ಮಗುವಿಗೆ ಪರ್ಯಾಯ ಆಹಾರದ ವಿಧಾನಗಳಿಗೆ ಮೊರೆ ಹೋಗಬಹುದು.

(ಲೇಖಕರು: ಡಾ.ನಿತಿನ್ ಎಂ., ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್ ಅಂಡ್ ನಿಯೋನಾಟಲಾಜಿಸ್ಟ್, ಮದರ್ ಹುಡ್ ಹಾಸ್ಪಿಟಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News