Weight loss: ತೂಕ ಇಳಿಸಿಕೊಳ್ಳಲು ಮಲಗುವ ಮುನ್ನ ಈ ಕೆಲಸ ಮಾಡಿ

Weight loss:  ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲಾ ರೀತಿಯ ಟಿಪ್ಸ್ ಅಳವಡಿಸಿಕೊಳ್ಳುತ್ತಿರುವವರು ಮಲಗಿದ ನಂತರ ಗಮನ ಹರಿಸಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸಿ, ಅದು ಸುಲಭವಾಗಿ ತೂಕವನ್ನು ಕಡಿಮೆ ಮಾಡುತ್ತದೆ. ತಿಳಿಯೋಣ.

Written by - Yashaswini V | Last Updated : Jun 7, 2022, 07:55 AM IST
  • ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
  • ಇದರಿಂದಾಗಿ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ
  • ತ್ವರಿತವಾಗಿ ತೂಕ ಇಳಿಸಲು ಸಹಾಯವಾಗುವಂತ ಸಿಂಪಲ್ ಸಲಹೆ ಎಂದು ಎಂಬುದನ್ನು ತಿಳಿಯೋಣ...
Weight loss: ತೂಕ ಇಳಿಸಿಕೊಳ್ಳಲು ಮಲಗುವ ಮುನ್ನ ಈ ಕೆಲಸ ಮಾಡಿ title=
Weight loss tips

ತೂಕ ಇಳಿಕೆ ಸಲಹೆ: ಬದಲಾಗುತ್ತಿರುವ ಜೀವನಶೈಲಿಯಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ,  ಡಯಟ್ ಫುಡ್ ಮಾತ್ರ ಸೇವಿಸುವುದು, ಕಠಿಣ ವ್ಯಾಯಾಮ ಇತ್ಯಾದಿ ಮಾರ್ಗಗಳನ್ನು ಅನುಸರಿಸಿದರೂ ತೂಕ ಕಡಿಮೆ ಆಗುತ್ತಿಲ್ಲ ಎಂದು ಹಲವರು ದೂರುತ್ತಾರೆ. ಆದರೆ, ತೂಕ ಇಳಿಕೆ ಸಮಯದಲ್ಲಿ ಒಂದು ಸಣ್ಣ ವಿಷಯದ ಬಗ್ಗೆ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಇರುತ್ತದೆ. 

ಹೌದು, ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾದರೆ ತ್ವರಿತವಾಗಿ ತೂಕ ಇಳಿಸಲು ಸಹಾಯವಾಗುವಂತ ಸಿಂಪಲ್ ಸಲಹೆ ಎಂದು ಎಂಬುದನ್ನು ತಿಳಿಯೋಣ... 

ಇದನ್ನೂ ಓದಿ- Weight Loss Drink: ತೂಕ ಇಳಿಸಿಕೊಳ್ಳಲು ಈ ವಿಶೇಷ ಕಾಫಿ ಕುಡಿಯಿರಿ

ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಿ:
ಆರೋಗ್ಯಕರ ಜೀವನಕ್ಕಾಗಿ ನಿದ್ದೆ ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ನಿತ್ಯ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಎಲ್ಲರಿಗೂ ತಿಳಿದಿದೆ. ಅಂತೆಯೇ, ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿತ್ಯ ನಿಮ್ಮ ವಯಸ್ಸಿಗೆ ಅನುಗುಣವಾಗಿ ಸಾಕಷ್ಟು ನಿದ್ದೆ ಮಾಡುವುದರಿಂದ ತೂಕ ಕಡಿಮೆ ಮಾಡಬಹುದು. ಮಾತ್ರವಲ್ಲ, ಇದರಿಂದ ಮಾನಸಿಕವಾಗಿಯೂ ನೀವು ಶಾಂತಿಯನ್ನು ಪಡೆಯಬಹುದು. 

ಮಲಗುವ ಮುನ್ನ ಪ್ರೋಟೀನ್ ಶೇಕ್ ಕುಡಿಯುವುದು ಪ್ರಯೋಜನಕಾರಿ: 
ನಿತ್ಯ ಸಾಕಷ್ಟು ನಿದ್ದೆ ಮಾಡುವುದು ಮಾತ್ರವಲ್ಲ, ಮಲಗುವ ಮೊದಲು ದೇಹಕ್ಕೆ ಅಗತ್ಯ ಪ್ರೋಟೀನ್ ಒದಗಿಸುವುದು ಕೂಡ ಅತ್ಯಗತ್ಯ. ಮಲಗುವ ಮುನ್ನ ನೀವು ಪ್ರೋಟೀನ್ ಶೇಕ್ ಅನ್ನು ಸೇವಿಸಿದರೂ ಸಹ, ನೀವು ಅನೇಕ ದೊಡ್ಡ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರೋಟೀನ್ ಕಾರ್ಬೋಹೈಡ್ರೇಟ್‌ಗಳು ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ನಂಬಲಾಗಿದೆ, ಇದು ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಲೂ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!

ಸ್ಲೀಪ್ ಮಾಸ್ಕ್ ಧರಿಸಿ ಮಲಗಬೇಕು:
ಸ್ಲೀಪ್ ಮಾಸ್ಕ್ ಧರಿಸುವುದರಿಂದ ತೂಕ ನಷ್ಟಕ್ಕೂ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ? ಮಂದ ಬೆಳಕಿನಲ್ಲಿ ಮಲಗುವ ಜನರು 21 ಪ್ರತಿಶತದಷ್ಟು ಬೊಜ್ಜು ಹೊಂದುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬೆಳಕಿನಲ್ಲಿ ಮಲಗುವ ಜನರು ಸ್ಲೀಪ್ ಮಾಸ್ಕ್ ಧರಿಸಿ ಮಲಗುವುದು ಪ್ರಯೋಜನಕಾರಿ ಆಗಬಹುದು ಎಂದು ಹೇಳಲಾಗುತ್ತದೆ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಹಕ್ಕು ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News