Yoga For Liver Health: ಇತ್ತೀಚಿನ ದಿನಗಳಲ್ಲಿ ಜನರು ಲಿವರ್/ ಯಕೃತ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕೆಟ್ಟ ಜೀವನಶೈಲಿ, ಅನಾರೋಗ್ಯಕಾರ ಆಹಾರ ಪದ್ದತಿ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಪ್ರತಿ ದಿನ ಕೆಲವು ಯೋಗಾಸನಗಳನ್ನು ಮಾಡುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ಲಿವರ್ ಆರೋಗ್ಯಕ್ಕಾಗಿ ಪ್ರತಿ ದಿನ ಮಾಡಲೇಬೇಕಾದ ಐದು ಯೋಗಾಸನಗಳ ಬಗ್ಗೆ ತಿಳಿಯೋಣ...
ಲಿವರ್ ಆರೋಗ್ಯಕ್ಕಾಗಿ ಪ್ರತಿ ದಿನ ಮಾಡಲೇಬೇಕಾದ 5 ಯೋಗಾಸನಗಳಿವು:
1. ಧನುರಾಸನ
ಧನುರಾಸನ ಮಾಡುವುದರಿಂದ ಅದು ಯಕೃತ್ತಿನಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಪ್ರತಿದಿನ ಈ ಯೋಗಾಸನ ಮಾಡುವುದರಿಂದ ಕ್ರಮೇಣ ನಿಮ್ಮ ಯಕೃತ್ತನ್ನು ಬಲಪಡಿಸುತ್ತದೆ. ಅದರಲ್ಲೂ ಫ್ಯಾಟಿ ಲಿವರ್ ಸಮಸ್ಯೆ ಇರುವವರಿಗೆ ಈ ಆಸನ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
2. ಭುಜಂಗಾಸನ
ಪ್ರತಿ ದಿನ ನಿಮ್ಮ ದಿನಚರಿಯಲ್ಲಿ ಭುಜಂಗಾಸನವನ್ನು ರೂಢಿಸಿಕೊಳ್ಳುವುದರಿಂದ ಲಿವರ್ ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಇದರಿಂದ ಯಕೃತ್ ಸಂಬಂಧಿತ ಹಲವು ರೋಗಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಇದನ್ನೂ ಓದಿ- ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿ ತಿಂದರೆ ಈ ಕಾಯಿಲೆ ಬಳಿಯೂ ಬರಲ್ಲ
3. ನೌಕಾಸನ
ನೌಕಾಸನ- ಹೆಸರೇ ಸೂಚಿಸುವಂತೆ ಈ ಆಸನ ಮಾಡುವಾಗ ದೇಹವು ದೋಣಿಯ ಆಕಾರವನ್ನು ಪಡೆಯುತ್ತದೆ. ಈ ಆಸನದಿಂದ ಹಲವು ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಅದರಲ್ಲೂ, ಯಕೃತ್ ಫಿಟ್ ಆಗಿರಲು ಈ ಆಸನವು ತುಂಬಾ ಪ್ರಯೋಜನಕಾರಿ ಆಗಿದೆ.
4. ಕಪಾಲಭಾತಿ
ಕಪಾಲಭಾತಿ ಅಭ್ಯಾಸ ಮಾಡುವುದರಿಂದ ಉಸಿರಾಟದ ಸಮಸ್ಯೆ, ಉದರ ಸಂಬಂಧಿತ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದರಬಹುದು. ಆದರೆ, ನಿಯಮಿತವಾಗಿ ಕಪಾಲಭಾತಿಯನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಯಕೃತ್ತು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರುತ್ತದೆ.
ಇದನ್ನೂ ಓದಿ- ಮಾನ್ಸೂನ್ ಸಮಯದಲ್ಲಿ ಮಧುಮೇಹವನ್ನು ನಿರ್ವಹಿಸಲು ಸಲಹೆಗಳು
5. ಅನುಲೋಮ್-ವಿಲೋಮ್ ಆಸನ
ಪ್ರತಿ ನಿತ್ಯ ಅನುಲೋಮ್-ವಿಲೋಮ್ ಆಸನ ಮಾಡುವುದರಿಂದ ಇದು ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಮಾತ್ರವಲ್ಲ, ಯಕೃತ್ತಿಗೆ ಸಾಕಷ್ಟು ಪೋಷಣೆ ಮತ್ತು ಆಮ್ಲಜನಕವನ್ನು ನೀಡಲು ಕೂಡ ಇದನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ. ನಿಮಗೆ ಈಗಾಗಲೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಯೋಗಾಸನವನ್ನು ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ