ನವದೆಹಲಿ : ಮಳೆಗಾಲವನ್ನು ಇಷ್ಟಪಡದವರು ಬಹಳ ಕಡಿಮೆ. ಮಳೆ ಬಿಸಿಲ ಝಳಕ್ಕೆ ತಂಪೆರೆಯುತ್ತದೆ. ಎಲ್ಲೆಡೆ ಹಸಿರು ಕಂಗೊಳಿಸುತ್ತದೆ. ಮಳೆ ಬರುತ್ತಿರುವಾಗ ಬಿಸಿ ಬಿಸಿ ಚಹಾದೊಂದಿಗೆ ಕರಿದ ತಿಂಡಿ ಇದ್ದರೆ ಮತ್ತೇನೂ ಬೇಡ. ಆದರೆ ಮಳೆಗಾಲದಲ್ಲಿ (Rainy Season) ಆಹಾರ ಸೇವಿಸುವಾಗ ಕೆಲವೊನದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಜೀರ್ಣಕ್ರಿಯೆಯ (Digestion) ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ, ಮಳೆಗಾಲದಲ್ಲಿ ಯಾವ ಎಣ್ಣೆಯನ್ನು ಬಳಸಬೇಕು ಎನ್ನುವುದು ತಿಳಿದುಕೊಂಡರೆ ಆಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಈ ಎಣ್ಣೆಗಳಲ್ಲಿ ಬೇಯಿಸಿದ ಆಹಾರವು ಮಳೆಗಾಲದಲ್ಲಿ ನಿಮ್ಮನ್ನು ಫಿಟ್ ಆಗಿರಿಸುತ್ತದೆ:
1. ಸಾಸಿವೆ ಎಣ್ಣೆ:
ಈ ಎಣ್ಣೆಯನ್ನು ನಮ್ಮ ದೇಶದ ಬಹುತೇಕ ಮನೆಗಳಲ್ಲಿ ಅಡುಗೆಗೆ ಬಳಸಲಾಗುತ್ತದೆ. ಸಾಸಿವೆ ಎಣ್ಣೆ (Mustard Oil) ಆರೋಗ್ಯಕ್ಕೆ ಬಹಳ ಸಹಕಾರಿ. ಮಳೆಗಾಲದಲ್ಲಿ ತಾಪಮಾನವು ಕಡಿಮೆಯಾಗಿರುತ್ತದೆ. ವಾತಾವರಣವು ತಂಪಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಉಷ್ಣ ಪ್ರವೃತಿಯನ್ನು ಹೊಂದಿರುವ ಸಾಸಿವೆ ಎಣ್ಣೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯು ಅಲರ್ಜಿಯಿಂದ (Allergy) ರಕ್ಷಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ : Buttermilk for kids : ಬಲಾಢ್ಯ ಮೂಳೆಗಳಿಗಾಗಿ ಮಕ್ಕಳಿಗೆ ನಿತ್ಯ ನೀಡಿ ಮಜ್ಜಿಗೆ
2. ಎಳ್ಳೆಣ್ಣೆ :
ಎಳ್ಳೆಣ್ಣೆ (Sesame oil) ಕೂಡ ಮಳೆಗಾಲದಲ್ಲಿ ಅಡುಗೆ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ಅನೇಕ ರೀತಿಯ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದರೂ ಎಳ್ಳೆಣ್ಣೆ ಪ್ರಯೋಜನಕಾರಿಯಾಗಿದೆ. ಇದಲ್ಲದೇ, ಎಳ್ಳೆಣ್ಣೆ ಕ್ಯಾನ್ಸರ್ (Cancer), ರಕ್ತಹೀನತೆ ಮುಂತಾದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.
3. ಆಲಿವ್ ಎಣ್ಣೆ:
ಆಲಿವ್ ಎಣ್ಣೆ (Olive oil) ಬಳಕೆ ಕೂಡಾ ಮಳೆಗಾಲಕ್ಕೆ ಒಳ್ಳೆಯದು .. ಅಧಿಕ ರಕ್ತದೊತ್ತಡದಿಂದ (Blood pressure) ಬಳಲುತ್ತಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿ. ಇದರೊಂದಿಗೆ, ಇದು ಮಧುಮೇಹ ರೋಗಿಗಳಿಗೆ (Diabetic)ಸಹ ಪ್ರಯೋಜನಕಾರಿಯಾಗಿದೆ. ಆಲಿವ್ ಎಣ್ಣೆಯನ್ನು ಬಳಸುವುದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು.
ಇದನ್ನೂ ಓದಿ : Benefits of Fruits : ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮಗಳು ಯಾವವು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ