ಕರೋನಾದಿಂದ ಚೇತರಿಸಿಕೊಂಡ ಮೇಲೆ ಏನು ತಿನ್ನಬೇಕು? ಯಾವ ಆಹಾರ ದೇಹಕ್ಕೆ ಒಳ್ಳೆಯದು?

ಕರೋನಾದಿಂದ ಚೇತರಿಸಿಕೊಳ್ಳುವಾಗ, ನೀವು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಇರಬೇಕು

Last Updated : Apr 27, 2021, 03:13 PM IST
  • ಕರೋನಾ ಸೋಂಕಿನಿಂದಾಗಿ ಸಧ್ಯ ದೇಶದ ಪರಸ್ಥಿತಿ ತುಂಬಾ ಕೆಟ್ಟದಾಗಿದೆ
  • ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
  • ಸೋಂಕಿನಿಂದ ಚೇತರಿಸಿಕೊಂಡವರು ಸೇವಿಸಬೇಕಾದ ಆಹಾರ
ಕರೋನಾದಿಂದ ಚೇತರಿಸಿಕೊಂಡ ಮೇಲೆ ಏನು ತಿನ್ನಬೇಕು? ಯಾವ ಆಹಾರ ದೇಹಕ್ಕೆ ಒಳ್ಳೆಯದು? title=

ಕರೋನಾ ಸೋಂಕಿನಿಂದಾಗಿ ಸಧ್ಯ ದೇಶದ ಪರಸ್ಥಿತಿ ತುಂಬಾ ಕೆಟ್ಟದಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಗುರಿಯಾಗಿ ಸಾವನ್ನಪ್ಪುತ್ತಿದ್ದಾರೆ. ಸೋಂಕಿನಂದ ಬಳಲುವವರು ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ಸೋಂಕಿನಿಂದ ಚೇತರಿಸಿಕೊಂಡವರು ಸೇವಿಸಬೇಕಾದ ಆಹಾರದ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ಇವುಗಳನ್ನು ಸೇವಿಸಿದರೆ ನೀವು ಶೀಘ್ರದಲ್ಲೇ ಕರೋನಾದಿಂದ ಗುಣಮುಖರಾಗುತ್ತೀರಿ.

ಸೋಂಕು ತಗುಲಿದ ವ್ಯಕ್ತಿಯಲ್ಲಿ ಪೌಷ್ಠಿಕಾಂಶದ ಕೊರತೆ, ತೂಕ ನಷ್ಟ(Weight Loss), ಆಯಾಸ, ತಲೆತಿರುಗುವಿಕೆ ಮತ್ತು ಜ್ವರದಿಂದ ಬಳಲುತ್ತಾರೆ. ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತದೆ.

ಇದನ್ನೂ ಓದಿ : Curry Leaf Benefits: ಕರಿಬೇವಿನ ಎಲೆಗಳಲ್ಲಿದೆ ನಿಮ್ಮ ಆರೋಗ್ಯಕ್ಕೆ ನೀಡುವ ರೋಗ ನಿರೋಧಕ ಶಕ್ತಿ: ಬಳಸುವುದು ಹೇಗೆ?

ಪ್ರೋಟೀನ್ ಮೂಲ- ಕರೋನಾ ಸೋಂಕಿನಿಂದ ಚೇತರಿಸಿಕೊಂಡ ನಂತರ, ದೇಹವನ್ನು ಮತ್ತೆ ಬಲವಾಗಿ ಮತ್ತು ಸಕ್ರಿಯವಾಗಿಸಲು ಪ್ರೋಟೀನ್(Protien) ಬಹಳ ಮುಖ್ಯ. ಇದಕ್ಕಾಗಿ ದ್ವಿದಳ ಧಾನ್ಯಗಳು, ಒಣ ಹಣ್ಣುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು ಇತ್ಯಾದಿಗಳನ್ನು ಬಳಸಬೇಕು. ಮಾಂಸಾಹಾರಿಗಳಾಗಿದ್ದಾರೆ ಮೊಟ್ಟೆ, ಕೋಳಿ ಮಾಂಸ(), ಮೀನು ಮತ್ತು ಇತರ ಮಾಂಸಗಳನ್ನ  ಸೇವಿಸಬಹುದು. ನಿಮ್ಮ ಉಪಾಹಾರ, ಊಟ ಮತ್ತು ರಾತ್ರಿ ಭೋಜನದಲ್ಲಿ ಪ್ರೋಟೀನ್ ನೀವು ಸೇವಿಸಲೇಬೇಕು.

ಇದನ್ನೂ ಓದಿ : Corona Patient Diet: Corona ರೋಗಿಗಳು ಅಪ್ಪಿ-ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ, ನಿಮ್ಮ ಡಯಟ್ ಹೀಗಿರಲಿ

ಹಸಿರು ತರಕಾರಿಗಳು ಮತ್ತು ಹಣ್ಣುಗಳು - ಕರೋನಾದಿಂದ ಚೇತರಿಸಿಕೊಳ್ಳುವಾಗ, ನೀವು ಹಸಿರು ತರಕಾರಿಗಳು(Vegetables) ಮತ್ತು ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಇರಬೇಕು. ಇದು ನಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಖನಿಜಗಳನ್ನು ನೀಡುತ್ತದೆ. ಅದರ ಮೂಲಕ ನಮ್ಮ ದೇಹವು ಮತ್ತೆ ಸಕ್ರಿಯಗೊಳ್ಳುತ್ತದೆ. ದೇಹಕ್ಕೆ ಕಾರ್ಬೋಹೈಡ್ರೇಟ್ ಸಹ ಬಹಳ ಮುಖ್ಯ, ಇದರ ಕೊರತೆಯನ್ನು ಬ್ರೆಡ್ ಇತ್ಯಾದಿಗಳಿಂದ ನಿವಾರಿಸಬಹುದು.

ಇದನ್ನೂ ಓದಿ : Home Remedies For Glowing Skin: ನಿಮ್ಮ ಫ್ರಿಡ್ಜ್ ನಲ್ಲೇ ಇರುವ ವಸ್ತುಗಳಿಂದ ಪಡೆಯಬಹುದು ಹೊಳೆಯುವ ತ್ವಚೆ

ದೇಸಿ ತುಪ್ಪದ ಒಂದು ಟೀಚಮಚ ಬಹಳ ಮುಖ್ಯ - ಚೇತರಿಕೆಯ ಸಮಯದಲ್ಲಿ ದೇಹಕ್ಕೆ ಬಹಳ ಪೌಷ್ಠಿಕ ಆಹಾರ ಬೇಕಾಗುತ್ತದೆ, ಆದರೆ ಈ ಆಹಾರ(Food)ಕ್ಕೆ ಪ್ರತಿದಿನ ಒಂದು ಟೀಸ್ಪೂನ್ ದೇಸಿ ತುಪ್ಪ ಸೇವಿಸುವುದು ಬಹಳ ಉತ್ತಮ. ಅದು ನಮ್ಮ ದೇಹಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತದೆ. ತುಪ್ಪವನ್ನು ಸೇವಿಸುವುದರಿಂದ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಇದು ನಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ.

ಇದನ್ನೂ ಓದಿ : Melon Fruit Benefits : 'ಕರಬೂಜ ಹಣ್ಣಿ'ನಲ್ಲಿದೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು!

ನಿಮ್ಮ ಆಹಾರದಲ್ಲೂ ಪಾನೀಯಗಳಿರಲಿ: ವಾಸ್ತವವಾಗಿ ಕರೋನಾ ಸೋಂಕಿನ ನಂತರ, ರೋಗಿಯಲ್ಲಿ ಒಣ ಬಾಯಿಯ ಸಮಸ್ಯೆ ಕಂಡು ಬರುತ್ತದೆ. ಇದನ್ನು ನಿವಾರಿಸಲು, ನಿಮ್ಮ ಆಹಾರದಲ್ಲಿ ಮಾವಿನ ಹಣ್ಣಿನ ಜ್ಯೂಸ್, ಪೈನಾಪಲ್ ಜ್ಯೂಸ್, ಆಪಲ್ ಜ್ಯೂಸ್ ಹೀಗೆ ಯಾವುದರರು ಹಣ್ಣಿನ ಜ್ಯೂಸ್ ಸೇವಿಸಬೇಕು. ಅಲ್ಲದೆ, ಮಜ್ಜಿಗೆ, ಮೊಸರು ಇತ್ಯಾದಿಗಳನ್ನು ಸೇವಿಸಬಹುದು. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹ ಸುಲಭವಾಗಿಸುತ್ತದೆ ಮತ್ತು ಬಾಯಿಯಲ್ಲಿ ಶುಷ್ಕತೆಯ ಸಮಸ್ಯೆಯನ್ನು ಸಹ ತೆಗೆದುಹಾಕಲಾಗುತ್ತದೆ.

ಇದನ್ನೂ ಓದಿ : Covid 19 Vaccine: ಮಹಿಳೆಯರು ಈ ಸಮಯದಲ್ಲಿ ಲಸಿಕೆ ಪಡೆಯಬಾರದೇ? ಇಲ್ಲಿದೆ ವೈರಲ್ ಮೆಸೇಜ್ ಹಿಂದಿನ ಸತ್ಯಾಸತ್ಯತೆ

ಅಲ್ಲದೆ, ದಿನಕ್ಕೆ ಐದು ಬಾರಿ ಊಟ ಮಾಡಬೇಕು ಮತ್ತು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.  ಇದರಿಂದ ನಿಮಗೆ ಆಯಾಸವಾಗುವುದಿಲ್ಲ ಮತ್ತು ನೀವು ಚಟುವಟಿಕೆಯಿಂದ ಇರಲು ಇದು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News