ಡಯಾಬಿಟಿಸ್ ರೋಗಿಗಳಿಗೆ ಈ ಸೊಪ್ಪುಗಳು ವರದಾನವಿದ್ದಂತೆ

ಡಯಾಬಿಟಿಸ್ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಮಾತ್ರವಲ್ಲ, ಶುಗರ್ ಹೆಚ್ಚಾಗಿದ್ದರೆ ಇನ್ಸುಲಿನ್ ಚುಚ್ಚುಮದ್ದನ್ನು ಸಹ ತೆಗೆದುಕೊಳ್ಳುತ್ತಾರೆ. ಆದರೆ, ಔಷಧಿಗಳಿಗಿಂತ ಕೆಲವು ನೈಸರ್ಗಿಕ ಆಹಾರ ಪದಾರ್ಥಗಳಿಂದಲೂ ಸಹ ಶುಗರ್ ಲೆವೆಲ್ ಕಡಿಮೆ ಮಾಡಬಹುದು. 

Written by - Yashaswini V | Last Updated : Aug 11, 2022, 02:09 PM IST
  • ನೈಸರ್ಗಿಕ ವಿಧಾನಗಳಿಂದಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
  • ಕೆಲವು ಸೊಪ್ಪುಗಳನ್ನು ಬಳಸುವುದರಿಂದಲೂ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಬಹುದು.
  • ಸಸ್ಯಗಳ ಸಹಾಯದಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳಲಾಗುತ್ತದೆ
ಡಯಾಬಿಟಿಸ್ ರೋಗಿಗಳಿಗೆ ಈ ಸೊಪ್ಪುಗಳು ವರದಾನವಿದ್ದಂತೆ title=
Hearbs For Diabetes

ಮಧುಮೇಹವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನ: ಮಧುಮೇಹದ ಕಾಯಿಲೆಯು ಆನುವಂಶಿಕವಾಗಿರಬಹುದು ಅಥವಾ ಬದಲಾದ ಜೀವನ ಶೈಲಿಯಿಂದಲೂ ಡಯಾಬಿಟಿಸ್ ಸಮಸ್ಯೆ ಉಂಟಾಗಬಹುದು. ಡಯಾಬಿಟಿಸ್ ರೋಗಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಡಯಾಬಿಟಿಸ್ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಮಾತ್ರವಲ್ಲ, ಶುಗರ್ ಹೆಚ್ಚಾಗಿದ್ದರೆ ಇನ್ಸುಲಿನ್ ಚುಚ್ಚುಮದ್ದನ್ನು ಸಹ ತೆಗೆದುಕೊಳ್ಳುತ್ತಾರೆ. ಆದರೆ, ಔಷಧಿಗಳಿಗಿಂತ ಕೆಲವು ನೈಸರ್ಗಿಕ ಆಹಾರ ಪದಾರ್ಥಗಳಿಂದಲೂ ಸಹ ಶುಗರ್ ಲೆವೆಲ್ ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ನೈಸರ್ಗಿಕ ವಿಧಾನಗಳಿಂದಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  ಕೆಲವು ಸೊಪ್ಪುಗಳನ್ನು ಬಳಸುವುದರಿಂದಲೂ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಬಹುದು. ಭಾರತದ ಪ್ರಸಿದ್ಧ ಆರೋಗ್ಯ ತಜ್ಞರ ಪ್ರಕಾರ,  ಹಸಿರು ಸಸ್ಯಗಳ ಸಹಾಯದಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Weight Loss: ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು

ಕರಿಬೇವಿನ ಸೊಪ್ಪು: 
ಸಾಮಾನ್ಯವಾಗಿ ದಕ್ಷಿಣ ಭಾರತದ ಪಾಕವಿಧಾನಗಳಲ್ಲಿ ಕರಿಬೇವಿನ ಸೊಪ್ಪನ್ನು ಬಳಸಲಾಗುತ್ತದೆ. ಕರಿಬೇವಿನ ಸೊಪ್ಪಿನಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಕಂಡುಬರುತ್ತವೆ. ಮಧುಮೇಹಿಗಳು ಕರಿಬೇವಿನ ಸೊಪ್ಪಿನ ಟೀ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ- ಮಂಗನ ಕಾಯಿಲೆ ಭೀತಿಯ ನಡುವೆಯೇ ಹೊಸ ವೈರಸ್‌ ಪತ್ತೆ: ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಬೇವಿನ ಸೊಪ್ಪು: 
ಬೇವು ರುಚಿಯಲ್ಲಿ ಕಹಿ ಆದರೂ ಸಹ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಆಯುರ್ವೇದ ಸಸ್ಯವು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.  ಇದರ ಎಲೆಗಳು, ಹಣ್ಣುಗಳು, ಹೂವುಗಳು, ತೊಗಟೆ ಮತ್ತು ಮರವನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಎದ್ದು ಬೇವಿನ ಸೊಪ್ಪನ್ನು ಜಗಿಯುವುದರಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News