Diabetes tips: ಶುಗರ್‌ ಲೆವಲ್‌ ಇದ್ದಕ್ಕಿದ್ದಂತೆ ಹೆಚ್ಚಾದ್ರೆ ಹತೋಟಿಗೆ ತರುತ್ತೆ ಈ ಮನೆಮದ್ದು

Diabetes tips: ರಕ್ತದಲ್ಲಿನ ಸಕ್ಕರೆಯ ಮಟ್ಟವು 200 ರಿಂದ 300 mg/dL ಗಿಂತ ಹೆಚ್ಚಿದ್ದರೆ,  ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕಂದರೆ ಇದು ಮಧುಮೇಹದ ಸೂಚನೆಯಾಗಿರಬಹುದು. ಔಷಧಿಗಳ ಹೊರತಾಗಿ ಕೆಲವು ಶುಗರ್‌ ಲೆವಲ್‌ ಕಂಟ್ರೋಲ್‌ಗೆ ಕೆಲವು ಮನೆಮದ್ದುಗಳಿವೆ.

Written by - Chetana Devarmani | Last Updated : Dec 9, 2022, 06:48 PM IST
  • ಶುಗರ್‌ ಲೆವಲ್‌ ಕಂಟ್ರೋಲ್‌ಗೆ ತರಲು ಮನೆಮದ್ದು
  • ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗುತ್ತೆ ಮಧುಮೇಹ
Diabetes tips: ಶುಗರ್‌ ಲೆವಲ್‌ ಇದ್ದಕ್ಕಿದ್ದಂತೆ ಹೆಚ್ಚಾದ್ರೆ ಹತೋಟಿಗೆ ತರುತ್ತೆ ಈ ಮನೆಮದ್ದು title=
ಮಧುಮೇಹ

Diabetes Control Tips: ಬಿಡುವಿಲ್ಲದ ವೇಳಾಪಟ್ಟಿ, ಒತ್ತಡ ಮತ್ತು ಕಳಪೆ ಜೀವನಶೈಲಿಯಿಂದಾಗಿ ಹೈ ಬಿಪಿ, ಥೈರಾಯ್ಡ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳು ಜನರನ್ನು ಸುಲಭವಾಗಿ ಆವರಿಸುತ್ತಿವೆ. ಇದ್ದಕ್ಕಿದ್ದಂತೆ ಹೆಚ್ಚಿದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಸಕ್ಕರೆ ಅಂಶವನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ದೃಷ್ಟಿ ಕಳೆದುಕೊಳ್ಳುವುದು, ಮೂತ್ರಪಿಂಡದ ಹಾನಿ ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.  

ಇದನ್ನೂ ಓದಿ : Heart Attack : ಬೇಸಿಗೆಗಿಂತ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು, ಈ ಬಗ್ಗೆ ಇರಲಿ ಜಾಗೃತಿ

ರಕ್ತದಲ್ಲಿನ ಸಕ್ಕರೆಯ ಮಟ್ಟವು 200 ರಿಂದ 300 mg/dL ಗಿಂತ ಹೆಚ್ಚಿದ್ದರೆ,  ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕಂದರೆ ಇದು ಮಧುಮೇಹದ ಸೂಚನೆಯಾಗಿರಬಹುದು. ಔಷಧಿಗಳ ಹೊರತಾಗಿ ಕೆಲವು ಶುಗರ್‌ ಲೆವಲ್‌ ಕಂಟ್ರೋಲ್‌ಗೆ ಕೆಲವು ಮನೆಮದ್ದುಗಳಿವೆ.

ನೀರನ್ನು ಕುಡಿಯಿರಿ : ತಜ್ಞರ ಪ್ರಕಾರ, ಸಕ್ಕರೆಯ ಮಟ್ಟವು ತುಂಬಾ ಹೆಚ್ಚಿದ್ದರೆ, ಅದನ್ನು ನಿಯಂತ್ರಿಸಲು ಗರಿಷ್ಠ ನೀರನ್ನು ಕುಡಿಯಬೇಕು. ನೀರನ್ನು ಕುಡಿಯುವುದರಿಂದ, ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಗ್ಲೂಕೋಸ್ ಅನ್ನು ಹೊರಹಾಕಬಹುದು. ಮಧುಮೇಹಿಗಳು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಬೇಕು.

ಹಾಗಲಕಾಯಿ : ಹಾಗಲಕಾಯಿ ಮಧುಮೇಹವನ್ನು ನಿಯಂತ್ರಿಸಲು ತುಂಬಾ ಸಹಾಯ ಮಾಡುತ್ತದೆ. ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಕುಡಿಯಿರಿ. ಇಲ್ಲವೇ ಪಲ್ಯ ಮಾಡಿ ತಿನ್ನಿ. 

ಇದನ್ನೂ ಓದಿ : Copper Water: ತಾಮ್ರದ ಲೋಟದಲ್ಲಿ ನೀರು ಕುಡಿಯುವ ಮುನ್ನ ಇದು ತಿಳಿದಿರಲಿ

ವ್ಯಾಯಾಮ : ಯಾವುದೇ ರೋಗದ ಪರಿಣಾಮಗಳನ್ನು ಕಡಿಮೆ ಮಾಡಲು ವ್ಯಾಯಾಮವು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಫಿಟ್ ಆಗಿರಲು ಸಹಕಾರಿಯಾಗುತ್ತದೆ. ಹಠಾತ್ತನೆ ಶುಗರ್ ಲೆವೆಲ್ ಹೆಚ್ಚಾದವರು ವ್ಯಾಯಾಮವನ್ನು ರೂಢಿಸಿಕೊಳ್ಳಿ.  

(Disclaimer:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News