Diabetes: ಪ್ರತಿದಿನ ಈ 5 ಮಸಾಲೆಗಳನ್ನು ಸೇವಿಸಿ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್

Diabetes: ಬದಲಾದ ಜೀವನಶೈಲಿಯಲ್ಲಿ ಮಧುಮೇಹ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ. ಮಧುಮೇಹಕ್ಕೆ ಔಷಧಿಗಳು ಅಗತ್ಯವಿದ್ದರೂ, ಕೆಲವು ನೈಸರ್ಗಿಕ ವಿಧಾನಗಳ ಮೂಲಕ ನೀವು ಸುಲಭವಾಗಿ ಮಧುಮೇಹವನ್ನು ನಿಯಂತ್ರಿಸಬಹುದು. ಇದಕ್ಕಾಗಿ,ಕೆಲವು ಮಸಾಲೆ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Feb 21, 2024, 12:45 PM IST
  • ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಕಂಡು ಬರುವ ಮೆಂತ್ಯವು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ
  • ಮೆಂತ್ಯದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗ್ಯಾಲಕ್ಟೋಮನ್ನನ್ ಮತ್ತು ಟ್ರೈಗೋನೆಲ್ಲಾ ರಾಸಾಯನಿಕಗಳಿವೆ.
  • ಮೆಂತ್ಯವನ್ನು ಹೊರತುಪಡಿಸಿ ಇನ್ನೂ ಕೆಲವು ಮಸಾಲೆಗಳು ಕೂಡ ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ ಆಗಿದೆ.
Diabetes: ಪ್ರತಿದಿನ ಈ 5 ಮಸಾಲೆಗಳನ್ನು ಸೇವಿಸಿ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್  title=

Home Remedy For Diabetes: ಡಯಾಬಿಟಿಸ್/ಮಧುಮೇಹ ಒಂದು ದೀರ್ಘಕಾಲದ ಕಾಯಿಲೆ ಆಗಿದೆ. ದೇಹವು ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಡಯಾಬಿಟಿಸ್ ಸಂಭವಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕವಯಸ್ಸಿನಲ್ಲಿಯೇ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. 

ಮಧುಮೇಹಕ್ಕೆ ಅನುವಂಶಿಕ ಅಂಶಗಳ ಜೊತೆಗೆ ಕಳಪೆ ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿವೆ. ಇತ್ತೀಚೆಗೆ ಐ‌ಸಿ‌ಎಮ್‌ಆರ್ ಬಿಡುಗಡೆ ಮಾಡಿರುವ ಅಂಕಿಯಂಶಗಳ ಪ್ರಕಾರ, ಭಾರತದಲ್ಲಿ 101 ಲಕ್ಷ ಮಂದಿ ಈ ಕಾಯಿಲೆಯಿಂದ ಬಳಲುಟ್ಟಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ಔಷಧಿಗಳ ಜೊತೆಗೆ ಕೆಲವು ಭಾರತೀಯ ಮಸಾಲೆಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ಮಧುಮೇಹದಿಂದ ಪರಿಹಾರಕ್ಕಾಗಿ ನಿತ್ಯ ಸೇವಿಸಿ ಈ 5 ಮಸಾಲೆ: 
ಶುಂಠಿ: 

ಟೈಪ್ 2 ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಶುಂಠಿ ತುಂಬಾ ಪ್ರಯೋಜನಕಾರಿ ಆಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಶುಂಠಿಯು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು, ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ  ಹೈಪರ್ಇನ್ಸುಲಿನೆಮಿಯಾವನ್ನು ನಿಯಂತ್ರಿಸುವಲ್ಲಿ ಶುಂಠಿಯು ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಪೀಡಿಯಾಟ್ರಿಕ್ ಕ್ಯಾನ್ಸರ್ ಮಕ್ಕಳಿಗೆ ಅಪಾಯಕಾರಿ,..! ಅದನ್ನು ಕಂಡುಹಿಡಿಯುವುದು ಹೇಗೆ ಗೊತ್ತೇ ?

ಬೆಳ್ಳುಳ್ಳಿ: 
ರಕ್ತದಲ್ಲಿನ ಸಕ್ಕರೆ, ಒಟ್ಟು ಕೊಲೆಸ್ಟ್ರಾಲ್ ಮತ್ತು ಲಿಪೊಪ್ರೋಟೀನ್ ಅನ್ನು ನಿರ್ವಹಿಸುವಲ್ಲಿ ಬೆಳ್ಳುಳ್ಳಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ. ಬೆಳ್ಳುಳ್ಳಿಯಲ್ಲಿ ಕಂಡುಬರುವ ಅಲಿಸಿನ್ (ಬಯೋಆಕ್ಟಿವ್ ಸಂಯುಕ್ತ) ಇದು ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳ ಮೇಲೆ ಪರಿಣಾಮ ಬೀರುವ ಮೂಲಕ ಇನ್ಸುಲಿನ್ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ದಾಲ್ಚಿನ್ನಿ: 
ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ದಾಲ್ಚಿನ್ನಿ ತುಂಬಾ ಪರಿಣಾಮಕಾರಿ ಎಂದು  ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದುಬಂದಿದೆ. 

ಮೆಂತ್ಯ: 
ಮೆಂತ್ಯ ಬೀಜಗಳಲ್ಲಿ ಕರಗುವ ಫೈಬರ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Health Tips: ವಾರಕ್ಕೆ 3 ಪೇರಲೆ ಹಣ್ಣು ತಿಂದರೆ ಸಾಕು ಈ ಆರೋಗ್ಯ ಸಮಸ್ಯೆಗಳು ಮತ್ತೆಂದೂ ಬರಲ್ಲ!

ಲವಂಗ: 
ಮಧುಮೇಹ ರೋಗಿಗಳಿಗೆ ಲವಂಗವನ್ನು ನಂಜುನಿರೋಧಕ, ಉರಿಯೂತ ನಿವಾರಕ, ನೋವು ನಿವಾರಕ ಮತ್ತು ಜೀರ್ಣಕಾರಿ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಇದು ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಕೂಡ ಪ್ರಯೋಜನಕಾರಿ ಆಗಿದ್ದು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News