ಮಧುಮೇಹಿಗಳು ನಿರಾತಂಕವಾಗಿ ಮಾವಿನಹಣ್ಣು ತಿನ್ನಬಹುದು! ಆದರೆ ಅದಕ್ಕೊಂದು ಸಮಯವಿದೆ !

Mango and Diabetes: ಮಾರುಕಟ್ಟೆಗೆ ವಿವಿಧ ತಳಿಯ ಮಾವು ಲಗ್ಗೆ ಇಟ್ಟಿದೆ. ರಸಭರಿತ ಮಾವಿನ ಹಣ್ಣಿಗೆ ಮನಸೋಲದವರೇ ಇಲ್ಲ. ಆದರೆ ಮಧುಮೇಹಿಗಳು ಈ ಹಣ್ಣನ್ನು ತಿನ್ನಬಹುದೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.  

Written by - Ranjitha R K | Last Updated : Apr 6, 2023, 01:23 PM IST
  • ಮಾವಿನ ಹಣ್ಣಿನಲ್ಲಿ ಹೇರಳವಾಗಿದೆ ಪೌಷ್ಟಿಕಾಂಶ
  • ಮಧುಮೇಹಿಗಳು ತಿನ್ನಬಹುದೇ ಮಾವು
  • ಮಾವಿನಹಣ್ಣಿನಲ್ಲಿ ಎಷ್ಟಿದೆ GIಮಟ್ಟ
ಮಧುಮೇಹಿಗಳು ನಿರಾತಂಕವಾಗಿ ಮಾವಿನಹಣ್ಣು ತಿನ್ನಬಹುದು! ಆದರೆ ಅದಕ್ಕೊಂದು ಸಮಯವಿದೆ ! title=

ಬೆಂಗಳೂರು : ಮಾವಿನ ಸೀಸನ್ ಆರಂಭವಾಗುವುದೇ ಬೇಸಿಗೆಯಲ್ಲಿ. ಮಾವು ಎಲ್ಲರಿಗೂ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಮಾವಿನ ಹಣ್ಣನ್ನು ಇಷ್ಟಪಡದವರು ಬಹಳ ವಿರಳ. ಆದರೆ ಮಧುಮೇಹಿಗಳು ಈ ಹಣ್ಣನ್ನು ತಿನ್ನಬೇಕೋ ಬೇಡವೋ ಎನ್ನುವ ಜಿಜ್ಞಾಸೆಯೂ ಇದೆ. ಏಕೆಂದರೆ ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ತುಂಬಾ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ, ಮಧುಮೇಹ ರೋಗಿಗಳು ಮಾವಿನಹಣ್ಣು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ  ಉದ್ಭವಿಸುತ್ತದೆ.

ಮಾವಿನ ಹಣ್ಣಿನಲ್ಲಿ ಹೇರಳವಾಗಿದೆ ಪೌಷ್ಟಿಕಾಂಶ :
ಕೇವಲ ಸಕ್ಕರೆಯಿಂದಲೇ ಮಾವಿನ ಹಣ್ಣಿನಲ್ಲಿ 90 ಪ್ರತಿಶತದಷ್ಟು  ಕ್ಯಾಲೋರಿ ಇದೆ.  ಅಲ್ಲದೆ, ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಸಿ, ತಾಮ್ರ, ಫೋಲೇಟ್, ವಿಟಮಿನ್ ಎ, ವಿಟಮಿನ್ ಇ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ಕಬ್ಬಿಣ, ಸತು ಮತ್ತು ಫೈಬರ್ ಸಮೃದ್ಧವಾಗಿದೆ .

ಇದನ್ನೂ ಓದಿ : Diabetes Diet: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಕಾರಿ ಈ ಆಯುರ್ವೇದ ಮೂಲಿಕೆ

ಮಾವಿನಹಣ್ಣು ಮತ್ತು ಸಕ್ಕರೆಯ ಮಟ್ಟ : 
ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣವೇ ಹೆಚ್ಚಿಸುವ ಹಣ್ಣುಗಳಿಂದ ದೂರವಿರುವುದು ಉತ್ತಮ. ಆದರೆ ಮಾವು ಫೈಬರ್ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹೀಗಾಗಿ ಸಕ್ಕರೆಯು ರಕ್ತವನ್ನು ನಿಧಾನವಾಗಿ ತಲುಪಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕ ತಜ್ಞರು.  

ಮಾವಿನಹಣ್ಣಿನ GI ಮಟ್ಟ : 
ಮಾವಿನ GI ಮೌಲ್ಯವು 51 ರಿಂದ 56 ರ ನಡುವೆ ಇರುತ್ತದೆ. 55 ಕ್ಕಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳನ್ನು ಮಧುಮೇಹಿಗಳಿಗೆ ಸುರಕ್ಷಿತವೆಂದು ಹೇಳಲಾಗುತ್ತದೆ. ಆದರೆ,  ಯಾವುದೇ ಅಡ್ಡಪರಿಣಾಮವಿಲ್ಲದೆ ಮಾವನ್ನು ಸೇವಿಸುವುದಾದರೆ  ಈ ಮೂರು ಸಲಹೆಗಳನ್ನು ಅನುಸರಿಸಬೇಕು.  

ಇದನ್ನೂ ಓದಿ : ಮಾತೃತ್ವ ಭದ್ರಪಡಿಸಿಕೊಳ್ಳಲು 30 ರ ವಯೋಮಾನದ ಆರಂಭದಲ್ಲಿ ಮೊಟ್ಟೆ ಘನೀಕರಣ ಸೂಕ್ತ ವಿಧಾನ!

1. ಊಟದ ಸಮಯಕ್ಕೆ ಗಮನ ಕೊಡಿ : 
ಮಾವಿನ ಅಡ್ಡ ಪರಿಣಾಮಗಳನ್ನು ತಪ್ಪಿಸಬೇಕಾದರೆ ಅದರ ಸೇವನೆಯ ಸಮಯಕ್ಕೆ ಗಮನ ಕೊಡಿ. ಬೆಳಗಿನ ಉಪಾಹಾರ ಮತ್ತು ಭೋಜನದ ನಡುವೆ ಈ ನಿರಾತಂಕವಾಗಿ ಮಾವಿನ ಹಣ್ಣನ್ನು  ತಿನ್ನಬಹುದು. ಆದರೆ ರಾತ್ರಿ ಊಟಕ್ಕಿಂತ ಮುನ್ನ ಊಟದ ಜೊತೆ ಅಥವಾ ಊಟದ ನಂತರ ಯಾವುದೇ ಕಾರಣಕ್ಕೂ ಮಾವಿನ ಹಣ್ಣನ್ನು ತಿನ್ನಬಾರದು.

2. ಎಷ್ಟು ತಿನ್ನಬೇಕು ಎನ್ನುವುದು ತಿಳಿದಿರಲಿ : 
ಮಧುಮೇಹವಿದ್ದಾಗ ಮಾವು ಸೇವಿಸಬಹುದು. ಆದರೆ ಎಷ್ಟು ಸೇವಿಸಬೇಕು ಎನ್ನುವುದು ಕೂಡಾ ಬಹಳ ಮುಖ್ಯ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಮಧುಮೇಹಿಗಳು ತಿನ್ನಬಹುದು ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಮಾವು ತಿನ್ನಬಾರದು. ನಿಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ದಿನಕ್ಕೆ ಎಷ್ಟು ಮಾವಿನಹಣ್ಣು ತಿನ್ನಬೇಕು ಎನ್ನುವುದನ್ನು ನೀವೇ ನಿರ್ಧರಿಸಿ. 

ಇದನ್ನೂ ಓದಿ : Diabetes : ಮಧುಮೇಹಕ್ಕೆ ರಾಮಬಾಣ ಈ ಎಲೆ, ಪ್ರತಿನಿತ್ಯ ಹೀಗೆ ಸೇವಿಸಿ.!

3. ಮಾವಿನಹಣ್ಣಿನೊಂದಿಗೆ ಪ್ರೋಟೀನ್ ತಿನ್ನಿರಿ : 
ಫೈಬರ್‌ನಂತೆ, ಪ್ರೋಟೀನ್ ರಕ್ತದಲ್ಲಿನ ಸಕ್ಕರೆಯಲ್ಲಿನ  ಹಠಾತ್ ಸ್ಪೈಕ್‌ಗಳನ್ನು ತಡೆಯುತ್ತದೆ. ಆದರೆ ಮಾವಿನಲ್ಲಿ ಪ್ರೊಟೀನ್ ಅಂಶ ಇರುವುದಿಲ್ಲ. ಆದ್ದರಿಂದ ಅದರೊಂದಿಗೆ ಮೊಟ್ಟೆ ಅಥವಾ ಸ್ವಲ್ಪ ಬಾದಾಮಿ ತಿನ್ನುವ ಮೂಲಕ ಪ್ರೋಟೀನ್ ಅನ್ನು ಸೇರಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News