ದೆಹಲಿಯಲ್ಲಿ ಡೆಂಗ್ಯೂ ಭೀತಿ

ಕಳೆದ ಒಂದು ವಾರದ ಅವಧಿಯಲ್ಲಿ 100 ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಸೆಪ್ಟೆಂಬರ್ 22 ರವರೆಗೆ 256 ಮಲೇರಿಯಾ ಪ್ರಕರಣಗಳು ಮತ್ತು 68 ಚಿಕುನ್ಗುನ್ಯಾ ಪ್ರಕರಣಗಳು ದಾಖಲಾಗಿವೆ.

Last Updated : Sep 25, 2018, 08:56 AM IST
ದೆಹಲಿಯಲ್ಲಿ ಡೆಂಗ್ಯೂ ಭೀತಿ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಭೀತಿ ತಲೆದೂರಿದ್ದು, ಈವರೆಗೂ 340 ಪ್ರಕರಣಗಳು ದಾಖಲಾಗಿವೆ. ಸೆ. 24ರಂದು ಕಾರ್ಪೋರೇಷನ್ ಹೊರಡಿಸಿದ ಒಂದು ವರದಿ ಪ್ರಕಾರ, ಈ ಪೈಕಿ ಸೆಪ್ಟೆಂಬರ್ ತಿಂಗಳಿನಲ್ಲಿಯೇ 70% ರಷ್ಟು ಪ್ರಕರಣಗಳು ದಾಖಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ 100 ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಡೆಂಗ್ಯೂ ಮಾತ್ರವಲ್ಲದೆ ಸೆಪ್ಟೆಂಬರ್ 22 ರವರೆಗೆ 256 ಮಲೇರಿಯಾ ಪ್ರಕರಣಗಳು ಮತ್ತು 68 ಚಿಕುನ್ಗುನ್ಯಾ ಪ್ರಕರಣಗಳು ದಾಖಲಾಗಿವೆ.

ಈ ವರ್ಷ ಹೊರಹೊಮ್ಮಿದ 343 ಡೆಂಗ್ಯೂ ಪ್ರಕರಣಗಳಲ್ಲಿ, ಸೆಪ್ಟೆಂಬರ್ 22 ರೊಳಗೆ 236 ಪ್ರಕರಣಗಳು ದಾಖಲಾಗಿವೆ. ಆಗಸ್ಟ್ನಲ್ಲಿ 58, ಜೂನ್ನಲ್ಲಿ 19, ಮೇನಲ್ಲಿ 10, ಏಪ್ರಿಲ್ನಲ್ಲಿ ಎರಡು, ಮಾರ್ಚ್ನಲ್ಲಿ ಒಂದು, ಫೆಬ್ರವರಿಯಲ್ಲಿ ಮೂರು ಮತ್ತು ಜನವರಿನಲ್ಲಿ ಆರು ಪ್ರಕರಣ ದಾಖಲಾಗಿತ್ತು.

ಸೋಂಕು ರೋಗಗಳಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ. ಇದು ಸೊಳ್ಳೆಗಳ ಮೂಲಕ ಹರಡುವ ಭಯಂಕರವಾದ ಕಾಯಿಲೆ. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ. 

ರಕ್ತದೊತ್ತಡ ಕಡಿಮೆಯಾಗುತ್ತದೆ:
ಕಡಿಮೆ ರಕ್ತದೊತ್ತಡ, ಇದನ್ನು ಡೆಂಗ್ಯೂ ಆಘಾತ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ದೇಹದ ವಿವಿಧ ಭಾಗಗಳಿಗೆ ಮೃದುವಾದ ರಕ್ತ ಪೂರೈಕೆಯಾಗುವುದಿಲ್ಲ.

ಅದರ ಲಕ್ಷಣಗಳು:
- ತೀವ್ರವಾದ ತಲೆನೋವು
- ಜ್ವರ
- ವಾಂತಿ ಮತ್ತು ಭೇದಿ
- ಕಣ್ಣಿನಲ್ಲಿ ನೋವು
- ಉಸಿರಾಟದ ತೊಂದರೆ
- ದೇಹದಲ್ಲಿ, ಕೀಲುಗಳು ಮತ್ತು ಹೊಟ್ಟೆ ನೋವು
- ದೇಹದ ಊತ
- ಚರ್ಮದ ಮೇಲೆ ಕೆಂಪು ಗುರುತುಗಳು
- ಕೆಂಪು ಮೂತ್ರ ವಿಸರ್ಜನೆ
- ರೋಗಗ್ರಸ್ತವಾಗುವಿಕೆ
- ಸುಸ್ತಾಗುವಿಕೆ

ಡೆಂಗ್ಯೂ ಜ್ವರ ಬಂದಾಗ ತಿನ್ನಬೇಕಾದ ಆಹಾರಗಳು
- ಕಿತ್ತಳೆ
- ಪಪಾಯ
- ಗಂಜಿ (ಬಾಯಿ ರುಚಿಗೆ ಡ್ರೈ ಫ್ರೂಟ್ಸ್ ಜೊತೆ ತಿನ್ನಬಹುದು)
- ಹರ್ಬಲ್ ಟೀ
- ಎಳನೀರು
- ಹಣ್ಣಿನ ಜ್ಯೂಸ್
- ತರಕಾರಿ ಜ್ಯೂಸ್
- ನಿಂಬೆ ಪಾನೀಯ

Trending News