Avocado For Cholesterol Control: ಪ್ರಸ್ತುತ ಜೀವನಶೈಲಿಯಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಸರ್ವೇ ಸಾಮಾನ್ಯವಾದ ಆರೋಗ್ಯ ಸಮಸ್ಯೆ ಆಗಿದೆ. ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಇದು ಹೈ ಬಿಪಿ, ಡಯಾಬಿಟಿಸ್ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ, ದೇಹದಲ್ಲಿ ಶೇಖರಣೆಯಾಗಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ಕೇವಲ ಒಂದೇ ಒಂದು ಹಣ್ಣು ಹೈ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
ಹೈ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಈ ಹಣ್ಣು:
ಪ್ರಸಿದ್ಧ ಆಹಾರ ತಜ್ಞರ ಪ್ರಕಾರ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಆರೋಗ್ಯಕವಾಗಿ ಸುಲಭವಾಗಿ ಕಂಟ್ರೋಲ್ ಮಾಡಲು ಆವಕಾಡೊ ಹಣ್ಣು ವರದಾನವಿದ್ದಂತೆ. ಇದು ಕೊಂಚ ದುಬಾರಿ ಹಣ್ಣಾಗಿದ್ದರೂ ಸಹ ಈ ಹಣ್ಣಿನ ಸೇವನೆ ಕೊಲೆಸ್ಟ್ರಾಲ್ ನಿಯಂತ್ರಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ, ದೃಷ್ಟಿ ದೋಷವನ್ನು ನಿವಾರಿಸುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ- ಇಲ್ಲಿಯವರೆಗೆ ಚೀನಾದಿಂದ ಹೊರಹೊಮ್ಮಿದ ಯಾವ್ಯಾವ ವೈರಸ್‌ಗಳು ವಿಶ್ವದಾದ್ಯಂತ ವಿನಾಶ ಸೃಷ್ಟಿಸಿವೆ!
ಪೋಷಕಾಂಶಗಳ ಆಗರ ಆವಕಾಡೊ:
ಒಂದು ಮಧ್ಯಮ ಗಾತ್ರದ ಆವಕಾಡೊದಲ್ಲಿ ಸುಮಾರು 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಕೊಬ್ಬು (15 ಗ್ರಾಂ ಮೊನೊಸಾಚುರೇಟೆಡ್, 4 ಗ್ರಾಂ ಬಹುಅಪರ್ಯಾಪ್ತ, 3 ಗ್ರಾಂ ಸ್ಯಾಚುರೇಟೆಡ್), 10 ಗ್ರಾಂ ಫೈಬರ್ ಮತ್ತು 11 ಮಿಲಿಗ್ರಾಂ ಸೋಡಿಯಂ ಅನ್ನು ಒಳಗೊಂಡಿರುತ್ತದೆ. ಹಾಗಾಗಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಹಣ್ಣನ್ನು ಅತ್ಯುತ್ತಮ ಔಷಧಿ ಎಂದು ಪರಿಗಣಿಸಲಾಗಿದ್ದು, ಇದನ್ನು ಪ್ರತಿದಿನ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ದೃಷ್ಟಿ ದೋಷಕ್ಕೆ ಅತ್ಯುತ್ತಮ ಮನೆಮದ್ದು, ತಿಂಗಳಲ್ಲಿ ಕನ್ನಡಕಕ್ಕೆ ಹೇಳಿ ಗುಡ್ ಬೈ
ಪ್ರತಿದಿನ ಆವಕಾಡೊ ಸೇವನೆಯಿಂದ ಆರೋಗ್ಯಕ್ಕಿರುವ ಪ್ರಯೋಜನಗಳೆಂದರೆ:
ಸಂಶೋಧನೆಯೊಂದರ ಪ್ರಕಾರ, ಸುಮಾರು ಆರು ತಿಂಗಳುಗಳ ಕಾಲ ನಿರಂತರವಾಗಿ ಆವಕಾಡೊ ಸೇವಿಸುವ ಜನರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು. ಈ ಹಣ್ಣಿನ ಸೇವನೆಯಿಂದ ಕೆಲವರಲ್ಲಿ ಸೊಂಟ ಮತ್ತು ಹೊಟ್ಟೆ ಸುತ್ತ ಶೇಖರಣೆಯಾಗಿರುವ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲದೆ, ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ ಎಂದು ಸಂಶೋಧಕರು ಮಾಹಿತಿ ಹಂಚಿಕೊಂಡಿದ್ದಾರೆ. ಇವೆಲ್ಲದರ ಜೊತೆಗೆ ನಿತ್ಯ ಆವಕಾಡೊ ಸೇವನೆಯು ಆರೋಗ್ಯಕರ ತೂಕ ಇಳಿಕೆಯಲ್ಲಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಿದೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.