ನವದೆಹಲಿ: Coronavirus 3rd Wave - ಕಳೆದ ಸುಮಾರು ಒಂದೂವರೆ ವರ್ಷದಿಂದ, ಕರೋನಾ ಮಹಾಮಾರಿಯಿಂದ (Coronavirus In India) ಬಳಲುತ್ತಿರುವ ದೇಶದ ನಾಗರಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಐಐಟಿ ಕಾನ್ಪುರದ (IIT Kanpur) ಹಿರಿಯ ವಿಜ್ಞಾನಿ ಪದ್ಮಶ್ರೀ ಪ್ರೊ ಮಣೀಂದ್ರ ಅಗರವಾಲ್ (Prof Manindra Agrawal), ಮೂರನೇ ಅಲೆ ಕೊರೊನಾ ಸೋಂಕಿನ ಸಾಧ್ಯತೆಯು ಇದೀಗ ಕ್ಷೀಣಿಸಿದೆ ಎಂದು ಹೇಳಿದ್ದಾರೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ನಡೆದ ಲಸಿಕಾಕರಣ ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ. ಪ್ರೊ. ಅಗರ್ವಾಲ್ ಗಣಿತದ ಸೂತ್ರ ಮಾದರಿಯ ಆಧಾರದ ಮೇಲೆ ಈ ಹಕ್ಕನ್ನು ಮಂಡಿಸಿದ್ದಾರೆ. ಅವರ ಪ್ರಕಾರ, ಸೋಂಕಿನ ವೇಗವು ಇದೀಗ ನಿರಂತರವಾಗಿ ಕಡಿಮೆಯಾಗುತ್ತದೆ. ಇದೇ ವೇಳೆ, ಅಕ್ಟೋಬರ್ ವೇಳೆಗೆ, ಯುಪಿ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಸೋಂಕಿನಿಂದ ಸಂಪೂರ್ಣ ಮುಕ್ತವಾಗಲಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Corona Vaccine: ಮೂರನೇ ತರಂಗಕ್ಕೆ ಮುಂಚಿತವಾಗಿ ಭಾರತಕ್ಕೆ ಮತ್ತೊಂದು ಲಸಿಕೆ
ಈ ಕುರಿತು ತಮ್ಮ ಅಧ್ಯಯನದಲ್ಲಿ ಹೇಳಿಕೊಂಡಿರುವ ಪ್ರೊಫೆಸರ್ ಅಗರವಾಲ್, ಅಕ್ಟೋಬರ್ ವರೆಗೆ ದೇಶಾದ್ಯಂತ ಸಕ್ರೀಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 15000 ಕ್ಕೆ ಇಳಿಕೆಯಾಗಿದೆ. ತಮಿಳುನಾಡು , ತೆಲಂಗಾಣ, ಕೇರಳ, ಕರ್ನಾಟಕ, ಅಸ್ಸಾಂ ಅರುಣಾಚಲ ಪ್ರದೇಶ ಸೇರಿದಂತೆ ಪೂರ್ವೋತ್ತರದ ರಾಜ್ಯಗಳಲ್ಲಿ ಸೋಂಕು ಇನ್ನೂ ಇರಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ಕೊರೊನಾ ವೈರಸ್ ಮೂರನೇ ಅಲೆ ಇದೀಗ ಇಲ್ಲಕ್ಕೆ ಸಮಾನ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ ವರೆಗೆ ಉತ್ತರ ಪ್ರದೇಶ, ಬಿಹಾರ, ದೆಹಲಿ, ಮಧ್ಯ ಪ್ರದೇಶದಲ್ಲಿ ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆ ಒಂದಂಕಿಗೆ ತಲುಪಲಿದೆ ಎಂದು ಈ ಅಧ್ಯಯನ ಹೇಳಿದೆ.
ಇದನ್ನೂ ಓದಿ-3.86 ಕೋಟಿಗೂ ಹೆಚ್ಚು ಜನರಿಗೆ ನಿಗದಿತ ಸಮಯದಲ್ಲಿ ಕೊರೊನಾ ಲಸಿಕೆ ಸಿಕ್ಕಿಲ್ಲ ಎಂದ ಕೇಂದ್ರ
ಮಹಾಮಾರಿ ತಡೆಗಟ್ಟಲು ಲಸಿಕಾಕರಣ ಪರಿಣಾಮಕಾರಿ
ಕರೋನಾ ಸಾಂಕ್ರಾಮಿಕ ಈ ಸಮಯದಲ್ಲಿ, ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ತಮ್ಮ ಅಧ್ಯಯನದ ಮೂಲಕ ಸರ್ಕಾರವನ್ನು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಎರಡನೇ ಅಲೆಯ ಕುರಿತು ಅವರು ಹೇಳಿದ್ದ ಬಹುತೇಕ ಸಂಗತಿಗಳು ನಿಜವೆಂದು ಸಾಬೀತಾಗಿವೆ. ಪ್ರೊಫೆಸರ್ ಅಗರ್‌ವಾಲ್ ಪ್ರಕಾರ, ಲಾಕ್‌ಡೌನ್ ಹಾಗೂ ಲಸಿಕಕರಣದಿಂದ ಸಾಕಷ್ಟು ಲಾಭ ಸಿಕ್ಕಿದೆ. ಎರಡನೇ ಅಲೆಯ ನಂತರ, ಹೆಚ್ಚಿನ ಜನರಲ್ಲಿ ಹರ್ಡ್ ಇಮ್ಯೂನಿಟಿ ರೂಪುಗೊಂಡಿದೆ ಮತ್ತು ಲಸಿಕಾಕರಣದ ಅಭಿಯಾನ ಮಹಾಮಾರಿ ತಡೆಗಟ್ಟುವಲ್ಲಿ ಪ್ರಭಾವಶಾಲಿ ಸಾಬೀತಾಗಿದೆ.
ಇದನ್ನೂ ಓದಿ-Coronavirus Third Wave: ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಆರಂಭ, 5 ದಿನಗಳಲ್ಲಿ 242 ಮಕ್ಕಳಿಗೆ ಸೋಂಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.