Corona: Paracetamol ಸೇರಿದಂತೆ ಈ ಅತ್ಯಾವಶ್ಯಕ ಔಷಧಿಗಳ ಬೆಲೆ ಏರಿಕೆ ಸಾಧ್ಯತೆ, ಕಾರಣ ಇಲ್ಲಿದೆ

Medicine Prices - ಕೊರೊನಾ ಮಹಾಮಾರಿಯ ಪರಿಣಾಮ ಔಷಧಿಗಳ ಸಪ್ಲೈ ಮೇಲೆ ಬೀಳುತ್ತಿದೆ. ಕೊರೊನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ಸಾಮಾನ್ಯ ಔಷಧಿಗಳ ಕಚ್ಚಾ ಸಾಮಗ್ರಿಗಳ ಬೆಲೆ ಭಾರಿ ಏರಿಕೆಯಾಗುತ್ತಿದೆ.

Written by - Nitin Tabib | Last Updated : May 1, 2021, 08:31 PM IST
  • ಪ್ರಸ್ತುತ ನಿಯಂತ್ರಣದಲ್ಲಿವೆ ದರಗಳು.
  • ಹೆಚ್ಚಾಗುತ್ತಿದೆ ಕಚ್ಚಾ ಸಾಮಗ್ರಿಗಳ ದರ.
  • ಕಚ್ಚಾ ಸಾಮಗ್ರಿಗಳ ಸಂಗ್ರಹದಲ್ಲಿ ತೊಡಗಿವೆ ಕಂಪನಿಗಳು
Corona: Paracetamol ಸೇರಿದಂತೆ  ಈ ಅತ್ಯಾವಶ್ಯಕ ಔಷಧಿಗಳ ಬೆಲೆ ಏರಿಕೆ ಸಾಧ್ಯತೆ, ಕಾರಣ ಇಲ್ಲಿದೆ title=
Medicine Prices (File Photo)

ನವದೆಹಲಿ: Medicine Prices - ದೇಶಾದ್ಯಂತ ಕೊರೊನಾ (Corona) ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದಂತೆ, ಔಷಧಿಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಕೊರೊನಾ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿರುವ ಔಷಧಿಗಳ ಬೇಡಿಕೆ 3 ರಿಂದ 4 ಪಟ್ಟು ಹೆಚ್ಚಾಗಿದೆ.

ಸದ್ಯ ನಿಯಂತ್ರಣದಲ್ಲಿವೆ ಔಷಧಿಗಳ ದರ
ಸರ್ಕಾರದ ಕಠಿಣ ಧೋರಣೆಯ ಕಾರಣ ಸದ್ಯ ಈ ಔಷಧಿಗಳ ಬೆಲೆ (Drug Prices) ನಿಯಂತ್ರಣದಲ್ಲಿರುವುದು ಜನರ ಪಾಲಿಗೆ ಭಾರಿ ನೆಮ್ಮದಿಯ ಸುದ್ದಿಯಾಗಿದೆ. ಔಷಧಿ ಅಂಗಡಿಗಳವರೆಗೆ ಅವುಗಳ ಪೂರೈಕೆಯಲ್ಲಿಯೂ ಕೂಡ ಯಾವುದೇ ಅಡೆತಡೆಗಳು ಉಂಟಾಗುತ್ತಿಲ್ಲ. ಒಂದು ವೇಳೆ ಸರ್ಕಾರದ ಈ ಕಠಿಣ ನಿಲುವು ಇಲ್ಲದೆ ಹೋದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಔಷಧಿಗಳ ಕಚ್ಚಾ ಸಾಮಗ್ರಿಗಳ (Raw Material) ಬೆಲೆ ಏರಿಕೆ
ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ಜ್ವರ ಇಳಿಕೆಗಾಗಿ ಬಳಕೆಯಾಗುವ ಪ್ಯಾರಾಸಿಟಾಮಲ್, ಡಾಕ್ಸಿಸೈಕ್ಲಿನ್, ಅಜಿತ್ರೋಮೈಸಿನ್, ಮೆರೋಪೆನಿಂ ಗಳಂತಹ ಔಷಧಿಗಳ ಬಳಕೆಯಾಗುತ್ತಿದೆ. ಏಪ್ರಿಲ್ ನಲ್ಲಿ ಕೊರೊನಾ (Coronavirus) ಪ್ರಕೋಪ ಹೆಚ್ಚಾಗುವ ಜೊತೆಗೆ ಈ ಔಷಧಿಗಳ ಬೇಡಿಕೆ ಕೂಡ 400 ರಷ್ಟು ಹೆಚ್ಚಾಗಿದೆ. ಕೊರೊನಾ ಪ್ರಕೋಪ ದೇಶದ ವಿಭಿನ್ನ ಭಾಗಗಳಲ್ಲಿ ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ದಿನಗಳಲ್ಲಿ ಈ ಔಷಧಿಗಳ ಬೇಡಿಕೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇಲ್ಲ.

ಇದನ್ನೂ ಓದಿ- Precautions during vaccination : ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮೊದಲು ನೆನಪಿರಲಿ ಈ ವಿಷಯಗಳು; ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!

ಕಂಪನಿಗಳು ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸುತ್ತಿವೆ
ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಔಷಧಿ ಕಂಪನಿಗಳು ಕಚ್ಚಾ ಸಾಮಗ್ರಿಗಳ ಸಂಗ್ರಹ ಹೆಚ್ಚಿಸುವಲ್ಲಿ ತೊಡಗಿವೆ ಮತ್ತು ಇದರಿಂದ ಔಷಧಿಗಳ ಉತ್ಪಾದನೆಯ ಮೇಲೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿವೆ. ಆದರೆ ಬೇಡಿಕೆ ಹೆಚ್ಚಾದ ಕಾರಣ ಕಚ್ಚಾ ಸಾಮಗ್ರಿಗಳು ದುಬಾರಿ ಬೆಲೆಗೆ ಸಿಗುತ್ತಿವೆ. Ivermactin ಔಷಧಿ ತಯಾರಿಕೆಗೆ ಫೆಬ್ರುವರಿಯಲ್ಲಿ 17 ಸಾವಿರ ರೂ.ಗಳಿಗೆ ಒಂದು ಕೆ.ಜಿ ಕಚ್ಚಾ ಸಾಮಗ್ರಿಗೆ ಇದೀಗ ರೂ.58 ಸಾವಿರ ಇದೀಗ 58 ಸಾವಿರ ರೂ.ಪಾವತಿಸಬೇಕಾಗುತ್ತಿದೆ.

ಇದನ್ನೂ ಓದಿ-Immunity Booster : ಬೆಳಗಿನ ಚಹಾದಲ್ಲಿ ಈ ಎರಡನ್ನು ಬೆರೆಸಿ ಸೇವಿಸಿದರೆ ಹೆಚ್ಚುತ್ತದೆ ರೋಗ ನಿರೋಧಕ ಶಕ್ತಿ..!

ಮುಂಬರುವ ದಿನಗಳಲ್ಲಿ ದರ ವೃದ್ಧಿಯಾಗುವ ಸಾಧ್ಯತೆ
ಡಾಕ್ಸಿಸೈಕ್ಲಿನ್ ಗೆ ಬೇಕಾಗುವ ಸಾಮಗ್ರಿಗಳ ಬೆಲೆ ದ್ವಿಗುಣಗೊಂಡಿವೆ. ಇದರಿಂದ ಔಷಧಿ ಉತ್ಪಾದಕರು ಪ್ರತಿ ಕಿ.ಗ್ರಾಂ.ಗೆ ರೂ.6000 ಹೆಚ್ಚುವರಿ ಪಾವತಿಸುತ್ತಿದ್ದಾರೆ. ಇನ್ನೊಂದೆಡೆ ಅಜಿಥ್ರೋಮೈಸಿನ್ ಗೆ ಬೇಕಾಗುವ ಕಚ್ಚಾಸಾಮಗ್ರಿಗಳ ಬೆಲೆ ಪ್ರತಿ ಕೆ.ಜಿಗೆ ರೂ.3500 ಹೆಚ್ಚಾಗಿದೆ. ಸರ್ಕಾರದ ಕಠಿಣ ನಿರ್ಬಂಧನೆಗಳ ಹಿನ್ನೆಲೆ ಔಷಧಿ ತಯಾರಕ ಕಂಪನಿಗಳು ತಮಗೆ ಬರುವ ಲಾಭದಲ್ಲಿ ಇಳಿಕೆ ಮಾಡಿಕೊಂಡಿವೆ. ಹೇಗಾಗಿ ಪ್ರಸ್ತುಗ ಸಾಮಾನ್ಯ ಔಷದಿಗಳ ಬೆಲೆಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ. ಆದರೆ, ಈ ಸ್ಥಿತಿ ಎಲ್ಲಿಯವರೆಗೆ ಮುಂದುವರೆಯಲಿದೆ ಯಾರಿಗೂ ತಿಳಿದಿಲ್ಲ.

ಇದನ್ನೂ ಓದಿ - Home Remedies: ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News