Childhood Obesity : ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಕ್ಕಳ ಸ್ಥೂಲಕಾಯತೆಯು 21 ನೇ ಶತಮಾನದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕಳೆದ 40 ವರ್ಷಗಳಲ್ಲಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೊಜ್ಜು ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತಿದೆ.

Written by - Ranjitha R K | Last Updated : Mar 24, 2021, 09:18 AM IST
  • ಮಕ್ಕಳಲ್ಲಿ ಬೆಳೆಯುತ್ತಿರುವ ಬೊಜ್ಜಿನ ಸಮಸ್ಯೆ
  • ಮಕ್ಕಳ ಸ್ಥೂಲಕಾಯ ಸಮಸ್ಯೆ ನಿಯಂತ್ರಿಸಲು ಕೆಲ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
  • ಆಹಾರ ಪದ್ಧತಿ ಜೊತೆ ದೈಹಿಕ ಚಟುವಟಿಕೆಯ ಬಗ್ಗೆಯೂ ಕಾಳಜಿ ಅವಶ್ಯಕ
Childhood Obesity : ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ  title=
ಮಕ್ಕಳಲ್ಲಿ ಬೆಳೆಯುತ್ತಿರುವ ಬೊಜ್ಜಿನ ಸಮಸ್ಯೆ (file photo)

ನವದೆಹಲಿ : ಕೋವಿಡ್ -19ನಿಂದಾಗಿ (COVID-19) ಒಂದು ವರ್ಷಕ್ಕೂ ಹೆಚ್ಚು ಕಾಲ ಮಕ್ಕಳು, ಹಿರಿಯರು ತಮ್ಮ ಮನೆಗಳ ನಾಲ್ಕು ಗೋಡೆಗಳ ಮಧ್ಯೆಯೇ ಇರುವಂತಾಗಿದೆ. ಕರೋನಾದಿಂದಾಗಿ online ಕ್ಲಾಸ್ ಗಳು ನಡೆಯುತ್ತಿದ್ದು, ಮಕ್ಕಳು ಶಾಲೆಗು ಹೋಗುತ್ತಿಲ್ಲ. ಮನೆಯ ಒಳಗೆ ಕುಳಿತು ಮೊಬೈಲ್, ಟಿವಿ ಮುಂದೆಯೇ ಕಾಲ ಕಳೆಯುತ್ತಿರುತ್ತಾರೆ.  ದೈಹಿಕ ಚಟುವಟಿಕೆಯನ್ನೇ ಮಕ್ಕಳು ಮರೆತಂತಾಗಿದೆ. ಇದು ಮಕ್ಕಳ ದೇಹ ತೂಕ ಹೆಚ್ಚಳದ (Weight gain) ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚು ಜಂಕ್ ಫುಡ್ (Junk Food) ತಿನ್ನುವುದು, ಯಾವುದೇ ದೈಹಿಕ ಚಟುವಟಿಕೆ ಮಾಡದಿರುವುದು, ಹೊರ ಹೋಗಿ ಆಟ ಆಡದೆ ಇರುವುದರಿಂದಲೇ   ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಣುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

ಮಕ್ಕಳಲ್ಲಿ ಹೆಚ್ಚುತ್ತಿರುವ  ಬೊಜ್ಜಿನ ಸಮಸ್ಯೆ : 
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಕ್ಕಳ ಸ್ಥೂಲಕಾಯತೆಯು 21 ನೇ ಶತಮಾನದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ (Health Problems) ಒಂದಾಗಿದೆ. ಕಳೆದ 40 ವರ್ಷಗಳಲ್ಲಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೊಜ್ಜು ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಆರೋಗ್ಯ ಸಮೀಕ್ಷೆಯಲ್ಲಿ 22 ರಾಜ್ಯಗಳನ್ನು ಸೇರಿಸಲಾಗಿತ್ತು.  ಈ ಪೈಕಿ 20 ರಾಜ್ಯಗಳಲ್ಲಿ ಮಕ್ಕಳು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಇದನ್ನೂ ಓದಿ : Bathing Mistakes: ಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!

ಮಕ್ಕಳಲ್ಲಿನ ಬೊಜ್ಜು ತಪ್ಪಿಸಲು ಅನುಸರಿಸಬೇಕಾದ ಕ್ರಮಗಳು : 
ಬೊಜ್ಜಿನ  ಸಮಸ್ಯೆಯು (Obesity) ಹಲವು ರೋಗಗಳಿಗೆ ಕಾರಣವಾಗಿದೆ. High BP, ಮಧುಮೇಹ ಮತ್ತು ಹೃದ್ರೋಗದಂಥಹ ಅನೇಕ ಸಮಸ್ಯೆಗಳಿಗೆ ಬೊಜ್ಜು ಮೂಲ ಕಾರಣವಾಗಿದೆ. ಹಾಗಾಗಿ ಇದನ್ನು ನಿಯಂತ್ರಿಸಲು ಮಕ್ಕಳ ಆಹಾರ ಪದ್ಧತಿಯಲ್ಲಿ ಬದಲಾವಣೆ ತರುವುದು ಅನಿವಾರ್ಯ.  

ಇನ್ನು ಕೆಲ ಸೂತ್ರಗಳನ್ನು ಅನುಸರಿಸಿದರೆ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.   

1.  ಹೆಚ್ಚಿನ ಮಕ್ಕಳು ಟಿವಿ (TV) ನೋಡಿಕೊಂಡು, ಮೊಬೈಲ್ (Mobile) ನೋಡಿಕೊಂಡು ವಿಡಿಯೋ ನೋಡಿಕೊಂಡು ಊಟ ಮಾಡುತ್ತಿರುತ್ತಾರೆ. ಆದರೆ ನೆನಪಿರಲಿ ಇದೊಂದು ಬಹಳ ಕೆಟ್ಟ ಅಭ್ಯಾಸ. ಇದನ್ನು ತಕ್ಷಣ ಬದಾಯಿಸಲೇಬೇಕು.  ಯಾಕೆಂದರೆ ಯಾವಾಗ ಮಕ್ಕಳು ಟಿವಿ ನೋಡಿಕೊಂಡು, ಮೊಬೈಲ್ ನೋಡಿಕೊಂಡು ತಿನ್ನುತ್ತಾರೋ ಆಗ ಅವರಿಗೆತಾವು ಎಷ್ಟು ಆಹಾರ ಸೀವಿಸಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಹಾಗಾಗಿ ಮಕ್ಕಳು ತಿನ್ನುವಾಗ, ಮಕ್ಕಳ ಸಂಪೂರ್ಣ ಗಮನ ಆಹಾರದ (Food) ಮೇಲೆ ಮಾತ್ರ ಇರಬೇಕು.

ಇದನ್ನೂ ಓದಿ : Castor Oil Hair Mask: ನಿಮ್ಮ ಸೊಗಸಾದ ಕೂದಲಿನ ಆರೈಕೆಗಾಗಿ ಹರಳೆಣ್ಣೆಯನ್ನು ಈ ರೀತಿ ಬಳಸಿ

2. ಸಾಧ್ಯವಾದಷ್ಟು ನಿಮ್ಮ ಮಕ್ಕಳಿಗೆ ಚಿಪ್ಸ್, ಚಾಕೊಲೇಟ್, ಫ್ರೆಂಚ್ ಫ್ರೈಸ್ (Frech Fries) , ಕೋಲ್ಡ್ ಡ್ರಿಂಕ್ಸ್, ಕುಕೀಸ್, ಕೇಕ್, ಹುರಿದ ತಿಂಡಿಗಳು, ಬ್ರೆಡ್(Bread), ಮುಂತಾದ ಅಧಿಕ ಕ್ಯಾಲೋರಿ ಇರುವ ತಿಂಡಿಗಳಿಂದ ದೂರ ಇಡಿ.  ಈ ಜಂಕ್ ಫುಡ್ ಗಳನ್ನೂ (Junk food) ಅತಿಯಾಗಿ ತಿನ್ನುವುದರಿಂದ, ಮಗುವಿನ ದೇಹ ತೂಕ ಹೆಚ್ಚಾಗುವುದು ಮಾತ್ರವಲ್ಲ, ಚಿಕ್ಕ ವಯಸ್ಸಿನಲ್ಲಿಯೇ, ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಡಲು ಆರಂಭವಾಗುತ್ತದೆ. 

3. ಜಂಕ್ ಫುಡ್ ಬದಲಿಗೆ ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು (Vegetables), ಧಾನ್ಯಗಳು, ಹಾಲು (Milk) , ಮೊಸರು, ಮೀನು ತಿನ್ನುವ ಅಭ್ಯಾಸ ಮಾಡಿಸಿ. . ಅಲ್ಲದೆ, ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ನೀರು (water) ಕುಡಿಯುವ ಅಭ್ಯಾಸವನ್ನು ಕೂಡ ಬೆಳೆಸಬೇಕು. ಮಕ್ಕಳು ಇದನ್ನೆಲ್ಲ  ಅನುಸರಿಸಬೇಕಾದರೆ ಮೊದಲು ಮನೆಯಲ್ಲಿರುವ ಹಿರಿಯರು ಕೂಡ ಅದನ್ನ ಪಾಲಿಸಬೇಕು. ಮನೆಯ ಹಿರಿಯರು ಅಂದರೆ ತಂದೆ, ತಾಯಿ, ಅಜ್ಜ, ಅಜ್ಜಿ ಹೀಗೆ ಯಾರು ಮಕ್ಕಳ ಜೊತೆಗಿರುತ್ತಾರೋ ಅವರು ಮಕ್ಕಳ ಮುಂದೆ  ಸರಿಯಾದ ಆಹಾರ ಕ್ರಮವನ್ನ ಅಳವಡಿಸಿಕೊಳ್ಳಬೇಕು. 

ಇದನ್ನೂ ಓದಿ : Strengthen teeth Home Remedies: ಹಲ್ಲುಗಳನ್ನು ಗಟ್ಟಿಗೊಳಿಸಲು ಇಲ್ಲಿವೆ ಮನೆ ಉಪಾಯ

4. ಕರೋನಾ ವೈರಸ್ (Coronavirus) ಹಿನ್ನೆಲೆಯಲ್ಲಿ ಮಕ್ಕಳು ದಿನವಿಡೀ ಟಿವಿ ಮುಂದೆ ಮೊಬೈಲ್ ಮುಂದೆಯೇ ಕಾಲ ಕಳೆಯುತ್ತಾರೆ. ಹಾಗಾಗಿ  ಪ್ರತಿದಿನ ಕನಿಷ್ಠ 1 ಗಂಟೆಗಳ ಕಾಲವಾದರೂ ದೈಹಿಕ ಚಟುವಟಿಕೆಗಳಲ್ಲಿ (Exercise) ಮಕ್ಕಳನ್ನು ತೊಡಗಿಸಿಕೊಳ್ಳಿ. ಪ್ರತಿದಿನ ವ್ಯಾಯಾಮ ಮಾಡಿ ಅಥವಾ ಮನೆಯ ಕೆಲವು ಕೆಲಸಗಳಲ್ಲಿ, ಮಕ್ಕಳನ್ನು ತೊಡಗಿಸಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News