Chikoo Health Benefits: ಸಪೋಟ ಹಣ್ಣಿನ ಸೇವನೆ ಈ 4 ಸಮಸ್ಯೆಗಳಿಗೆ ರಾಮಬಾಣವಿದ್ದಂತೆ!

Chikoo Health Benefits: ಬಹುತೇಕ ಮಂದಿ ಇಷ್ಟಪಡುವ ಹಣ್ಣು 'ಸಪೋಟ'. ಇದು ಅದರ ರುಚಿಯಿಂದಾಗಿ ಎಲ್ಲರನ್ನೂ ಆಕರ್ಷಿಸುತ್ತದೆ. ಸಪೋಟಾ ಹಣ್ಣನ್ನು ತಿನ್ನುವುದರಿಂದ ಕೆಲವು ಪ್ರಯೋಜನಗಳಿದ್ದರೂ, ಅತಿಯಾಗಿ ತಿನ್ನುವುದರಿಂದ ಹಾನಿಯೂ ಉಂಟಾಗುತ್ತದೆ. 

Written by - Yashaswini V | Last Updated : Apr 7, 2022, 04:49 PM IST
  • ಪ್ರತಿದಿನ ಚಿಕೂ/ಸಪೋಟ ಹಣ್ಣನ್ನು ಸೇವಿಸಿ
  • ಈ ಹಣ್ಣಿನ ಸೇವನೆಯಿಂದ ನಾಲ್ಕು ರೋಗಗಳಿಂದ ರಕ್ಷಣೆ ಸಿಗುತ್ತದೆ
  • ಆದರೆ, ಇದನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆಯೂ ತಿಳಿದಿರುವುದು ಬಹಳ ಮುಖ್ಯ
Chikoo Health Benefits: ಸಪೋಟ ಹಣ್ಣಿನ ಸೇವನೆ ಈ 4 ಸಮಸ್ಯೆಗಳಿಗೆ ರಾಮಬಾಣವಿದ್ದಂತೆ! title=
Chikoo advantages-Disadvantages

Chikoo Health Benefits: ಚಿಕೂ ಅಥವಾ ಸಪೋಟ ತುಂಬಾ ರುಚಿಕರವಾದ ಮತ್ತು ಆರೋಗ್ಯಕರ ಹಣ್ಣು.  ದೇಹದಲ್ಲಿ ನೀರಿನ ಕೊರತೆ ಇರುವ ಸಮಯದಲ್ಲಿ ಈ ಹಣ್ಣನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.  ಸಪೋಟದಲ್ಲಿ ಕಂಡು ಬರುವ ಕೆಲವು ಪೋಷಕಾಂಶಗಳು ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸುತ್ತದೆ. ಆಯುರ್ವೇದದ ಪ್ರಕಾರ, ಈ ಹಣ್ಣು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇಂದು ನಾವು ಸಪೋಟ ಹಣ್ಣನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳು ಹಾಗೂ ಅದರ ಅತಿಯಾದ ಸೇವನೆಯಿಂದ ಉಂಟಾಗಬಹುದಾದಂತಹ ತೊಂದರೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸಪೋಟ ಸೇವನೆಯಿಂದ ಆಗುವ ಪ್ರಯೋಜನಗಳು:
1. ಸಪೋಟಾ ಸೇವನೆಯಿಂದ ರಕ್ತದೊತ್ತಡದ ಸಮಸ್ಯೆಯನ್ನು ಹೋಗಲಾಡಿಸಬಹುದು. ಆರೋಗ್ಯಕ್ಕೆ ಬಹಳ ಮುಖ್ಯವಾದ ಪೊಟ್ಯಾಶಿಯಂ ಈ ಹಣ್ಣಿನಲ್ಲಿ ಇದೆ.

2. ಸಪೋಟಾ ಕಿಡ್ನಿ (Kidney) ಸಂಬಂಧಿತ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಯಾರಿಗಾದರೂ ಮೂತ್ರಪಿಂಡದ ಕಲ್ಲು ಇದ್ದರೆ, ವೈದ್ಯರು ಅದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

3. ಶೀತ ಸಮಸ್ಯೆಯನ್ನು ನಿವಾರಿಸುವಲ್ಲಿ ಚಿಕೂ ನಿಮಗೆ ತುಂಬಾ ಉಪಯುಕ್ತವಾಗಿದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ಚಿಕೂನಲ್ಲಿ ಕಂಡುಬರುತ್ತವೆ, ಇದು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿರಿಸುತ್ತದೆ.

4. ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗ, ಯಾವುದೇ ವ್ಯಕ್ತಿಯು ಚಡಪಡಿಕೆ, ಕಿರಿಕಿರಿ ಮತ್ತು ಏಕಾಗ್ರತೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಪೋಟ ಸೇವನೆ ನಿಮಗೆ ಉಪಯುಕ್ತವಾಗಬಹುದು. ಸಪೋಟದಲ್ಲಿ ಕಬ್ಬಿಣ ಅಂಶ ಕಂಡುಬರುತ್ತದೆ, ಇದು ಮಾನಸಿಕ ಆರೋಗ್ಯವನ್ನು (Mental Health) ಸುಧಾರಿಸುತ್ತದೆ.

ಇದನ್ನೂ ಓದಿ- Milk Side Effects: ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಹಾಲು ಕುಡಿಯಬೇಡಿ

ಸಪೋಟ ಹಣ್ಣಿನ ಅಧಿಕ ಸೇವನೆಯಿಂದಾಗುವ ಅನಾನುಕೂಲಗಳು:
ಯಾವುದೇ ಆದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ವ್ಯಕ್ತಿ ಸಪೋಟವನ್ನು ಹೆಚ್ಚಾಗಿ ಸೇವಿಸಿದರೆ ಅಥವಾ ಹಸಿ ಸಪೋಟವನ್ನು ತಿನ್ನುವುದರಿಂದ ಅದು ಗಂಟಲಿನಲ್ಲಿ ತುರಿಕೆ ಅಥವಾ ಬಾಯಿಯಲ್ಲಿ ಹುಣ್ಣು ಉಂಟುಮಾಡಬಹುದು. ಕಚ್ಚಾ ಚಿಕೂ ಸೇವನೆಯು ಅಜೀರ್ಣ ಅಥವಾ ಅತಿಸಾರದ ಸಮಸ್ಯೆಗಳನ್ನು ಉಂಟುಮಾಡಬಹುದು.

ಈ ಸಮಸ್ಯೆ ಇರುವವರು ಸಪೋಟ ಹಣ್ಣನ್ನು ತಿನ್ನಬಾರದು:
ಮಧುಮೇಹದ ಸಮಸ್ಯೆಯನ್ನು ಹೊಂದಿದ್ದರೆ, ಚಿಕೂ ತಿನ್ನುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದರ ಸೇವನೆಯು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ- ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!

ಸಪೋಟ ಹಣ್ಣನ್ನು ಬಳಸುವುದು ಹೇಗೆ?
* ಸಪೋಟ ಹಣ್ಣನ್ನು ಹಲ್ವಾ ರೂಪದಲ್ಲಿ ಸೇವಿಸಬಹುದು.
* ಕೆಲವರು ಚಿಕೂವನ್ನು ಸಿಹಿ ಸಾಸ್ ರೂಪದಲ್ಲಿ ಸೇವಿಸುತ್ತಾರೆ.
* ಚಿಕೂ ಶೇಕ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
* ಹಣ್ಣಿನ ಚಾಟ್‌ಗೆ ಚಿಕೂವನ್ನು ಸೇರಿಸುವುದು ಉತ್ತಮ ಆಯ್ಕೆಯಾಗಿದೆ.
* ಚಿಕುವನ್ನು ಅದರ ಸಿಪ್ಪೆಯೊಂದಿಗೆ ಕೂಡ ತಿನ್ನಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News