Calcium Rich Foods: ಹಾಲು ಮಾತ್ರವಲ್ಲ, ಈ ತರಕಾರಿಗಳೂ ಮೂಳೆಗಳಿಗೆ ಜೀವ ನೀಡುತ್ತವೆ, ದೂರವಾಗುತ್ತೆ ಕಾಲು ನೋವು

Calcium Rich Foods: ಮೂಳೆಗಳನ್ನು ಬಲವಾಗಿಡಲು ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಹಾಲು ಮತ್ತು ಡೈರಿ ಉತ್ಪನ್ನಗಳು ಮಾತ್ರವಲ್ಲದೆ ತರಕಾರಿಗಳು ಸಹ ನಿಮ್ಮ ಮೂಳೆಗಳನ್ನು ದೃಢವಾಗಿಡುತ್ತವೆ. 

Written by - Yashaswini V | Last Updated : Dec 23, 2021, 10:04 AM IST
  • ತರಕಾರಿಗಳಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ
  • ಬ್ರಸೆಲ್ಸ್ ಮೊಗ್ಗುಗಳು, ಕ್ಯಾಪ್ಸಿಕಂ, ಸಿಹಿ ಆಲೂಗಡ್ಡೆ ಮತ್ತು ಟೊಮೆಟೊಗಳಂತಹ ತರಕಾರಿಗಳನ್ನು ತಿನ್ನುವುದು ನಿಮಗೆ ಪ್ರಯೋಜನಕಾರಿಯಾಗಿದೆ
  • ಸ್ಟ್ರಾಬೆರಿ, ಕಿತ್ತಳೆ ಮತ್ತು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಸಹ ಮೂಳೆಗಳು ಬಲವಾಗಿರುತ್ತವೆ
Calcium Rich Foods: ಹಾಲು ಮಾತ್ರವಲ್ಲ, ಈ ತರಕಾರಿಗಳೂ ಮೂಳೆಗಳಿಗೆ ಜೀವ ನೀಡುತ್ತವೆ, ದೂರವಾಗುತ್ತೆ ಕಾಲು ನೋವು  title=
Calcium Rich Foods

Calcium Rich Foods: ಮೂಳೆಗಳನ್ನು ಬಲವಾಗಿಡಲು ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ಹಾಲು ಮತ್ತು ಡೈರಿ ಉತ್ಪನ್ನಗಳು ಮಾತ್ರವಲ್ಲದೆ ತರಕಾರಿಗಳು ಸಹ ನಿಮ್ಮ ಮೂಳೆಗಳನ್ನು ದೃಢವಾಗಿಡುತ್ತವೆ. ತಜ್ಞರ ಪ್ರಕಾರ, 30 ವರ್ಷ ವಯಸ್ಸಿನ ನಂತರ, ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ, ಆದ್ದರಿಂದ ನೀವು ಡೈರಿ ಉತ್ಪನ್ನಗಳ ಜೊತೆಗೆ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. 

ಕ್ಯಾಲ್ಸಿಯಂನ ಅತ್ಯುತ್ತಮ ಮೂಲ:
ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿನ ಸಂಶೋಧನೆಯ ಪ್ರಕಾರ, ತರಕಾರಿಗಳು ಅಥವಾ ಸಸ್ಯ ಆಧಾರಿತ ಆಹಾರಗಳು ಕ್ಯಾಲ್ಸಿಯಂಗೆ ಉತ್ತಮ (Calcium Rich Foods) ಮೂಲಗಳಾಗಿವೆ. ಈ ಸಂಶೋಧನೆಯು ಕಡಿಮೆ ಪ್ರಮಾಣದ ತರಕಾರಿಗಳನ್ನು ಸೇವಿಸುವ 102 ವಯಸ್ಕರನ್ನು ಒಳಗೊಂಡಿತ್ತು ಎಂದು ಹೇಳಲಾಗಿದೆ. ಸುಮಾರು ಎಂಟು ವಾರಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ ಭಾಗವಹಿಸಿದವರಲ್ಲಿ ಅರ್ಧದಷ್ಟು ಜನರಿಗೆ ಹೆಚ್ಚು ತರಕಾರಿಗಳನ್ನು ತಿನ್ನಲು ನೀಡಲಾಯಿತು. ಅದೇ ಸಮಯದಲ್ಲಿ, ಅರ್ಧದಷ್ಟು ಜನರನ್ನು ಸಾಮಾನ್ಯ ಆಹಾರದಲ್ಲಿ ಇರಿಸಲಾಯಿತು. ಸಂಶೋಧನೆಯ ಕೊನೆಯಲ್ಲಿ, ತಜ್ಞರು ಹೆಚ್ಚು ತರಕಾರಿಗಳನ್ನು ಸೇವಿಸಿದ ಗುಂಪಿನ ಜನರಲ್ಲಿ ಅವರ ಮೂಳೆಗಳು ಮೊದಲಿಗಿಂತ ಬಲಗೊಂಡಿರುವುದನ್ನು ಕಂಡು ಕೊಂಡರು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ- Turmeric Milk: ಅರಿಶಿನ ಹಾಲು ತಯಾರಿಸುವ ಸರಿಯಾದ ಮಾರ್ಗ & ಪ್ರಯೋಜನ ತಿಳಿಯಿರಿ

ಈ ಆಹಾರಗಳ ಸೇವನೆ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು:
ಮೂಳೆ ಆರೋಗ್ಯ (Bone Health) ಮತ್ತು ಆಸ್ಟಿಯೊಪೊರೋಸಿಸ್ ಫೌಂಡೇಶನ್ ಪ್ರಕಾರ, ತರಕಾರಿಗಳಲ್ಲಿ ಇರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ. ಬ್ರಸೆಲ್ಸ್ ಮೊಗ್ಗುಗಳು, ಕ್ಯಾಪ್ಸಿಕಂ, ಸಿಹಿ ಆಲೂಗಡ್ಡೆ ಮತ್ತು ಟೊಮೆಟೊಗಳಂತಹ ತರಕಾರಿಗಳನ್ನು ತಿನ್ನುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ನೀವು ಸ್ಟ್ರಾಬೆರಿ, ಕಿತ್ತಳೆ ಮತ್ತು ಬಾಳೆಹಣ್ಣುಗಳನ್ನು ತಿನ್ನಬಹುದು, ಈ ಹಣ್ಣುಗಳನ್ನು ಮೂಳೆಗಳನ್ನು ಬಲಪಡಿಸಲು ಸಹಕಾರಿ ಆಗಿವೆ.

ಈ ಪೋಷಕಾಂಶಗಳು ಸಹ ಮುಖ್ಯವಾಗಿದೆ:
ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ, ವಿಟಮಿನ್ ಕೆ, ವಿಟಮಿನ್ ಸಿ (Vitamin C), ಡಯೆಟರಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಮೂಳೆಗಳನ್ನು ಬಲವಾಗಿಡಲು ಅವಶ್ಯಕ. ವಿಟಮಿನ್ ಡಿ ಮೂಳೆ ಅಂಗಾಂಶವನ್ನು ನಿರ್ಮಿಸುತ್ತದೆ. ಅದರ ಸಹಾಯದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ವಿಟಮಿನ್ ಕೆ ಮೂಳೆಗಳನ್ನು ಮುರಿತಗಳು ಮತ್ತು ಆಸ್ಟಿಯೊಪೊರೋಸಿಸ್ ಅಪಾಯದಿಂದ ರಕ್ಷಿಸುತ್ತದೆ.

ಇದನ್ನೂ ಓದಿ- Health Tips: ಈ ವಿಶೇಷ ತೈಲವು ಅನೇಕ ರೋಗಗಳನ್ನು ತಡೆಯುತ್ತದೆ, ಈಗಲೇ ಬಳಸಿ ನೋಡಿ

ಕಾಲಜನ್ ಅನ್ನು ವಿಟಮಿನ್ ಸಿ ಮೂಲಕ ಉತ್ಪಾದಿಸಲಾಗುತ್ತದೆ, ಇದು ಚರ್ಮ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ. ಮೆಗ್ನೀಸಿಯಮ್ ಮೂಳೆ ಸಾಂದ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News