ಬ್ರೌನ್, ವೈಟ್ ಎರಡೂ ಅಲ್ಲ ಡಯಾಬಿಟೀಸ್ ಇರುವವರು ಈ ಅಕ್ಕಿ ಸೇವಿಸಬೇಕು

Black Rice For Diabetes:ಬಿಳಿ ಅಕ್ಕಿಯಲ್ಲಿರುವ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ತಮ್ಮ ದೈನಂದಿನ ಆಹಾರಕ್ರಮವನ್ನು ಪ್ರತಿ ಸಂದರ್ಭದಲ್ಲೂ ನಿಯಂತ್ರಿಸಬೇಕಾಗುತ್ತದೆ. 

Written by - Ranjitha R K | Last Updated : May 19, 2023, 08:59 AM IST
  • ಪ್ರಪಂಚದಾದ್ಯಂತ ಅತಿ ಹೆಚ್ಚು ತಿನ್ನುವ ಧಾನ್ಯವೆಂದರೆ ಅದು ಅಕ್ಕಿ.
  • ಅನ್ನ ತಿಂದಿಲ್ಲ ಎಂದಾದರೆ ಭೋಜನ ಪರಿಪೂರ್ಣ ಅನ್ನಿಸುವುದೇ ಇಲ್ಲ.
  • ಬಿಳಿ ಅಕ್ಕಿಯಲ್ಲಿರುವ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಬ್ರೌನ್, ವೈಟ್ ಎರಡೂ ಅಲ್ಲ ಡಯಾಬಿಟೀಸ್ ಇರುವವರು ಈ ಅಕ್ಕಿ ಸೇವಿಸಬೇಕು   title=

Black Rice For Diabetes : ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅತಿ ಹೆಚ್ಚು ತಿನ್ನುವ ಧಾನ್ಯವೆಂದರೆ ಅದು ಅಕ್ಕಿ. ಕೆಲವರಿಗೆ ಅನ್ನ ತಿಂದಿಲ್ಲ ಎಂದಾದರೆ ಭೋಜನ ಪರಿಪೂರ್ಣ ಅನ್ನಿಸುವುದೇ ಇಲ್ಲ. ಆದರೆ ಯಾರಿಗಾದರೂ ಒಮ್ಮೆ ಮಧುಮೇಹ ಕಾಣಿಸಿಕೊಂಡಲ್ಲಿ ಅಂಥವರಿಗೆ ಅನ್ನ ವಿಷದ ಸಮ. ಬಿಳಿ ಅಕ್ಕಿಯಲ್ಲಿರುವ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಡಯಾಬಿಟೀಸ್ ರೋಗಿಗಳಿಗೆ ಅನ್ನ ಎಷ್ಟು ಇಷ್ಟವಾದರೂ ಹೆಚ್ಚು ಸೇವಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ತಮ್ಮ ದೈನಂದಿನ ಆಹಾರಕ್ರಮವನ್ನು ಪ್ರತಿ ಸಂದರ್ಭದಲ್ಲೂ ನಿಯಂತ್ರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಯಾವ ಆಯ್ಕೆ ಇದೆ.

ಕಪ್ಪು ಅಕ್ಕಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು : 
ಸಾಮಾನ್ಯವಾಗಿ, ಬಿಳಿ ಅಕ್ಕಿಯ ಬದಲಿಗೆ, ಮಧುಮೇಹ ರೋಗಿಗಳಿಗೆ ಬ್ರೌನ್ ರೈಸ್ ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಮಧುಮೇಹ ಪರಿಸ್ಥಿತಿಯಲ್ಲಿ ಬ್ರೌನ್ ರೈಸ್ ಗಿಂತ ಕಪ್ಪು ಅಕ್ಕಿ ಸೇವಿಸುವಂತೆ ಹೇಳಲಾಗುತ್ತದೆ. ಏಕೆಂದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಕಪ್ಪು ಅಕ್ಕಿ ಫೈಬರ್, ಕಬ್ಬಿಣ, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್ ಗಳಲ್ಲಿ  ಸಮೃದ್ಧವಾಗಿದೆ. ಆಂಥೋಸಯಾನಿನ್ ಮತ್ತು ಫ್ಲೇವನಾಯ್ಡ್ ಸಸ್ಯ ವರ್ಣದ್ರವ್ಯಗಳಿಂದಾಗಿ ಇದು ಕಪ್ಪು ಅಥವಾ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ  ಲಾಭವಾಗುತ್ತದೆ ನೋಡೋಣ. 

ಇದನ್ನೂ ಓದಿ : Increase Immunity: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಆಹಾರವನ್ನು ಸೇವಿಸಿ...!

ಕಂದು ಅಕ್ಕಿಯ ಪ್ರಯೋಜನಗಳು :
1. ಮಧುಮೇಹ :
ಮಧುಮೇಹ ರೋಗಿಗಳಿಗೆ ಅನ್ನವನ್ನು ತಿನ್ನಬೇಕು ಎಂದೆನಿಸಿದರೆ ಬ್ರೌನ್ ರೈಸ್  ಬದಲಿಗೆ ಕಪ್ಪು ಅಕ್ಕಿಯನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಬೇಕು. ಏಕೆಂದರೆ ಇದು ಅವರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಕಪ್ಪು ಅಕ್ಕಿಯಲ್ಲಿ ಫೈಬರ್ ಪ್ರಮಾಣವು ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಹಳಷ್ಟು ಸಹಾಯ ಮಾಡುತ್ತದೆ.

2. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ : 
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡದೆ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ನಿಯಮಿತವಾಗಿ ಕಪ್ಪು ಅನ್ನವನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿದ್ದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. 

ಇದನ್ನೂ ಓದಿ : Carrot Juice Benefits : ಒಂದು ಗ್ಲಾಸ್‌ ಕ್ಯಾರೆಟ್ ಜ್ಯೂಸ್‌ ನಲ್ಲಿದೆ ಉತ್ತಮ ಆರೋಗ್ಯದ ಗುಟ್ಟು!

3. ಮಲಬದ್ಧತೆ ನಿವಾರಣೆಗೆ : 
ಕಪ್ಪು ಅನ್ನವನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ. ಈ ಅಕ್ಕಿಯಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವುದು. ಇದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಹೋಗಲಾಡಿಸಲು ನೆರವಾಗುತ್ತದೆ.

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News