Benefits of Mango: ಹೈ ಬಿಪಿ ಕಂಟ್ರೋಲ್, ಕಾಂತಿಯುತ ತ್ವಚೆಗಾಗಿ ಈ ಹಣ್ಣನ್ನು ತಪ್ಪದೇ ಸೇವಿಸಿ

Benefits of Mango: ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಹೆಚ್ಚಿನವರು ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಮಾವು ರುಚಿಯಲ್ಲಿ ಮಾತ್ರವಲ್ಲ, ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ಮಾವಿನ ಹಣ್ಣಿನ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

Written by - Yashaswini V | Last Updated : Jun 28, 2022, 12:17 PM IST
  • ರಕ್ತದೊತ್ತಡದ ಸಮಸ್ಯೆ ಇರುವವರು, ಮಾವಿನ ಹಣ್ಣು ತಿನ್ನುವುದು ಪ್ರಯೋಜನಕಾರಿಯಾಗಿದೆ.
  • ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಫೈಬರ್ ಆರೋಗ್ಯಕ್ಕೆ ಒಳ್ಳೆಯದು.
  • ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
Benefits of Mango: ಹೈ ಬಿಪಿ ಕಂಟ್ರೋಲ್, ಕಾಂತಿಯುತ ತ್ವಚೆಗಾಗಿ ಈ ಹಣ್ಣನ್ನು ತಪ್ಪದೇ ಸೇವಿಸಿ  title=
Mango Benefits

ಮಾವಿನ ಹಣ್ಣಿನ ಪ್ರಯೋಜನಗಳು: ಇಂದಿನ ಯುಗದಲ್ಲಿ ಜನರ ಜೀವನಶೈಲಿಯೂ ಸಾಕಷ್ಟು ಬದಲಾಗಿದೆ. ಈ ಜೀವನಶೈಲಿ ನಮ್ಮ ದೇಹದಲ್ಲಿ ಅನೇಕ ರೋಗಗಳ ಬೆಳವಣಿಗೆಗೆ ಕಾರಣವಾಗಿದೆ. ನಮ್ಮ ಆಹಾರ ಮತ್ತು ದಿನಚರಿಯಲ್ಲಿನ ಗಂಭೀರ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜಿನಂತಹ ಗಂಭೀರ ಕಾಯಿಲೆಗಳು ಬರಬಹುದು. ಆದರೆ, ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಈ ಒಂದು ಹಣ್ಣಿನ ಸೇವನೆಯಿಂದ ನೀವು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ಬೇಸಿಗೆ ಕಾಲದಲ್ಲಿ ಎಲ್ಲೆಂದರಲ್ಲಿ ಮಾವಿನ ಹಣ್ಣುಗಳು ಕಾಣಸಿಗುತ್ತವೆ. ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಹೆಚ್ಚಿನವರು ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಮಾವು ರುಚಿಯಲ್ಲಿ ಮಾತ್ರವಲ್ಲ, ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ಮಾವಿನ ಹಣ್ಣಿನ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಮಾತ್ರವಲ್ಲ, ಮಾವಿನ ಹಣ್ಣು ಕಾಂತಿಯುತ ತ್ವಚೆ ಪಡೆಯಲು, ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. 

ಮಾವಿನ ಹಣ್ಣಿನ ಸೇವನೆಯಿಂದ ಸಿಗುವ ಪ್ರಯೋಜನಗಳು:
ಮಾವಿನ ಹಣ್ಣಿನಲ್ಲಿರುವ ಈ ಅಂಶವು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ:-
ರಕ್ತದೊತ್ತಡದ ಸಮಸ್ಯೆ ಇರುವವರು, ಮಾವಿನ ಹಣ್ಣು ತಿನ್ನುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಫೈಬರ್ ಆರೋಗ್ಯಕ್ಕೆ ಒಳ್ಳೆಯದು. ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ- Papaya Facts: ಊಟದ ಬಳಿಕ ಪರಂಗಿ ಹಣ್ಣನ್ನು ಸೇವಿಸಬಹುದೇ? ಇಲ್ಲಿದೆ ಮುಖ್ಯ ಮಾಹಿತಿ

ಚರ್ಮದ ಸಮಸ್ಯೆಗಳಿಗೆ ಮಾವು ಸಹಕಾರಿ:
ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದೆ. ಈ ಜೀವಸತ್ವಗಳು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಪ್ರತಿದಿನ ಮಾವಿನ ಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಕೆಲವೇ ದಿನಗಳಲ್ಲಿ ನಿಮ್ಮ ಚರ್ಮದ ಕಲೆಗಳು ಮಾಯವಾಗುತ್ತವೆ. ಚರ್ಮವು ಯಂಗ್ ಆಗಿ ಕಾಣುತ್ತದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:
ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ಗಳು ಮಾವಿನ ಹಣ್ಣಿನಲ್ಲಿ ಕಂಡುಬರುತ್ತವೆ. ಇದು ಯಾವುದೇ ರೀತಿಯ ಅಡಚಣೆಯಿಂದ ನಮ್ಮ ಅಪಧಮನಿಗಳನ್ನು ರಕ್ಷಿಸುತ್ತದೆ. ಪೋನಿಫೆನಾಲ್ ಬಯೋಆಕ್ಟಿವ್ ಆಗಿರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. 

ಇದನ್ನೂ ಓದಿ- ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳಿಂದ ಡಯಾಬಿಟೀಸ್ ನಿಯಂತ್ರಿಸಬಹುದು ..!

ತೂಕ ನಿಯಂತ್ರಿಸಲು:
ಮಾವು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ಮಾವಿನ ಹಣ್ಣಿನ ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ. ವಾಸ್ತವವಾಗಿ, ಮಾವಿನ ಸಿಪ್ಪೆಗಳು ಫೈಟೊಕೆಮಿಕಲ್‌ಗಳನ್ನು ಹೊಂದಿರುತ್ತವೆ. ಈ ರಾಸಾಯನಿಕವು ಕೊಬ್ಬನ್ನು ನೈಸರ್ಗಿಕ ರೀತಿಯಲ್ಲಿ ಸುಡುತ್ತದೆ. ಮಾವು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಹಸಿವಿನ ಭಾವನೆ ಕಡಿಮೆಯಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News