Jaggery & Ghee : ತುಪ್ಪದ ಜೊತೆ ಬೆಲ್ಲ ಸೇವಿಸಿ, ಈ ಆರೋಗ್ಯ ಸಮಸ್ಯೆಗಳಿಂದ ದೂರವಿರಿ

ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇವೆರಡರ ಸಂಯೋಜನೆಯಿಂದ ಆರೋಗ್ಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಬೆಲ್ಲ ಮತ್ತು ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : Feb 21, 2022, 01:35 PM IST
  • ತುಪ್ಪ ಮತ್ತು ಬೆಲ್ಲ ಎರಡೂ ಆರೋಗ್ಯಕ್ಕೆ ತುಂಬಾ ಉಪಯುಕ್ತ ಆಹಾರ
  • ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ತುಪ್ಪ ಮತ್ತು ಬೆಲ್ಲವು ನಮ್ಮ ದೇಹದ ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯ
Jaggery & Ghee : ತುಪ್ಪದ ಜೊತೆ ಬೆಲ್ಲ ಸೇವಿಸಿ, ಈ ಆರೋಗ್ಯ ಸಮಸ್ಯೆಗಳಿಂದ ದೂರವಿರಿ title=

Health Tips : ತುಪ್ಪ ಮತ್ತು ಬೆಲ್ಲ ಎರಡೂ ಆರೋಗ್ಯಕ್ಕೆ ತುಂಬಾ ಉಪಯುಕ್ತ ಆಹಾರಗಳಾಗಿವೆ. ಬೆಲ್ಲದಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಹಾಗೆ, ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಡಿ, ಕೊಬ್ಬಿನಾಮ್ಲಗಳು ಮುಂತಾದ ಪೋಷಕಾಂಶಗಳು ಇರುತ್ತವೆ. ಹೀಗಾಗಿ, ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇವೆರಡರ ಸಂಯೋಜನೆಯಿಂದ ಆರೋಗ್ಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಬೆಲ್ಲ ಮತ್ತು ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ತುಪ್ಪ ಮತ್ತು ಬೆಲ್ಲದ ಪ್ರಯೋಜನಗಳು

1. ನಿಮ್ಮ ಹೊಟ್ಟೆ ಸಮಸ್ಯೆಗಳಿಗೆ ತುಪ್ಪ ಮತ್ತು ಬೆಲ್ಲ(Ghee-Jaggery)ವು ಹೆಚ್ಚು ಉಪಯುಕ್ತವಾಗಿದೆ. ನೀವು ತುಪ್ಪ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸಬೇಕು. ಹೀಗೆ ಮಾಡುವುದರಿಂದ ಕರುಳಿನ ಚಲನೆ ಸುಲಭವಾಗುವುದು ಮಾತ್ರವಲ್ಲ, ಅಸಿಡಿಟಿ, ಹೊಟ್ಟೆನೋವು, ಹೊಟ್ಟೆ ಉಬ್ಬರ ಮುಂತಾದವುಗಳಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ : Egg : ಪ್ರತಿದಿನ ಮೊಟ್ಟೆ ತಿನ್ನುವುದು ಈ ಗಂಭೀರ ಕಾಯಿಲೆಗೆ ಆಹ್ವಾನ ನೀಡಿದಂತೆ!

2. ಕಬ್ಬಿಣದ ಕೊರತೆಯಿಂದ ದೇಹದಲ್ಲಿ ರಕ್ತಹೀನತೆ ಉಂಟಾಗಬಹುದು. ರಕ್ತಹೀನತೆ ಎಂದರೆ ರಕ್ತದ ಕೊರತೆ. ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ, ವ್ಯಕ್ತಿಯು ರಕ್ತಹೀನತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಬೆಲ್ಲ ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸಿದರೆ ರಕ್ತದ ಕೊರತೆಯೂ ನಿವಾರಣೆಯಾಗುತ್ತದೆ. ಬೆಲ್ಲದೊಳಗೆ ಕಬ್ಬಿಣವು ಕಂಡುಬರುತ್ತದೆ, ಇದು ದೇಹಕ್ಕೆ ರಕ್ತವನ್ನು ಪೂರೈಸುತ್ತದೆ. ಈ ರೀತಿಯಾಗಿ ವ್ಯಕ್ತಿಯು ರಕ್ತಹೀನತೆಯ ಸಮಸ್ಯೆಯನ್ನು ತಪ್ಪಿಸಬಹುದು.

3. ತುಪ್ಪ ಮತ್ತು ಬೆಲ್ಲವು ನಮ್ಮ ದೇಹದ ಮೂಳೆಗಳನ್ನು(Bones) ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಬೆಲ್ಲದೊಳಗೆ ಕ್ಯಾಲ್ಸಿಯಂ ಕಂಡುಬರುತ್ತದೆ. ಅದೇ ತುಪ್ಪದಲ್ಲಿ ವಿಟಮಿನ್ ಕೆ2 ಕಂಡುಬರುತ್ತದೆ. ಇವೆರಡನ್ನೂ ಹೆಚ್ಚು ಸೇವಿಸಿದರೆ ಮೂಳೆ ಗಟ್ಟಿಯಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News