Beetroot: ಮಧುಮೇಹಿಗಳು ಬೀಟ್ರೂಟ್ ತಿನ್ನುವುದು ಒಳ್ಳೆಯದೇ?

Beetroot: ಬೀಟ್ರೂಟ್ ಸಿಹಿ ರುಚಿಯನ್ನು ಹೊಂದಿದೆ, ಆದ್ದರಿಂದ ಮಧುಮೇಹ ರೋಗಿಗಳಿಗೆ ಇದನ್ನು ತಿನ್ನಬೇಕೇ ಅಥವಾ ಬೇಡವೇ ಎಂಬ ಗೊಂದಲವಿದೆ.  

Written by - Yashaswini V | Last Updated : Feb 11, 2022, 11:14 AM IST
  • ಮಧುಮೇಹಿಗಳು ಬೀಟ್ರೂಟ್ ತಿನ್ನಬೇಕೇ ಅಥವಾ ಬೇಡವೇ?
  • ಬೀಟ್ರೂಟ್ನ ಸಿಹಿ ರುಚಿ ಗೊಂದಲವನ್ನು ಉಂಟುಮಾಡುತ್ತದೆ
  • ಬೀಟ್ ಜ್ಯೂಸ್ ಕುಡಿಯುವುದರಿಂದ ನೈಸರ್ಗಿಕ ಸಕ್ಕರೆ ಸಿಗುತ್ತದೆ
Beetroot: ಮಧುಮೇಹಿಗಳು ಬೀಟ್ರೂಟ್ ತಿನ್ನುವುದು ಒಳ್ಳೆಯದೇ?  title=
Beetroot benefits for Diabetic patient

Beetroot: ಬೀಟ್‌ರೂಟ್‌ನಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ, ಅದಕ್ಕಾಗಿಯೇ ಹೆಚ್ಚಿನ ವೈದ್ಯರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ, ಇದು ನಿಮ್ಮ ಆರೋಗ್ಯ, ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ, ಆದರೆ ಮಧುಮೇಹ ರೋಗಿಗಳು ಬೀಟ್‌ರೂಟ್‌ ಸೇವಿಸುವುದರಿಂದ ಪ್ರಯೋಜನ ದೊರೆಯಲಿದೆಯೇ ಅಥವಾ ಹಾನಿಯಾಗುತ್ತದೆಯೇ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. 

ಮಧುಮೇಹಿಗಳು ಬೀಟ್ರೂಟ್ ತಿನ್ನಬೇಕೇ ಅಥವಾ ಬೇಡವೇ?
ಬೀಟ್ರೂಟ್ನ ರುಚಿ ಸಿಹಿಯಾಗಿರುತ್ತದೆ, ಆದ್ದರಿಂದ ಮಧುಮೇಹ ರೋಗಿಗಳಿಗೆ (Beetroot For Diabetic Patients) ಇದನ್ನು ತಿನ್ನಬೇಕೇ ಅಥವಾ ಬೇಡವೇ ಎಂಬ ಗೊಂದಲವಿದೆ.  ಬೀಟ್‌ರೂಟ್‌ ತಿನ್ನುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಬೀಟ್ರೂಟ್ ತಿನ್ನುವುದರಿಂದ 5 ಪ್ರಯೋಜನಗಳು:
ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಬೀಟ್‌ರೂಟ್‌ನಲ್ಲಿ ಸಾಕಷ್ಟು ಕಂಡುಬರುತ್ತವೆ. ಆದ್ದರಿಂದ ಬೀಟ್‌ರೂಟ್ ಮಧುಮೇಹ ರೋಗಿಗಳಿಗೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು, ಆದರೂ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಅದರ ವೈಶಿಷ್ಟ್ಯಗಳನ್ನು ತಿಳಿಯೋಣ.

ಇದನ್ನೂ ಓದಿ- Coffee Side Effects: ನಿಮಗೂ ಬೆಳಗ್ಗೆ ಎದ್ದ ತಕ್ಷಣ ಕಾಫಿ ಬೇಕಾ? ಹಾಗಿದ್ದರೆ ಅದರ ಅಪಾಯದ ಬಗ್ಗೆಯೂ ತಿಳಿಯಿರಿ

1. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ:
ಮಧುಮೇಹ ರೋಗಿಗಳು (Diabetic Patients) ಹೆಚ್ಚಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಾರೆ. ಬೀಟ್ರೂಟ್ ತಿನ್ನುವುದರಿಂದ ಅಥವಾ ಅದರ ರಸವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

2. ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರ:
ಮಧುಮೇಹಿಗಳು ಊಟಕ್ಕೆ ಮೊದಲು ಬೀಟ್ರೂಟ್ ತಿನ್ನಬೇಕು, ಇದರಿಂದ ದೇಹವು ನೈಸರ್ಗಿಕ ಸಕ್ಕರೆಯನ್ನು ಪಡೆಯುತ್ತದೆ. ಅಷ್ಟೇ ಅಲ್ಲ ಜೊತೆಗೆ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಹೆಚ್ಚಿಸುವುದಿಲ್ಲ.

3. ಅನೇಕ ಇತರ ರೋಗಗಳ ವಿರುದ್ಧ ರಕ್ಷಣೆ:
ಮಧುಮೇಹವು ಭಾರತದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಇದು ಮೂತ್ರಪಿಂಡ ಮತ್ತು ಹೃದಯದಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಇದು ಅನೇಕ ಇತರ ಕಾಯಿಲೆಗಳ ಮೂಲವೆಂದು ಪರಿಗಣಿಸಲಾಗಿದೆ. ನೀವು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವ ಬೀಟ್‌ರೂಟ್ ಅನ್ನು ಸೇವಿಸಿದರೆ, ಮಧುಮೇಹದಲ್ಲಿ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ- Dandruff Problem: ತಲೆಹೊಟ್ಟಿಗೆ ಶಾಶ್ವತವಾಗಿ ವಿದಾಯ ಹೇಳಲು ನೈಸರ್ಗಿಕ ಮಾರ್ಗಗಳಿವು

4. ರಕ್ತದ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ:
ಬೀಟ್ರೂಟ್ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ, ಆದ್ದರಿಂದ ಇದು ನಿಮ್ಮ ದೇಹಕ್ಕೆ ಹಾನಿ ಮಾಡುವುದಿಲ್ಲ. ಮಧುಮೇಹಿಗಳು ಆಹಾರ ಸೇವಿಸುವ ಮೊದಲು ಬೀಟ್‌ರೂಟ್ ಅನ್ನು ಸೇವಿಸಬೇಕು, ಇದು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News