ಕರೋನಾ ಕಾಲದಲ್ಲಿ ಶುಗರ್ ಲೆವೆಲ್ ಕಾಪಾಡಲು ತಿನ್ನಿ ಈ ಸೂಪರ್ ಫುಡ್.!

ಕರೋನಾ ಕಾಲದಲ್ಲಿ ಬ್ಲಡ್ ಶುಗರ್ ಮಟ್ಟ ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯವಾಗಿದೆ. ನಿಮಗೆ ಗೊತ್ತಿದೆಯಾ..? ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿಡುವ ಒಂದು ಸುಲಭದ ಟ್ರಿಕ್ಸ್ ನಿಮ್ಮ ಕಿಚನ್ ನಲ್ಲೇ ಇದೆ.

Written by - Ranjitha R K | Last Updated : Apr 26, 2021, 01:56 PM IST
  • ಈ ಕರೋನಾ ಕಾಲದಲ್ಲಿ ಡಯಾಬಿಟಿಸ್ ರೋಗಿಗಳು ತುಂಬಾ ಹೆದರಿಕೊಂಡಿದ್ದಾರೆ
  • ಬಾಳೆಹಣ್ಣಿನ ಸಿಪ್ಪೆಯಲ್ಲಿ ಶುಗರ್ ಲೆವೆಲ್ ಕಾಪಾಡುವ ಅದ್ಭುತ ಗುಣ ಇದೆ.
  • ಬಾಳೆಹಣ್ಣಿನ ಸಿಪ್ಪೆಯಲ್ಲಿ Flavonoids ಎಂಬಅಂಶ ಬೇಕಾದಷ್ಟು ಪ್ರಮಾಣದಲ್ಲಿ ಲಭ್ಯವಿದೆ.
ಕರೋನಾ ಕಾಲದಲ್ಲಿ ಶುಗರ್ ಲೆವೆಲ್ ಕಾಪಾಡಲು ತಿನ್ನಿ ಈ ಸೂಪರ್ ಫುಡ್.! title=
ಬಾಳೆಹಣ್ಣಿನ ಸಿಪ್ಪೆಯಲ್ಲಿ ಶುಗರ್ ಲೆವೆಲ್ ಕಾಪಾಡುವ ಅದ್ಭುತ ಗುಣ ಇದೆ. (file photo)

ನವದೆಹಲಿ: ಇದು ಕರೋನಾ ಮಹಾಮಾರಿಯ (Coronavirus) ಆರ್ಭಟಿಸುತ್ತಿರುವ ಕಠಿಣ ಕಾಲ. ಕರೋನಾ ಕಾಲ ರಕ್ಕಸನನ್ನು ಹಿಮ್ಮೆಟ್ಟಿಸಲು ನಾವು ನಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅತ್ಯಂತ ಮುಖ್ಯ.  ಈ ಕರೋನಾ ಕಾಲದಲ್ಲಿ ಡಯಾಬಿಟಿಸ್ (Diabetes) ರೋಗಿಗಳು ತುಂಬಾ ಹೆದರಿಕೊಂಡಿದ್ದಾರೆ.  ಡಯಾಬಿಟಿಸ್ ರೋಗಿಗಳಿಗೆ ಒಂದು ವೇಳೆ ಕರೋನಾ ವಕ್ಕರಿಸಿಕೊಂಡರೆ ಅದು ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆ ಇದೆ. ಇದು  ಡಯಾಬಿಟಿಸ್ ರೋಗಿಗಳ ಆತಂಕಕ್ಕೆ ಕಾರಣವಾಗಿದೆ. ಕರೋನಾ ಕಾಲದಲ್ಲಿ ಬ್ಲಡ್ ಶುಗರ್ ಮಟ್ಟ ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯವಾಗಿದೆ. ನಿಮಗೆ ಗೊತ್ತಿದೆಯಾ..? ಬ್ಲಡ್ ಶುಗರ್ ಲೆವೆಲ್ (Blood sugar level) ನಿಯಂತ್ರಣದಲ್ಲಿಡುವ ಒಂದು ಸುಲಭದ ಟ್ರಿಕ್ಸ್ ನಿಮ್ಮ ಕಿಚನ್ ನಲ್ಲೇ ಇದೆ.  ಬಾಳೆಹಣ್ಣಿನ ಸಿಪ್ಪೆಯಲ್ಲಿ  Flavonoids ಎಂಬಅಂಶ ಬೇಕಾದಷ್ಟು ಪ್ರಮಾಣದಲ್ಲಿ ಲಭ್ಯವಿದೆ. ನಿಮಗೆ ಗೊತ್ತಿರಲಿ, ಈ Flavonoids ಕ್ಷಿಪ್ರಗತಿಯಲ್ಲಿ ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ.

ಬಾಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡಾ ಆರೋಗ್ಯದಾಯಿನಿ.!
ಸಂಶೋಧನೆಗಳ ಪ್ರಕಾರ ಬಾಳೆಯ ಸಿಪ್ಪೆಯಲ್ಲಿ (banana peel) ಹಲವು ರೀತಿಯ ಆರೋಗ್ಯ ಲಾಭಗಳಿವೆ. ಇದರಲ್ಲಿ ಟ್ರಿಪ್ಟೊಫಾನ್ (ಅಗತ್ಯ ಅಮೈನೊ ಆಸಿಡ್), ವಿಟಮಿನ್-ಸಿ, ಬಿ 6, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫ್ಲೇವನಾಯ್ಡ್, ಆಂಟಿ-ಆಕ್ಸಿಡೆಂಟ್ ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುತ್ತದೆ.  ಇವು ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.  ಇದರಲ್ಲಿ ಕಂಡು ಬರುವ ಫ್ಲೆವನಾಯ್ಡ್ ಶುಗರ್ ರೋಗಿಗಳಿಗೆ ವರದಾನ ಎಂದರೂ ತಪ್ಪಾಗದು.  ದೇಹದಲ್ಲಿ ಶುಗರ್ ಕಂಟ್ರೋಲ್ (Sugar Control) ಮಾಡುವಲ್ಲಿ ಫ್ಲೆವನಾಯ್ಡ್ ಗಳ ಪಾತ್ರ ಬಹಳ ದೊಡ್ಡದು. ಅಷ್ಟೆ ಅಲ್ಲ, ಬಾಳೆ ಸಿಪ್ಪೆಯಲ್ಲಿ ಫೈಬರ್ (fiber) ಅಂಶ ಚೆನ್ನಾಗಿರುತ್ತದೆ. ಇದರಿಂದ ಬೊಜ್ಜು (fat) ಕಡಿಮೆಯಾಗುತ್ತದೆ. 

ಇದನ್ನೂ ಓದಿ : ಜೇನುತುಪ್ಪದ ಜೊತೆ ಈ ವಿಶೇಷ ಮಸಾಲೆ ಸೇವಿಸುವುದರಿಂದ ಕೆಮ್ಮು ದೂರ, ರೋಗ ನಿರೋಧಕಶಕ್ತಿ ಹೆಚ್ಚಳ!

ಹೌದು ಬಾಳೆ ಸಿಪ್ಪೆ ತಿನ್ನೋದು ಹೇಗಪ್ಪಾ..?
ಬಾಳೆಕಾಯಿ ಸಿಪ್ಪೆಯನ್ನು ಸೂಪರ್ ಫುಡ್ (Super food) ಎನ್ನಲಾಗುತ್ತದೆ.  ಬಾಳೆಯ ಸಿಪ್ಪೆಯನ್ನು ಬೇಯಿಸಿ ತಿನ್ನಬಹುದು. ಮಾರುಕಟ್ಟೆಯಲ್ಲಿ ಬಾಳೆ ಸಿಪ್ಪೆಯ ಪೌಡರ್ ಕೂಡಾ ಸಿಗುತ್ತದೆ. ಅದನ್ನು ಹಾಲಿನಲ್ಲಿ (Milk) ಬೆರೆಸಿ ಕುಡಿಯಬಹುದು.  ಆದರೆ, ಅದಕ್ಕೂ ಮೊದಲು ಒಮ್ಮೆ ವ್ಯದ್ಯರ ಸಲಹೆ ಖಂಡಿತಾ ಪಡೆಯಬೇಕು. 

ಬಾಳೆ ಹಣ್ಣಿನ ಲಾಭ ಏನೇನಿದೆ ಗೊತ್ತಾ..?
ಯಾರಿಗಾದರೂ ತೂಕ ಹೆಚ್ಚಿಸಿಕೊಳ್ಳಬೇಕಾದರೆ ದಿನ ನಿತ್ಯ ಬಾಳೆಹಣ್ಣಿನ ಶೇಕ್ (banana shake) ಮಾಡಿ ಕುಡಿಯಿರಿ.  ದಿನವೂ 6 ಬಾಳೆ ಹಣ್ಣು (Banana) ತಿಂದರೆ ಒಂದು ವಾರಕ್ಕೆ 500 ಗ್ರಾಂ ತೂಕ ಹೆಚ್ಚಾಗುತ್ತದೆ.  ಇಷ್ಟೆ ಅಲ್ಲ, ಬಾಳೆ ಹಣ್ಣಿನ ಸಿಪ್ಪೆ, ಬಾಳೆ ಕಾಯಿ, ಬಾಳೆ ಎಲೆ, ಬಾಳೆ ದಿಂಡು, ಬಾಳೆ ಹೂ ಕೂಡಾ ಹಲವು ಆರೋಗ್ಯ ಲಾಭವನ್ನು ಹೊಂದಿದೆ. 

ಇದನ್ನೂ ಓದಿ : Corona Second Wave ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸುವುದು ಹೇಗೆ? ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News