ಬೆನ್ನು ನೋವಿನಿಂದ ಬಳಲುತ್ತಿರುವವರು ನಿತ್ಯ ಈ ಆಹಾರಗಳನ್ನು ಸೇವಿಸಿ, ತಕ್ಷಣ ಪರಿಹಾರ ಸಿಗುತ್ತದೆ

ಆಹಾರದಲ್ಲಿ ಆರೋಗ್ಯಕರ ವಸ್ತುಗಳನ್ನು ಸೇರಿಸುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.  ಬೆನ್ನು, ಸೊಂಟ ಮತ್ತು ಮೊಣಕಾಲು ನೋವಿನಿಂದ ತೊಂದರೆಗೊಳಗಾಗಿದ್ದರೆ, ಆರೋಗ್ಯಕರ ಆಹಾರಗಳನ್ನು ಸೇವಿಸಿ. 

Written by - Ranjitha R K | Last Updated : Oct 1, 2021, 08:02 PM IST
  • ಬ್ರೊಕೊಲಿಯನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ಮಾಂಸಾಹಾರಿಗಳಾಗಿದ್ದರೆ ಮೀನುಗಳನ್ನು ತಿನ್ನಿರಿ.
  • ಅಗಸೆಬೀಜದ ಸೇವನೆಯಿಂದ ಬೆನ್ನು ನೋವನ್ನು ನಿವಾರಿಸಬಹುದು
ಬೆನ್ನು ನೋವಿನಿಂದ ಬಳಲುತ್ತಿರುವವರು ನಿತ್ಯ ಈ ಆಹಾರಗಳನ್ನು ಸೇವಿಸಿ, ತಕ್ಷಣ ಪರಿಹಾರ ಸಿಗುತ್ತದೆ  title=
ಬ್ರೊಕೊಲಿಯನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. (file photo)

ನವದೆಹಲಿ : ಬೆನ್ನು ನೋವು ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬೆನ್ನು ನೋವಿನಿಂದಾಗಿ, ನಡೆಯುವುದು, ಕುಳಿತುಕೊಳ್ಳುವುದು ಮತ್ತು ಬಾಗುವುದು ಇಂಥಹ ಸಂದರ್ಭಗಳಲ್ಲಿ ಸಹಿಸಲಾಗದ ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೋವಿಗೆ ನಮ್ಮ ಜೀವನಶೈಲಿಯಲ್ಲಿನ ಬದಲಾವಣೆ (Changes in lifestyle) ಮತ್ತು ಆಹಾರ ಮತ್ತು ಪಾನೀಯಗಳನ್ನು ಸರಿಯಾಗಿ ಸೇವಿಸದೇ ಇರುವದು ಕೂಡಾ ಕಾರಣವಾಗಿದೆ.  ದೀರ್ಘಕಾಲ ಕುಳಿತು ಕೆಲಸ ಮಾಡುವುದರಿಂದಲೂ ಬೆನ್ನು ನೋವು (Back pain) ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ನೋವು ಗಾಯ ಅಥವಾ ತಪ್ಪು ವ್ಯಾಯಾಮದಿಂದಲೂ ಆಗಿರಬಹುದು. ಹಾಗಾಗಿ,   ವ್ಯಾಯಾಮ ಮಾಡುವಾಗ ಅತಿಯಾದ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿರುತ್ತದೆ. ಇನ್ನು ಆಹಾರದಲ್ಲಿ ಆರೋಗ್ಯಕರ ವಸ್ತುಗಳನ್ನು (Healthy food) ಸೇರಿಸುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.  ಬೆನ್ನು, ಸೊಂಟ ಮತ್ತು ಮೊಣಕಾಲು ನೋವಿನಿಂದ ತೊಂದರೆಗೊಳಗಾಗಿದ್ದರೆ, ಆರೋಗ್ಯಕರ ಆಹಾರಗಳನ್ನು ಸೇವಿಸಿ. 

ಈ ಆಹಾರಗಳು ಬೆನ್ನು ನೋವನ್ನು ನಿವಾರಿಸಲು ಸಹಾಯಕವಾಗಿವೆ:
1. ಬ್ರೊಕೋಲಿ : ಬ್ರೊಕೊಲಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಬ್ರೊಕೊಲಿಯಲ್ಲಿ ವಿಟಮಿನ್ ಸಿ (VitaminC) , ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳ ಅಂಶವಿದ್ದು ಅದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ನಿಮ್ಮ ಅಡುಗೆ ಮನೆಯಲ್ಲಿರುವ ಮೆಣಸಿನ ಪುಡಿ ಕಲಬೆರಕೆಯೇ ? ಸುಲಭವಾಗಿ ಹೀಗೆ ಪತ್ತೆ ಹಚ್ಚಿ

2. ಡ್ರೈ ಫ್ರುಟ್ : ಆಹಾರದಲ್ಲಿ ಬಾದಾಮಿ, ವಾಲ್ನಟ್ಸ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಡ್ರೈ ಫ್ರುಟ್ ಸೇರಿಸಿ. ಪ್ರತಿದಿನ ಬೆರಳೆಣಿಕೆಯಷ್ಟು ಡ್ರೈ ಫ್ರುಟ್ ಗಳನ್ನು (Dry fruits) ತಿನ್ನುವುದರಿಂದ, ದೇಹವನ್ನು ಆರೋಗ್ಯಕರವಾಗಿಡಬಹುದು. ಬೆನ್ನು ನೋವನ್ನು (Back pain)  ತೆಗೆದುಹಾಕಬಹುದು.

3. ಬೀಜಗಳು: ಚಿಯಾ ಬೀಜಗಳು ಮತ್ತು ಅಗಸೆಬೀಜಗಳಂತಹ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಗಸೆಬೀಜದಲ್ಲಿ ಕಂಡುಬರುವ ಅಂಶಗಳು ಬೆನ್ನು ಮತ್ತು ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

4. ಮೀನು : ಮಾಂಸಾಹಾರಿಗಳಾಗಿದ್ದರೆ ಮೀನುಗಳನ್ನು (Fish for back pain) ತಿನ್ನಿರಿ. ಸಾಲ್ಮನ್, ಟ್ಯೂನ ಮತ್ತು ಸಾರ್ಡೀನ್ ಗಳಂತಹ ಕೊಬ್ಬಿನ ಅಂಶ ವಿರುವ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಅವುಗಳನ್ನು ಸೇವಿಸುವುದರಿಂದ ಬೆನ್ನು ನೋವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ : ಬೆಳಗಿನ ಉಪಹಾರದಲ್ಲಿ ಈ ಎರಡು ವಸ್ತುಗಳನ್ನು ಸೇವಿಸಿದರೆ ಸಾಕು, ಸಿಗಲಿದೆ ಭಾರೀ ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News