Ayurveda Tips: ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿಯಬಾರದೆ? ಈ ಹಣ್ಣುಗಳ ವಿಷಯದಲ್ಲಿ ಜಾಗ್ರತೆವಹಿಸಿ

ಈ ಹಣ್ಣುಗಳನ್ನು ಸೇವಿಸುವಾಗ ನೀರನ್ನು ಕುಡಿದರೆ ಸಮಸ್ಯೆ ಎದುರಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೀಗಾಗಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು  

Written by - Nitin Tabib | Last Updated : Apr 30, 2022, 04:39 PM IST
  • ಹಣ್ಣುಗಳ ಸೇವನೆಯ ನಂತರ ನೀರು ಕುಡಿಯಬಾರದೆ?
  • ಯಾವ ಹಣ್ಣುಗಳ ವಿಷಯದಲ್ಲಿ ಇದನ್ನು ಪಾಲಿಸಬೇಕು
  • ತಿಳಿದುಕೊಳ್ಳಲು ಈ ವರದಿಯನ್ನೊಮ್ಮೆ ಓದಿ
Ayurveda Tips: ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿಯಬಾರದೆ? ಈ ಹಣ್ಣುಗಳ ವಿಷಯದಲ್ಲಿ ಜಾಗ್ರತೆವಹಿಸಿ title=
Ayurveda Tips

ನವದೆಹಲಿ:  ತಾಜಾ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ಹೀಗಾಗಿ ವೈದ್ಯರು ಮತ್ತು ತಜ್ಞರು ಕೂಡ ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಪ್ರಸ್ತುತ ಬೇಸಿಗೆ ಕಾಲ ನಡೆಯುತ್ತಿದ್ದು ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಈ ಮಧ್ಯೆ, ದೇಹದಲ್ಲಿ ನೀರಿನ ಮಟ್ಟವನ್ನು ಸಮತೋಲನದಲ್ಲಿಡಲು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.

ಆದರೆ, ಈ ಸಲಯೆಗಳನ್ನು ಅನುಸರಿಸುವಾಗ ನಾವು ಸಣ್ಣ ತಪ್ಪನ್ನು ಮಾಡುತ್ತೇವೆ ಮತ್ತು ಅವುಗಳಿಂದ ನಮ್ಮ ದೇಹಕ್ಕೆ ಪ್ರಯೋಜನವಾಗುವ ಬದಲು ಹಾನಿ ಉಂಟಾಗುತ್ತದೆ. ಹಣ್ಣಿನ ಜೊತೆಗೆ ನೀರು ಕುಡಿಯುವುದೇ ಆ ತಪ್ಪು. ಹಣ್ಣು ಸೇವಿಸಿದ ತಕ್ಷಣ ಎಂದಿಗೂ ಕೂಡ ನೀರನ್ನು ಕುಡಿಯಬೇಡಿ ಎಂದು ಮನೆಯ ಹಿರಿಯರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಇದು ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುತ್ತದೆ. ತಜ್ಞರ ಪ್ರಕಾರ, ಹುಳಿ ಮತ್ತು ರಸಭರಿತವಾದ ಹಣ್ಣುಗಳೊಂದಿಗೆ ನೀರನ್ನು ಸೇವಿಸಬಾರದು. ಯಾವ ಹಣ್ಣುಗಳೊಂದಿಗೆ ನೀರು ಸೇವನೆಯನ್ನು ತಪ್ಪಿಸಬೇಕು ತಿಳಿದುಕೊಳ್ಳೋಣ ಬನ್ನಿ

ಬಾಳೆಹಣ್ಣು ತಿಂದ ಸ್ವಲ್ಪ ಸಮಯದ ಬಳಿಕ ನೀರು ಕುಡಿಯಿರಿ
ಬಾಳೆಹಣ್ಣು ತಿಂದ ನಂತರ ನೀರನ್ನು ಕುಡಿಯಬಾರದು, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಬಾಳೆಹಣ್ಣಿನ ಒಳಗೂ ಕೂಡ ತಣ್ಣೀರಿನ ಗುಣಲಕ್ಷಣಗಳು ಇರುತ್ತವೆ, ಇದರಿಂದಾಗಿ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಬಾಳೆಹಣ್ಣು ತಿಂದ 15-20 ನಿಮಿಷಗಳ ಕಾಲ ನೀರು ಕುಡಿಯಬಾರದು ಎಂದು ಸಲಹೆ ನೀಡಲಾಗುತ್ತದೆ.

ಕಲ್ಲಂಗಡಿ ಸೇವಿಸಿದ ನಂತರವೂ ಕೂಡ ನೀರು ಸೇವಿಸಬಾರದು
ಕಲ್ಲಂಗಡಿಯಲ್ಲಿ ಮೊದಲೇ ಸಾಕಷ್ಟು ನೀರಿನಂಶವಿರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಅದನ್ನು ತಿಂದ ನಂತರ ನೀರು ಕುಡಿದರೆ ಅವರ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಲು ಆರಂಭಗೊಳ್ಳುತ್ತದೆ. ಇದರಿಂದಾಗಿ ಹೊಟ್ಟೆ ನೋವು ಮತ್ತು ಅತಿಸಾರದ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ-ಅತಿ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಕಾರಣ ಮತ್ತು ಸುಲಭ ಪರಿಹಾರ

ಕಿತ್ತಳೆ ಸೇವನೆಯ ಬಳಿಕ ನೀರು ಸೇವನೆ ಅಪಾಯಕಾರಿ
ಕಿತ್ತಳೆ ಒಂದು ಹುಳಿ ಹಣ್ಣಾಗಿದ್ದು, ಅದರ ಸೇವನೆಯ ನಂತರ ಹೊಟ್ಟೆಯಲ್ಲಿ pH ಪ್ರಮಾಣವು ಹೆಚ್ಚಾಗುತ್ತದೆ, ಇದು ಆಮ್ಲೀಯತೆ ಮತ್ತು ಹೊಟ್ಟೆ-ನೋವಿನಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಸ್ವಲ್ಪ ಸಮಯದ ನಂತರವೇ ನೀರು ಕುಡಿಯಿರಿ.

ಇದನ್ನೂ ಓದಿ-Benefits of Tea : ನೀವು ಚಹಾ ಪ್ರಿಯರೆ? ಹಾಗಿದ್ರೆ, ತಪ್ಪದೆ ತಿಳಿಯಿರಿ ಅದರ ಅಪಾಯ-ಉಪಾಯ! 

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News