ಕುಳಿತೇ ಮಾಡುವ ಕೆಲಸದಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗಿದೆಯೇ ? ಹಾಗಿದ್ದರೆ ಈ ಎರಡು ಆಹಾರದಿಂದ ದೂರವಿರಿ

Obesity Due To Sitting Job:ಸ್ಥೂಲಕಾಯತೆ ಎನ್ನುವುದು ಒಂದು ರೋಗವಲ್ಲ. ಆದರೆ  ಅನೇಕ ರೋಗಗಳ ಮೂಲ ಮಾತ್ರ ಖಂಡಿತಾ ಹೌದು. ಅದಕ್ಕಾಗಿಯೇ ಎಷ್ಟು ಬೇಗ ಸ್ಥೂಲಕಾಯತೆಯನ್ನು ನಿಯಂತ್ರಿಸುವುದು ಸಾಧ್ಯವೂ ಅಷ್ಟು ಒಳ್ಳೆಯದು. 

Written by - Ranjitha R K | Last Updated : Jun 10, 2023, 12:28 PM IST
  • ಸ್ಥೂಲಕಾಯತೆ ಎನ್ನುವುದು ಒಂದು ರೋಗವಲ್ಲ.
  • ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
  • ಕುಳಿತುಕೊಳ್ಳುವ ಕೆಲಸದಲ್ಲಿ ಸ್ಥೂಲಕಾಯತೆಯ ಅಪಾಯ
ಕುಳಿತೇ ಮಾಡುವ ಕೆಲಸದಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗಿದೆಯೇ ? ಹಾಗಿದ್ದರೆ ಈ ಎರಡು ಆಹಾರದಿಂದ ದೂರವಿರಿ  title=

Obesity Due To Sitting Job : ತೂಕ ಹೆಚ್ಚಳ ಎನ್ನುವುದು ಇತ್ತೀಚಿನ ದಿನಗಳಲ್ಲಿ ಪ್ರತಿ ಹಂತದಲ್ಲೂ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇನ್ನು ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ, ದೇಹದ ಲುಕ್ಕೆ ಬದಲಾಗಿ ಹೋಗುತ್ತದೆ. ಸ್ಥೂಲಕಾಯತೆ ಎನ್ನುವುದು ಒಂದು ರೋಗವಲ್ಲ. ಆದರೆ ಅನೇಕ ರೋಗಗಳ ಮೂಲ ಮಾತ್ರ ಖಂಡಿತಾ ಹೌದು. ಮೊದಲನೆಯದಾಗಿ ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಂತರ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಟ್ರಿಪಲ್ ವೆಸೆಲ್ ಡಿಸೀಸ್ ಮತ್ತು ಪರಿಧಮನಿಯ ಕಾಯಿಲೆಯ ಅಪಾಯ ಉಂಟು ಮಾಡುತ್ತದೆ.  ಅದಕ್ಕಾಗಿಯೇ ಎಷ್ಟು ಬೇಗ ಸ್ಥೂಲಕಾಯತೆಯನ್ನು ನಿಯಂತ್ರಿಸುವುದು ಸಾಧ್ಯವೂ ಅಷ್ಟು ಒಳ್ಳೆಯದು. 

ಕುಳಿತುಕೊಳ್ಳುವ ಕೆಲಸದಲ್ಲಿ ಸ್ಥೂಲಕಾಯತೆಯ ಅಪಾಯ : 
ಸಾಮಾನ್ಯವಾಗಿ, ಕುಳಿತು ಕೆಲಸ ಮಾಡುವ ಜನರ ದೇಹ ತೂಕ ಬಹಳ ಬೇಗನೆ ಏರುತ್ತ ಹೋಗುತ್ತದೆ. ಏಕೆಂದರೆ ದಿನದ 8 ರಿಂದ 10 ಗಂಟೆಗಳ ಕಾಲ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವುದರಿಂದ ಅದೇ ಸ್ಥಾನದಲ್ಲಿರುವುದರಿಂದ, ಸೊಂಟ ಮತ್ತು ಹೊಟ್ಟೆಯ ಬಳಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಕರೋನವೈರಸ್ ಸಾಂಕ್ರಾಮಿಕದ ನಂತರ, ವರ್ಕ್ ಫ್ರಮ್ ಹೋಂ ಸಂಸ್ಕೃತಿಯು ಆರಂಭವಾಗಿದ್ದು ಮಾತ್ರವಲ್ಲ, ಅದರ ಅವಧಿ ವಿಸ್ತರಿಸುತ್ತಲೇ ಇದೆ. ಇದರಿಂದಾಗಿ ಜನರ ದೈಹಿಕ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗತೊಡಗಿದೆ.  ಇದರಿಂದ ಕುಳಿತುಕೊಂಡು ಕೆಲಸ ಮಾಡುವವರ ದೇಹ ತೂಕ  ಹೆಚ್ಚಾಗುವುದು ಬಹುತೇಕ ಖಚಿತ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ದೈನಂದಿನ ಆಹಾರದಿಂದ ಈ ಎರಡು ವಸ್ತುಗಳನ್ನು ದೂರ ಇಟ್ಟರೆ  ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬಹುದು. 

ಇದನ್ನೂ ಓದಿ : ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಬೆರಳುಗಳಲ್ಲಿ ಕಾಣುವುದು ಈ ಲಕ್ಷಣ

1. ಎಣ್ಣೆಯುಕ್ತ ಆಹಾರ : 
ಭಾರತದಲ್ಲಿ ಎಣ್ಣೆಯುಕ್ತ ಆಹಾರಗಳನ್ನು ತಿನ್ನುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ. ಈ ಕಾರಣದಿಂದಾಗಿ, ನಮ್ಮ ದೇಹದಲ್ಲಿ ಬಹಳಷ್ಟು ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಅದರಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಕುಳಿತು ಕೆಲಸ ಮಾಡುವವರ ಕ್ಯಾಲೊರಿ ಬರ್ನ್ ಆಗುವುದಿಲ್ಲ. ಬದಲಾಗಿ ಅದು ಕೊಬ್ಬಾಗಿ ಬದಲಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ನಿಮ್ಮ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದರೆ, ಕನಿಷ್ಠ ಆರೋಗ್ಯಕರ ಆಹಾರದ ಮೂಲಕ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸಿ.

2. ಸ್ನ್ಯಾಕ್ಸ್ : 
 ಕುಳಿತುಕೊಂಡು ಕೆಲಸ ಮಾಡುವಾಗ ಸಾಮಾನ್ಯವಾಗಿ ಚಹಾದ ಜೊತೆಗೆ  ಬಿಸ್ಕೆಟ್ ಮತ್ತು ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹಸಿವಾದಾಗ ಅಥವಾ ಏನನ್ನಾದರೂ ತಿನ್ನಬೇಕು ಅನಿಸಿದಾಗ ಚಿಪ್ಸ್, ಕರು ಕುರುಂ ತಿಂಡಿಗಳು ಮತ್ತು ಬಿಸ್ಕತ್ತುಗಳು ಹೀಗೆ ಬೇರೆ ಬೇರೆ ರೀತಿಯ ಸ್ನ್ಯಾಕ್ ಗಳನ್ನೂ ಸೇವಿಸುತ್ತಾರೆ.  ಇವುಗಳು ಬಾಯಿ ರುಚಿ ಹೆಚ್ಚಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವು ನಿಮ್ಮ ದೇಹದಲ್ಲಿ ಕ್ಯಾಲೋರಿ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ತೂಕವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ : Health Tips: ಹೃದಯವನ್ನು ಆರೋಗ್ಯಕರವಾಗಿರಿಸಲು ಈ ಜ್ಯೂಸ್ ಗಳು ನಿಮ್ಮ ಆಹಾರದಲ್ಲಿರಲಿ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News