Aishwarya Rai: ಕಳೆದ ಕೆಲವು ದಿನಗಳಿಂದ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯದ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲರ ಮಧ್ಯೆ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ-ಅಭಿಷೇಕ್ ಕೂಡ ತೀವ್ರ ಚರ್ಚೆಗಳ ಬಗ್ಗೆ ಮೌನ ವಹಿಸಿದ್ದು, ಈಗ ನಡೆಯುತ್ತಿರುವ ಮಾತುಕತೆಯ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
ಇತ್ತೀಚೆಗಷ್ಟೇ ಐಶ್ವರ್ಯಾ ಅವರ ಬೆರಳಿನಲ್ಲಿ ಉಂಗುರ ಕಾಣದಿರುವುದು ಇಬ್ಬರ ನಡುವಿನ ವಿಚ್ಛೇದನದ ಮಾತುಕತೆಗೆ ಪುಷ್ಟಿ ನೀಡಿತ್ತು. ಆದರೆ ಅಂತಹ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಿಂದಾಗಿ ಇಬ್ಬರ ನಡುವಿನ ಸಂಬಂಧದ ಬಗ್ಗೆ ದೊಡ್ಡ ಕಥೆಯೊಂದು ಬಹಿರಂಗವಾಗಿದೆ.
ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಸಂಬಂಧ ಹೇಗಿದೆ?
ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಮಾತುಕತೆಯು ಸಾಮಾಜಿಕ ಮಾಧ್ಯಮ ಮತ್ತು ಅಭಿಮಾನಿಗಳನ್ನು ಬಿರುಗಾಳಿಯಂತೆ ಹಬ್ಬುತ್ತಿದೆ... ಆದರೆ ಇಬ್ಬರೂ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಐಐಎಫ್‌ಎಯ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
\
ವೀಡಿಯೊದಲ್ಲಿ, ಅಭಿಷೇಕ್ ಐಶ್ವರ್ಯಾ ಅವರನ್ನು ಹೊಗಳುತ್ತಿರುವುದು ಕಂಡುಬಂದಿದ್ದು, ʼರಾಕ್ ಇಟ್ ಬೇಬಿ...' ಎಂದು ನಟ ಹೇಳಿದಾರೆ.. ಸದ್ಯ ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ-BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್ ಆದ ಬಿಗ್ ಬಾಸ್ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...
ಐಶ್ವರ್ಯಾ - ಅಭಿಷೇಕ್ ವಿಚ್ಛೇದನದ ಮಾತು ಯಾಕೆ?
ಕಳೆದ ಕೆಲವು ದಿನಗಳಿಂದ ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಕುರಿತು ಚರ್ಚೆಯಾಗುತ್ತಿದೆ. ಏಕೆಂದರೆ ಅಭಿಷೇಕ್ ಮತ್ತು ಆರಾಧ್ಯ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಈಗ ಬರೀ ಒಂಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಇದರಿಂದಾಗಿ ಐಶ್ವರ್ಯಾ - ಅಭಿಷೇಕ್ ವಿಚ್ಛೇದನದ ಮಾತುಕತೆ ವೇಗ ಪಡೆದುಕೊಂಡಿದೆ. ಇದಲ್ಲದೇ, ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಅನಂತ್ ಅಂಬಾನಿ ಅವರ ಮದುವೆಯಲ್ಲಿ ಭಾಗವಹಿಸಿದ್ದರು, ಆದರೆ ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಒಬ್ಬರೇ ಆಗಮಿಸಿದ್ದರು. ಇದರಿಂದ ಸಾಕಷ್ಟು ಮಂದಿ ಅಭಿಷೇಕ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಐಶ್ವರ್ಯ - ಅಭಿಷೇಕ್ ಮದುವೆ
ನಟ ಸಲ್ಮಾನ್ ಖಾನ್ ಜೊತೆ ಮುರಿದುಬಿದ್ದ ನಂತರ, ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರ ಜೀವನಕ್ಕೆ ಪ್ರವೇಶಿಸಿದರು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಅವರು ಮದುವೆಯಾಗಲು ನಿರ್ಧರಿಸಿದರು. ಐಶ್ವರ್ಯಾ - ಅಭಿಷೇಕ್ 2007 ರಲ್ಲಿ ವಿವಾಹವಾದರು. ನಂತರ 2011 ರಲ್ಲಿ ಐಶ್ವರ್ಯಾ ಆರಾಧ್ಯ ಅವರಿಗೆ ಜನ್ಮ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.