ಬಾಳೆಹಣ್ಣಿನ ಟೀ ಕುಡಿಯಿರಿ.! ನಿದ್ದೆ ಚೆನ್ನಾಗಿ ಬರುತ್ತೆ

 ಸ್ಟ್ರೆಸ್ ನಿವಾರಣೆ ಮತ್ತು ನಿರಾತಂಕದ ನಿದ್ರೆಗೆ ಇವತ್ತು ಒಂದು ಪೇಯದ ಬಗ್ಗೆ ಹೇಳಲಿದ್ದೇವೆ. ಅದು ಮತ್ತೇನೂ ಅಲ್ಲ, ಬಾಳೆ ಹಣ್ಣು ಚಹ .

Written by - Ranjitha R K | Last Updated : Apr 20, 2021, 12:08 PM IST
  • ಬಾಳೆಹಣ್ಣಿನ ಟೀ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ
  • ಇಲ್ಲಿ ಬಾಳೆಹಣ್ಣಿನ ಚಹಾ ಮಾಡೋದು ಹೇಗೆ ಎಂಬುದನ್ನು ತಿಳಿಯಿರಿ
  • ಬಾಳೆಹಣ್ಣಿನ ಚಹಾದಿಂದ ದೇಹಕ್ಕೆ ಸಾಕಷ್ಟು ಲಾಭ ಇದೆ.
ಬಾಳೆಹಣ್ಣಿನ ಟೀ ಕುಡಿಯಿರಿ.! ನಿದ್ದೆ ಚೆನ್ನಾಗಿ ಬರುತ್ತೆ title=
ಬಾಳೆಹಣ್ಣಿನ ಟೀ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ (file photo)

ನವದೆಹಲಿ: ಇವತ್ತಿನ ದಿನಗಳಲ್ಲಿ ಎಲ್ಲರೂ ಕೂಡಾ ಒಂದಲ್ಲ ಒಂದು ರೀತಿಯ ಸ್ಟ್ರೆಸ್ ಎದುರಿಸುತ್ತಲೇ ಇದ್ದಾರೆ. ಸ್ಟ್ರೆಸ್ ಎದುರಿಸದ ವ್ಯಕ್ತಿಯೇ ಇಲ್ಲ ಎಂದು ಹೇಳಬಹುದು. ಸ್ಟ್ರೆಸ್ ಹೆಚ್ಚಾದಾಗ ನಿದ್ರೆ ಮಾಯವಾಗುತ್ತದೆ. ನಿದ್ರೆ ಮಾಯವಾದಾಗ ಇನ್ನೂ ಹಲವು ರೋಗಗಳು ನಮ್ಮನ್ನು ಮುತ್ತಿಕೊಳ್ಳುತ್ತದೆ. ಸ್ಟ್ರೆಸ್ ನಿವಾರಣೆ ಮತ್ತು ನಿರಾತಂಕದ ನಿದ್ರೆಗೆ ಇವತ್ತು ಒಂದು ಪೇಯದ ಬಗ್ಗೆ ಹೇಳಲಿದ್ದೇವೆ. ಅದು ಮತ್ತೇನೂ ಅಲ್ಲ, ಬಾಳೆ ಹಣ್ಣು ಚಹ (Banana Tea). ನೀವು ಬಾಳೆಹಣ್ಣು ಚಹಾದ ಬಗ್ಗೆ ಕೇಳಿರಕ್ಕಿಲ್ಲ. ಬಾಳೆಹಣ್ಣು (Banana) ಎಲ್ಲರ ಫೆವರಿಟ್ ಹಣ್ಣು. ಈ ಹಣ್ಣಿನಿಂದ ಮಾಡಿದ ಚಹಾ ಕುಡಿದರೆ ಹತ್ತು ಹಲವು ಹೆಲ್ತ್ ಲಾಭ ಗಳಿವೆ. 

ಬಾಳೆಹಣ್ಣಿನ ಟೀ ಮಾಡುವುದು ಹೇಗೆ..?
1. ಒಂದು ಪಾನ್ ನಲ್ಲಿ ನೀರು (water) ಕುದಿಯಲು ಇಡಿ. 
2. ಬಾಳೆಹಣ್ಣು (Banana) ಸಿಪ್ಪೆ ತೆಗೆದು ಕುದಿಯುವ ನೀರಿಗೆ ಹಾಕಿ
3. ಕುದಿಯುವ ನೀರಿಗೆ ಹಾಕುವ ಮೊದಲು ಬಾಳೆಹಣ್ಣಿನ ಎರಡೂ ತುದಿ ಕಟ್ ಮಾಡಿ
4. 10-15 ನಿಮಿಷ ಅದನ್ನು ಕುದಿಸಿ
5. ಅದಕ್ಕೆ ಒಂದು ಚಿಟಿಕೆ ದಾಲ್ಚಿನಿ ಪುಡಿ ಹಾಕಿ, ಸ್ವಲ್ಪ ಕುದಿಸಿ ಗ್ಯಾಸ್ ಬಂದ್ ಮಾಡಿ
6. ಅದನ್ನು ಬೇರೊಂದು ಪಾತ್ರೆಗೆ ಸೋಸಿ. ಇಲ್ಲಿಗೆ ಬಾಳೆಹಣ್ಣು ಟೀ ತಯಾರ್
7. ಇನ್ನು ನೀವು ಬಿಸಿ ಬಿಸಿ ಬಾಳೆಹಣ್ಣಿನ ಚಹಾವನ್ನು (Banana tea) ಆಸ್ವಾಧಿಸಬಹುದು.

ಇದನ್ನೂ ಓದಿ : Oxygen Level: ಕರ್ಪೂರ, ಅಜ್ವಾಯಿನ್, ಲವಂಗ್ ಹಾಗೂ ನೀಲಗಿರಿ ಎಣ್ಣೆ ಆಕ್ಷಿಜನ್ ಮಟ್ಟ ಹೆಚ್ಚಿಸುತ್ತವೆಯೇ? ಇಲ್ಲಿದೆ ನಿಜಾಂಶ

ಬಾಳೆಹಣ್ಣು ಚಹಾದ ಲಾಭಗಳೇನು.?
1. ಉತ್ತಮ ನಿದ್ದೆ: 
ಬಾಳೆಹಣ್ಣಿನ ಟೀಯಲ್ಲಿ ಟ್ರಿಪ್ಟೊಫಾನ್ ಎಂಬಅಮಿನೋ ಆಸಿಡ್ ಇರುತ್ತದೆ. ಇದು ನಿದ್ರಾಹೀನತೆಯನ್ನು ನಿವಾರಿಸುತ್ತದೆ.  ಈ ಅಮಿನೋ ಆಸಿಡ್ ನಿಂದಾಗಿ ನಿಮ್ಮ ಮೆದುಳು ಶಾಂತವಾಗುತ್ತದೆ. ಜೊತೆಗೆ ಒತ್ತಡ ಕಡಿಮೆಯಾಗುತ್ತದೆ.  ಒಳ್ಳೆ ನಿದ್ದೆ ಬರುತ್ತದೆ.

2. ತೂಕ ಇಳಿಕೆ:
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ನ್ಯಾಚುರಲ್ ಶುಗರ್ (natural sugar) ಇರುತ್ತದೆ. ನೀವು ಅದನ್ನು ಕುದಿಸುವಾಗ ನ್ಯಾಚುರಲ್ ಶುಗರ್ ಎಷ್ಟು ಬೇಕೋ ಅಷ್ಟು  ಬಿಸಿನೀರಿಗೆ ರಿಲೀಸ್ ಆಗುತ್ತದೆ.  ಹಾಗಾಗಿ, ಬಾಳೆ ಹಣ್ಣಿನ ಟೀ ಸ್ವಲ್ಪ ಸಿಹಿ ಸಿಹಿ ಯಾಗಿರುತ್ತದೆ.  ಇದು ತೂಕ ಇಳಿಸಲು (Weight loss) ನೆರವಾಗುತ್ತದೆ.

ಇದನ್ನೂ ಓದಿ : ನಿಮ್ಮ ಲಿವರ್ ಹೆಲ್ತ್ ಕಾಪಾಡಿ.! ಈ 5 ಆಹಾರಗಳಿಂದ ದೂರ ಇರಿ

3. ಹೃದಯಾರೋಗ್ಯಕ್ಕೆ.:
ಬಾಳೆಹಣ್ಣಿನಲ್ಲಿ ಮೆಗ್ನೇಶಿಯಂ ಮತ್ತು ಪೊಟ್ಯಾಶಿಯಂ ಮುಂತಾದ ಮಿನರಲ್ ಇರುತ್ತದೆ. ಇದರಿಂದ ರಕ್ತದೊತ್ತಡ (Blood pressure) ಕಡಿಮೆಯಾಗುತ್ತದೆ. ಅಲ್ಲದೆ ಸ್ಟ್ರೋಕ್ ಮುಂತಾದ ಕಾಯಿಲೆಗಳೂ ದೂರವಾಗುತ್ತದೆ. ಇದಲ್ಲದೆ ಬಾಳೆಹಣ್ಣಿನಲ್ಲಿ ಕೈಟೆಚಿನ್ ಎಂಬಅಂಟಿಆಕ್ಸಿಡೆಂಟ್ ಕೂಡಾ ಇರುತ್ತದೆ. ಇದು ಹೃದಯವನ್ನು ಹೆಲ್ತಿಯಾಗಿಡುತ್ತದೆ.

4. ಖಿನ್ನತೆ ದೂರಮಾಡುತ್ತದೆ.
ನಿಮಗೆ ಖಿನ್ನತೆ ಅಥವಾ ಆಂಕ್ಸೈಟಿ ಕಾಯಿಲೆ ಕಾಡುತ್ತಿದ್ದರೆ ಖಂಡಿತಾ ಬಾಳೆಹಣ್ಣಿನ ಟೀ ಕುಡಿಯಬೇಕು. ಇದರಲ್ಲಿ ಡೊಪಮೈನ್ ಮತ್ತು ಸೆರೋಟೆನಿನ್ ಇರುತ್ತದೆ. ಇದು ಶರೀರದ ಮೂಡ್ ಕಂಟ್ರೋಲ್ ಮಾಡುವ ಹಾರ್ಮೋನ್ ಲೆವೆಲ್ ಏರಿಸಲು ನೆರವಾಗುತ್ತದೆ.

ಇದನ್ನೂ ಓದಿ : Banana For Weight Loss: ಸುಲಭವಾಗಿ ತೂಕ ಇಳಿಸಲು ಈ ರೀತಿಯ ಬಾಳೆಹಣ್ಣು ಬಳಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News