Alert! ಜಿಮ್ ನಲ್ಲಿ ಅತಿ ಹೆಚ್ಚು ವ್ಯಾಯಾಮ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ, ತಜ್ಞರು ಹೇಳುವುದೇನು?

Alert! ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಜಿಮ್‌ನಲ್ಲಿ (Gym) ಎರಡು ಗಂಟೆಗಳ ಕಾಲ ವ್ಯಾಯಾಮ (Exercise) ಮಾಡಿದ ನಂತರ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ನಂತರ ಜಿಮ್ ಮತ್ತು ವರ್ಕೌಟ್‌ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಹುಟ್ಟಿಕೊಂಡಿವೆ.

Written by - Nitin Tabib | Last Updated : Oct 31, 2021, 11:11 AM IST
  • ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.
  • ಭಾರವಾದ ತೂಕ ಎತ್ತುವ ಜನರು ಹೆಚ್ಚು ಅಪಾಯದಲ್ಲಿರುತ್ತಾರೆ.
  • ಜಿಮ್ನಲ್ಲಿ ಗಂಭೀರವಾದ ವ್ಯಾಯಾಮವು ಸಮಸ್ಯೆಗಳನ್ನು ಉಂಟುಮಾಡಬಹುದು.
Alert! ಜಿಮ್ ನಲ್ಲಿ ಅತಿ ಹೆಚ್ಚು ವ್ಯಾಯಾಮ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ, ತಜ್ಞರು ಹೇಳುವುದೇನು? title=
Gym Workout (File Photo)

ನವದೆಹಲಿ: Alert - ಜಿಮ್‌ನಲ್ಲಿ ವರ್ಕೌಟ್ (Gym Workout) ಮಾಡುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಫಿಟ್ ಆಗಿರಲು ಜನರು ಹೆಚ್ಚು ವ್ಯಾಯಾಮ (Exercise)ಮಾಡುತ್ತಿದ್ದಾರೆ. ಆದರೆ ಗಂಭೀರವಾಗಿ ವರ್ಕೌಟ್ ಮಾಡುವುದು ನಿಮ್ಮ ಹೃದಯಕ್ಕೆ ಅಪಾಯಕಾರಿ ಎಂದು ಸಾಬೀತಾಗಬಹುದು ಎಂಬುದು ನಿಮಗೆ ತಿಳಿದಿದೆಯೇ. ಇತ್ತೀಚೆಗಷ್ಟೇ ನಮ್ಮ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್‌ನಲ್ಲಿ ಎರಡು ಗಂಟೆಗಳ ಕಾಲ ವರ್ಕ್ ಔಟ್ ಮಾಡಿದ ನಂತರ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಇದರ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸ್ವಲ್ಪ ಸಮಯದ  ನಂತರ ನಿಧನರಾಗಿದ್ದಾರೆ. ಈ ಘಟನೆಯ ನಂತರ ಜಿಮ್ ಮತ್ತು ವರ್ಕೌಟ್‌ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಹುಟ್ಟಿಕೊಂಡಿವೆ. ಅಷ್ಟಕ್ಕೂ ಜಿಮ್ ನಲ್ಲಿ ಎಷ್ಟು ವ್ಯಾಯಾಮ ಮಾಡಿದರೆ ದೇಹಕ್ಕೆ ಒಳ್ಳೆಯದಾ? ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ? ತಿಳಿಯೋಣ ಬನ್ನಿ.

ಹೆವಿ ವೇಟ್ ಲಿಫ್ಟಿಂಗ್ ಮಾಡುವವರಿಗೆ ಹೆಚ್ಚು ರಿಸ್ಕ್
ವ್ಯಾಯಾಮ ಮಾಡುವುದು ಆರೋಗ್ಯಕ್ಕೆ (Health Tips) ಒಳ್ಳೆಯದು ಎಂದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಗಂಭೀರವಾಗಿ ವರ್ಕ್ ಔಟ್ ಮಾಡುವುದು ನಿಮ್ಮ ಹೃದಯಕ್ಕೆ ಮಾರಕವಾಗಬಹುದು. ಹೃದಯ ತಜ್ಞರ ಪ್ರಕಾರ, ಜಿಮ್‌ನಲ್ಲಿ ತೀವ್ರವಾದ ವ್ಯಾಯಾಮಗಳನ್ನು ಮಾಡುವುದು ಮತ್ತು ಭಾರವಾದ ತೂಕವನ್ನು ಎತ್ತುವುದು ಅಪಾಯಕಾರಿ ಸಾಬೀತಾಗಬಹುದು

ಹೆಚ್ಚಾಗುತ್ತಿವೆ ಹಾರ್ಟ್ ಅಟ್ಯಾಕ್ ಪ್ರಕರಣಗಳು
ತಜ್ಞರ ಪ್ರಕಾರ, 20 ರಿಂದ 25 ವರ್ಷಗಳ ಹಿಂದೆ, 30 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 6 ತಿಂಗಳಿಗೊಮ್ಮೆ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತವೆ. ಆದರೆ ಇಂದು ಪ್ರತಿ ವಾರ ಇಂತಹ ಪ್ರಕರಣ ಮುನ್ನೆಲೆಗೆ ಬರುತ್ತಿವೆ. 

ತಜ್ಞರು ಹೇಳುವುದೇನು?
ವ್ಯಾಯಾಮದಿಂದ ಒಳ್ಳೆಯ ಮತ್ತು ಕೆಟ್ಟ ಎರಡೂ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಹೃದಯ ತಜ್ಞರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ಹೇಗೆ ವ್ಯಾಯಾಮ ಮಾಡುತ್ತಾನೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಇದರಿಂದಾಗಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ.

ಇದನ್ನೂ ಓದಿ-Carrot Benefits: ಚಳಿಗಾಲದಲ್ಲಿ ಗಜ್ಜರಿ ಸೇವನೆಯಿಂದಾಗುವ ಈ ಲಾಭಗಳು ನಿಮಗೂ ತಿಳಿದಿರಲಿ

ವರ್ಕೌಟ್ ಹೇಗೆ ಮಾಡಬೇಕು? (Best Exercise)
ವೈದ್ಯರ ಪ್ರಕಾರ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಸಾಮಾನ್ಯ ವ್ಯಾಯಾಮ ಮಾಡಬೇಕು. ಗಂಭೀರವಾದ ವ್ಯಾಯಾಮವು ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ವ್ಯಾಯಾಮ ಮಾಡಲು ಇದು ಸರಿಯಾದ ಮಾರ್ಗವಾಗಿದೆ.

ಇದನ್ನೂ ಓದಿ-Ghee Benefits: ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪವನ್ನು ತಿನ್ನಿರಿ, ಅದ್ಭುತ ಚಮತ್ಕಾರ ನೋಡಿರಿ

>> ಮೊದಲು 5 ರಿಂದ 10 ನಿಮಿಷಗಳ ಕಾಲ ವಾರ್ಮ್ ಅಪ್ ಮಾಡಿ
>> ಆರೋಗ್ಯವನ್ನು ಉತ್ತಮವಾಗಿಡಲು ನಿತ್ಯ 20 ರಿಂದ 30 ನಿಮಿಷ ವರ್ಕೌಟ್ ಮಾಡಬಹುದು.
>> ಇದಾದ ಬಳಿಕ ಶರೀರವನ್ನು ತಂಪಾಗಿಸಲು 5 ರಿಂದ 10 ನಿಮಿಷ ಬಿಡಿ.

ಇದನ್ನೂ ಓದಿ-Winter Superfood: ಭೂಮಿಯ ಮೇಲಿನ ಅತ್ಯಂತ ಆರೋಗ್ಯಕರ ಆಹಾರ ಯಾವುದು ಗೊತ್ತಾ? ಉತ್ತರ ಕೇಳಿ ನಿಮ್ಮ ತಲೆಯೂ ಕೂಡ ಗಿರಕಿ ಹೊಡೆಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News