ಶೀತ, ನೆಗಡಿ, ಕೆಮ್ಮಿಗೆ ಔಷಧಿ ಬೇಕಿದ್ದರೆ ಈ ವಿವರ ಕಡ್ಡಾಯ

ಕಳೆದ 24 ಗಂಟೆಗಳಲ್ಲಿ ದೇಶದ 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಕೊರೊನಾವೈರಸ್ ಪ್ರಕರಣಗಳು ಕಂಡುಬಂದಿಲ್ಲ. ಅದೇ ವೇಳೆ ಕರೋನವೈರಸ್ನಿಂದ ಮರಣ ಪ್ರಮಾಣವು 3.2% ಆಗಿದ್ದರೆ, ಚೇತರಿಕೆ ಪ್ರಮಾಣ 33.6% ಆಗಿದೆ.  

Last Updated : May 15, 2020, 12:20 PM IST
ಶೀತ, ನೆಗಡಿ, ಕೆಮ್ಮಿಗೆ ಔಷಧಿ ಬೇಕಿದ್ದರೆ ಈ ವಿವರ ಕಡ್ಡಾಯ title=

ನವದೆಹಲಿ: ಕರೋನವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ದೇಶಾದ್ಯಂತ ಸುಮಾರು 82 ಸಾವಿರ (81,970) ತಲುಪಿದೆ. ಆರಂಭದಲ್ಲಿ ಈ ಸಂಖ್ಯೆ ತೀರಾ ಕಡಿಮೆ ಇದ್ದ ಕೆಲವು ರಾಜ್ಯಗಳಿವೆ, ಆದರೆ ಈಗ ಅಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಂತಹ ರಾಜ್ಯಗಳಲ್ಲಿ ಜಾರ್ಖಂಡ್ ಕೂಡ ಒಂದು. ಗುರುವಾರ ಕರೋನಾವೈರಸ್ನ 22 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರ ನಂತರ ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 203ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಇತರ ರಾಜ್ಯಗಳಿಂದ ಹಿಂದಿರುಗಿದ ವಲಸಿಗರು. ಆದಾಗ್ಯೂ, ದೇಶದ 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನವೈರಸ್ನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಕರೋನವೈರಸ್ನಿಂದ ಮರಣ ಪ್ರಮಾಣವು 3.2% ಆಗಿದ್ದರೆ, ಚೇತರಿಕೆ ಪ್ರಮಾಣ 33.6% ಆಗಿದೆ.

ಶೀತ-ಕೆಮ್ಮಿಗೆ ಔಷಧಿ ಪಡೆಯಲು ನಿಮ್ಮ ಗುರುತಿನ ವಿವರ ಕಡ್ಡಾಯ:
ಕರೋನಾವೈರಸ್‌ನ ನಿರಂತರ ಬೆದರಿಕೆಯನ್ನು ಗ್ರಹಿಸಿದ ಉತ್ತರ ಪ್ರದೇಶ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಈಗ ನೀವು ಯುಪಿಯಲ್ಲಿ ಶೀತ ಮತ್ತು ಕೆಮ್ಮಿಗೆ ಔಷಧಿ ತೆಗೆದುಕೊಳ್ಳುವಾಗ ನಿಮ್ಮ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗಿದೆ. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ. 

ಅಧಿಕೃತ ಅಧಿಸೂಚನೆಯ ಪ್ರಕಾರ, ಎಲ್ಲಾ ಔಷಧಿ ವಿತರಕರು (ವೈದ್ಯಕೀಯ ಮಳಿಗೆಗಳು) ಶೀತ, ಕೆಮ್ಮು ಮತ್ತು ಜ್ವರದ ರೋಗಲಕ್ಷಣಗಳಿಗಾಗಿ ಔಷಧಿ ತೆಗೆದುಕೊಳ್ಳುವವರ ಬಗ್ಗೆ ಮಾಹಿತಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅಂತಹ ಜನರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳಬೇಕಾಗಿರುತ್ತದೆ ಮತ್ತು ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಗೆ ಅವರ ವಿವರ ಸಲ್ಲಿಸಬೇಕು. ಮಂಡಳಿಯ ವೆಬ್‌ಸೈಟ್‌ನಲ್ಲಿ ಇದನ್ನು ಪ್ರತಿದಿನ ಸಂಜೆ 5 ಗಂಟೆಯೊಳಗೆ ನವೀಕರಿಸಲಾಗುವುದು ಎಂದು ತಿಳಿಸಿದೆ.

ವೈದ್ಯಕೀಯ ಅಂಗಡಿ ಮಾಲೀಕರಿಗೆ ಸೂಚನೆ:
ಕರೋನಾ ವೈರಸ್‌ನಿಂದ ರಕ್ಷಿಸಲು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳವರೆಗೆ ದೃಢವಾದ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು, ಜ್ವರಕ್ಕೆ ಔಷಧಿ ಪಡೆಯುವವರ ಪಡೆದು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರದ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಔಷಧಿ ಅಂಗಡಿಗಳು ಶೀತ ಮತ್ತು ಕೆಮ್ಮು, ಜ್ವರಕ್ಕಾಗಿ ಔಷಧಿಗಳನ್ನು ಮಾರಾಟ ಮಾಡುವಾಗ ಅವರ ಮಾಹಿತಿ ಸಂಗ್ರಹಿಸಿ ಅದನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. 

ಸೆಲ್ಫ್ ಮೆಡಿಸಿನ್ ಬಗ್ಗೆ ಇರಲಿ ಎಚ್ಚರ!
ಈ ಹಿಂದೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದಿಂದಾಗಿ ಗುಜರಾತ್‌ನ ವೈದ್ಯಕೀಯ ಮಳಿಗೆಗಳಲ್ಲಿ ಉಂಟಾದ ಕೋಲಾಹಲ ಮತ್ತು ಹಾನಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಐದು ರಾಜ್ಯಗಳು ಈಗಾಗಲೇ ಇಂತಹ ಆದೇಶ ಹೊರಡಿಸಿವೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಒಡಿಶಾದ ನಂತರ ಈಗ ಉತ್ತರಪ್ರದೇಶದಲ್ಲೂ ಈ ಆದೇಶ ಹೊರಡಿಸಲಾಗಿದೆ. ಕರೋನದ ಲಕ್ಷಣಗಳು ಕಂಡುಬಂದಾಗ ಜನರು ಆಸ್ಪತ್ರೆಗೆ ಹೋಗುವ ಬದಲು ತಮ್ಮದೇ ಆದ ಚಿಕಿತ್ಸೆಯನ್ನು ಪ್ರಯತ್ನಿಸಬಾರದು. ಸೆಲ್ಫ್ ಮೆಡಿಸಿನ್ ಹಲವು ಸಂದರ್ಭಗಳಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು ಹೀಗಾಗಿ ಯಾರೂ ಸಹ ಸ್ವಯಂ ಔಷಧಿ ತೆಗೆದುಕೊಳ್ಳಬಾರದು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
 

Trending News