ಮೊಡವೆ, ಅನಗತ್ಯ ಕೂದಲ ಸಮಸ್ಯೆಯಿಂದ ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು!

ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಐದು ವಯಸ್ಕ ಮಹಿಳೆಯರಲ್ಲಿ ಒಬ್ಬರು ಮತ್ತು ಐದು ಹದಿಹರೆಯದವರಲ್ಲಿ ಇಬ್ಬರು ಪಿಸಿಓಎಸ್ನಿಂದ ಬಳಲುತ್ತಿದ್ದಾರೆ.

Last Updated : Jan 15, 2019, 03:22 PM IST
ಮೊಡವೆ, ಅನಗತ್ಯ ಕೂದಲ ಸಮಸ್ಯೆಯಿಂದ ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು!  title=

ಮಹಿಳೆಯರ ಮುಖದ ಮೇಲೆ ಮೂಡುವ ಮೊಡವೆ ಮತ್ತು ಅನಗತ್ಯ ಕೂದಲು(Unwanted Hairs) ಮಹಿಳೆಯರಿಗೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಇದರಿಂದಾಗಿ ಸಮಾಜದಲ್ಲಿ ಭಾವನಾತ್ಮಕ ಒತ್ತಡ ಮತ್ತು ಕಿರಿಕಿರಿ ಅನುಭವಿಸುವಂತಾಗುತ್ತದೆ. ಇದರಿಂದ ಖಿನ್ನತೆಗೆ ಒಳಗಾಗುವ ಸಂಭವವಿದೆ. ಈ ಸಮಸ್ಯೆಯನ್ನು ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಓಎಸ್) ಎಂದು ಕರೆಯಲಾಗುತ್ತದೆ. ಶೀಘ್ರದಲ್ಲೇ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಇದರಿಂದ ಉಂಟಾಗುವ ಭಾವನಾತ್ಮಕ ಒತ್ತಡವನ್ನು ಕಡಿಮೆ ಮಾಡಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ವಾಸ್ತವವಾಗಿ ಚಯಾಪಚಯ, ಹಾರ್ಮೋನ್ ಮತ್ತು ಮಾನಸಿಕ ಕಾಯಿಲೆಯಾಗಿದೆ. ಇದನ್ನು ನಿರ್ವಹಿಸಬಹುದು, ಆದರೆ ಈ ಬಗ್ಗೆ ಸರಿಯಾಗಿ ಗಮನ ಹರಿಸದಿದ್ದರೆ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರಬಹುದು.

ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಐದು ವಯಸ್ಕ ಮಹಿಳೆಯರಲ್ಲಿ ಒಬ್ಬರು ಮತ್ತು ಐದು ಹದಿಹರೆಯದವರಲ್ಲಿ ಇಬ್ಬರು ಪಿಸಿಓಎಸ್ನಿಂದ ಬಳಲುತ್ತಿದ್ದಾರೆ. ಮೊಡವೆ ಮತ್ತು ಹಿರ್ಸುಟಿಸಮ್ ಪಿಸಿಓಎಸ್ನ ಕೆಟ್ಟ ಲಕ್ಷಣಗಳಾಗಿವೆ. ಪಿಸಿಓಎಸ್ನ ಮುಖ್ಯ ಲಕ್ಷಣವೆಂದರೆ ಹೈಪರ್ಆಂಡ್ರೋಜೆನಿಜಮ್, ಅಂದರೆ ಹೆಣ್ಣಿನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಡ್ರೊಜೆನ್ಗಳು (ಟೆಸ್ಟೋಸ್ಟೆರಾನ್ ನಂತಹ ಪುರುಷ ಲೈಂಗಿಕ ಹಾರ್ಮೋನುಗಳು) ಕಂಡು ಬರುತ್ತದೆ. ಈ ಪರಿಸ್ಥಿತಿಯಲ್ಲಿ, ಮಹಿಳೆಯ ಮುಖದ ಮೇಲೆ ಕೂದಲು ಬರುತ್ತದೆ. 

ದೆಹಲಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಅಧ್ಯಕ್ಷರು ಮತ್ತು ದೆಹಲಿ ಗೆಯೆಕ್ಲಿಸ್ಟ್ ಫೋರಮ್ (ದಕ್ಷಿಣ) ಅಧ್ಯಕ್ಷ ಡಾ. ಮೀನಾಕ್ಷಿ ಅಹುಜಾ ಅವರ ಪ್ರಕಾರ ಮೊಡವೆ ಮತ್ತು ಮುಖದ ಮೇಲೆ ಮೂಡುವ ಅನಗತ್ಯ ಕೂದಲನ್ನು ಸಾಮಾನ್ಯವಾಗಿ ಕಾಸ್ಮೆಟಿಕ್ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಇದು ಪಿಸಿಓಎಸ್ನ ರೋಗಲಕ್ಷಣ ಎಂದು ತಿಳಿದುಕೊಳ್ಳಬೇಕು ಮತ್ತು ಹಾರ್ಮೋನುಗಳ ಅಸಮತೋಲನ ಮತ್ತು ಇನ್ಸುಲಿನ್ ಪ್ರತಿರೋಧದಂತಹ ಕಾರಣಗಳ ಚಿಕಿತ್ಸೆಯಲ್ಲಿ ವೈದ್ಯಕೀಯ ಸಲಹೆಯನ್ನು ಪಡೆಯಬೇಕು ಎನ್ನುತ್ತಾರೆ.

ಪಿಸಿಓಎಸ್ ಸವಾಲು:
ಮೊಡವೆ ಮತ್ತು ಹಿರ್ಸುಟಿಸಮ್ ಚಿಕಿತ್ಸೆಯ ಬಗ್ಗೆ, ಡಾ. ಮೀನಾಕ್ಷಿ ಅಹುಜಾ ಪಿಸಿಓಎಸ್ ಒಂದು ಸವಾಲಿನ ಸಿಂಡ್ರೋಮ್ ಎಂದು ಹೇಳಿದರು, ಆದರೆ ಅಪಾಯಗಳನ್ನು ನಿರ್ವಹಿಸಲು ಸಾಕಷ್ಟು ಅವಕಾಶಗಳಿವೆ. ಪಿಸಿಓಎಸ್ ಬಗ್ಗೆ ಉತ್ತಮ ಜಾಗೃತಿ ಅಗತ್ಯವಿದೆ, ಆದ್ದರಿಂದ ಮಹಿಳೆಯರು ರೋಗಲಕ್ಷಣಗಳನ್ನು ಗುರುತಿಸಿ, ಸರಿಯಾದ ಸಮಯದಲ್ಲಿ ಸರಿಯಾದ ವೈದ್ಯಕೀಯ ಸಹಾಯವನ್ನು ಪಡೆಯುವ ಅಗತ್ಯವಿದೆ. 

ಪಿಸಿಓಎಸ್ನ ಲಕ್ಷಣಗಳನ್ನು ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ, ಸಾಕಷ್ಟು ವ್ಯಾಯಾಮ ಮತ್ತು ಸರಿಯಾದ ಚಿಕಿತ್ಸೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ನಿಯಂತ್ರಿಸಬಹುದು ಎಂದು ಅವರು ಹೇಳಿದರು. ಹೀಗೆ ಮಾಡುವುದರಿಂದ ಹಾರ್ಮೋನುಗಳ ಅಸಮತೋಲನವು ಗುಣಪಡಿಸುತ್ತದೆ. ಇದರಿಂದ ಮೊಡವೆ ಮತ್ತು ಹಿರ್ಸುಟಿಸಮ್ ಅನ್ನು ತಡೆಗಟ್ಟಬಹುದು. 

ಐದು ರಿಂದ ಎಂಟು ಪ್ರತಿಶತ ಮಹಿಳೆಯರು ಹಿರ್ಸುಟಿಸಮ್ನಿಂದ ಬಳಲುತ್ತಿದ್ದಾರೆ!
ದೇಶದಲ್ಲಿ ಐದು ರಿಂದ ಎಂಟು ಪ್ರತಿಶತ ಮಹಿಳೆಯರು ಹಿರ್ಸುಟಿಸಮ್ನಿಂದ ಬಳಲುತ್ತಿದ್ದಾರೆ. ಮೊಡವೆ ಕೂಡ ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಇದು ಪಿಸಿಓಎಸ್ನ ರೋಗಲಕ್ಷಣವಾಗಿದೆ. ಈ ಎರಡೂ ರೋಗಲಕ್ಷಣಗಳು ಮಹಿಳೆಯ ದೈಹಿಕ ಸ್ವರೂಪದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಸರಿಯಾದ ಚಿಕಿತ್ಸೆಯಿಲ್ಲದೆ ಮಹಿಳೆಯ ಆತ್ಮ ವಿಶ್ವಾಸವು ಕುಗ್ಗುತ್ತದೆ. ಮೊಡವೆ ಇರುವವರಲ್ಲಿ 18 ಪ್ರತಿಶತದಷ್ಟು ಜನ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ ಎಂಬುದನ್ನು ಅಧ್ಯಯನ ಕಂಡು ಹಿಡಿದಿದೆ.

ಸಕಾಲಕ್ಕೆ ಚಿಕಿತ್ಸೆ ಅಗತ್ಯ:
ಸಮಾಜ ಮತ್ತು ಕುಟುಂಬದಲ್ಲಿ ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರ ಯೋಗಕ್ಷೇಮವನ್ನು ಮಾನಸಿಕ ಒತ್ತಡವನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪೂರ್ಣ ವಿಶ್ವಾಸದೊಂದಿಗೆ ನಿಭಾಯಿಸಲು ಅವರಿಗೆ ಸಹಕಾರ ನೀಡಲು ಪ್ರಯತ್ನಿಸಬೇಕು ಎಂದು ಡಾ. ಅಹುಜಾ ಹೇಳಿದರು. ಹೆಚ್ಚಿನ ಮಹಿಳೆಯರಿಗೆ ಈ ಪರಿಸ್ಥಿತಿಯ ಅರಿವಿಲ್ಲ ಮತ್ತು ಅವರು ಚರ್ಮ ಹಾನಿಗೊಳಗಾದಾಗ ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಸ್ವಯಂ ಪರಿಹಾರಗಳನ್ನು ತೆಗೆದುಕೊಳ್ಳುತ್ತಾರೆಂದು ಅವರು ಹೇಳಿದರು. ರೋಗಲಕ್ಷಣಗಳನ್ನು ನೀವು ಪರಿಗಣಿಸದಿದ್ದರೆ ಮೊಡವೆ ಮತ್ತು ಮುಖದಲ್ಲಿ ಅನಗತ್ಯ ಕೂದಲು ಮರಳಬಹುದು ಎಂಬುದನ್ನು ತಿಳಿಯುವುದು ಮುಖ್ಯ ಎಂದು ಅವರು ಹೇಳಿದರು.
 

Trending News