ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು!

 ಕಳೆದ 20 ರಿಂದ 22 ದಿನಗಳಲ್ಲಿ ಅಕ್ಯೂಟ್ ಎನ್ಸಪಾಲಿಟಿಸ್ ಸಿಂಡ್ರೋಮ್ (ಎಇಎಸ್) ರೋಗದಿಂದ 57 ಮಕ್ಕಳು ಮೃತಪಟ್ಟಿದ್ದಾರೆ.

Last Updated : Jun 14, 2019, 03:22 PM IST
ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು! title=
Pic Courtesy: ANI

ಪಾಟ್ನಾ: ಬಿಹಾರದ ಮುಜಾಫರ್‌ಪುರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. 

ಈ ಬಗ್ಗೆ ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಶುಕ್ರವಾರ ಮಾಹಿತಿ ನೀಡಿದ್ದು, ಕಳೆದ 20 ರಿಂದ 22 ದಿನಗಳಲ್ಲಿ ಅಕ್ಯೂಟ್ ಎನ್ಸಪಾಲಿಟಿಸ್ ಸಿಂಡ್ರೋಮ್ (ಎಇಎಸ್) ರೋಗದಿಂದ 57 ಮಕ್ಕಳು ಮೃತಪಟ್ಟಿದ್ದಾರೆ. ಇವರಲ್ಲಿ 47 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮತ್ತ ಉಳಿದ 10 ಮಕ್ಕಳು ಖಾಸಗಿ ಆಸ್ಪತ್ರೆಯಾದ ಕೆಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಆರೋಗ್ಯ ಇಲಾಖೆ ಜೊತೆಗೆ ಸಭೆ ನಡೆಸಿ ಈ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಓರ್ವ ಪ್ರಾಧ್ಯಾಪಕ, ಮೂವರು ಸಹ ಪ್ರಾಧ್ಯಾಪಕರು ಮತ್ತು 9 ಹಿರಿಯ ಮತ್ತು 15 ಕಿರಿಯ ವೈದ್ಯರ ತಂಡವು ಈ ಬಗ್ಗೆ ಅಧ್ಯಯನ ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದಾರೆ. ಎರಡೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹೆಚ್ಚುವರಿ ಹಾಸಿಗೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Trending News