Yuva: 'ಯುವ' ಶೂಟಿಂಗ್‌ ಕಂಪ್ಲೀಟ್‌: ಭರ್ಜರಿಯಾಗಿ ನಡೆಯುತ್ತಿದೆ ಚಿತ್ರದ ಪ್ರಮೋಷನ್‌ ಪ್ಲಾನ್!

Yuva Update: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ನಟ ಯುವ ರಾಜ್‌ಕುಮಾರ್‌ ನಟನೆಯ 'ಯುವ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಪ್ರೀ-ಪ್ರೊಡಕ್ಷನ್‌ ವರ್ಕ್‌ ಜೊತೆಗೆ ಸಿನಿಮಾದ ಪ್ರಮೋಷನ್‌ ಪ್ಲಾನ್‌ ಸಹ ಅದ್ದೂರಿಯಾಗಿ ಪ್ಲಾನ್‌ ಮಾಡುತ್ತಾ ಇದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.   

Written by - Zee Kannada News Desk | Last Updated : Feb 14, 2024, 10:01 AM IST
  • ಯುವ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವ' ಸದ್ಯ ಚಿತ್ರೀಕರಣ ಮುಕ್ತಾಯವಾಗಿ ಚಿತ್ರಮಂದಿರಕ್ಕೆ ಬರುವ ಸಮಯ ಹತ್ತಿರವಾಗ್ತಿದೆ.
  • ಯುವ ಸಿನಿತಂಡ ಶೂಟಿಂಗ್ ಜೊತೆಗೆ ಪ್ರೀ ಪ್ರೊಡಕ್ಷನ್ ಮಾಡ್ತಾ ಬಂದಿದ್ದು, ದೊಡ್ಡಮಟ್ಟದಲ್ಲೇ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡಿಯುತ್ತಿದೆ.
  • 'ಯುವ' ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ನಗರದ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ನಡೆದಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.
Yuva: 'ಯುವ' ಶೂಟಿಂಗ್‌ ಕಂಪ್ಲೀಟ್‌: ಭರ್ಜರಿಯಾಗಿ ನಡೆಯುತ್ತಿದೆ ಚಿತ್ರದ ಪ್ರಮೋಷನ್‌ ಪ್ಲಾನ್! title=

Yuva Movie Promotion Plan: ಚಂದನವನದ ನಟ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವ' ಸದ್ಯ  ಚಿತ್ರೀಕರಣ ಮುಕ್ತಾಯವಾಗಿ ಚಿತ್ರಮಂದಿರಕ್ಕೆ ಬರುವ ಸಮಯ ಹತ್ತಿರವಾಗ್ತಿದೆ. ಇನ್ನೇನು ಸಿನಿಮಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಡಲಿದೆ ಚಿತ್ರತಂಡ. ಯುವ ಚಿತ್ರತಂಡ 97 ದಿನಗಳ  ಶೂಟಿಂಗ್‌ ನಂತರ ಕುಂಬಳಕಾಯಿ ಒಡೆದು, ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ, ಇಡೀ ಬಳಕ ಕೂತಾಗ ನಿರ್ದೇಶಕ ಆನಂದ್ ರಾಮ್ ಪ್ಯಾಕಪ್ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. 

ಸದ್ಯ ಯುವ ಸಿನಿತಂಡ ಶೂಟಿಂಗ್ ಜೊತೆಗೆ ಪ್ರೀ ಪ್ರೊಡಕ್ಷನ್ ಮಾಡ್ತಾ ಬಂದಿದ್ದು, ದೊಡ್ಡಮಟ್ಟದಲ್ಲೇ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡಿಯುತ್ತಿದೆ. ಡೈರೆಕ್ಟರ್‌ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪಕ್ಕಾ ಆಕ್ಷನ್ ಎಂಟರ್‌ಟೈನರ್ 'ಯುವ' ಸಿನಿಮಾವನನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದ್ದು, ಈ ಮೂಲಕ ಡಾ. ರಾಜ್‌ಕುಮಾರ್ ಮತ್ತೊಬ್ಬ ಮೊಮ್ಮಗ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ಈ ಚಿತ್ರದಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 

ಇದನ್ನೂ ಓದಿ: ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ʻರಾಕ್‌ಲೈನ್‌ ಮಾಲ್ʼ ಸೀಜ್.!

'ಯುವ' ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ನಗರದ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ  ನಡೆದಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ಚಿತ್ರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ಸಿನಿಮಾದ ಅನೌನ್ಸ್‌ಮೆಂಟ್‌ ಟೀಸರ್‌ನಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಕೇವಲ ಡೈಲಾಗ್ಸ್‌ನಿಂದಲೇ ಟೀಸರ್ ಗಮನ ಸೆಳೆದಿತ್ತು. ಇದೀಗ ಸಂಪೂರ್ಣ ಚಿತ್ರವನ್ನು ನೋಡುವ ಸಮಯ ಹತ್ತಿರ ಬರ್ತಿದ್ದು, ಕಥೆಯ ಸುಳಿವು ಬಿಟ್ಟುಕೊಡದೇ ಶೂಟಿಂಗ್‌ ಕಂಪ್ಲೀಟ್‌ ಮಾಡಿ, ಇದೇ ಮಾರ್ಚ್ 28ಕ್ಕೆ ತೆರೆಮೇಲೆ ಆರ್ಭಟಿಸಲು ಯುವ ಚಿತ್ರ ರೆಡಿಯಾಗುತ್ತಿದೆ.

ಇದೀಗ ಅಭಿಮಾನಿಗಳು 'ಯುವ' ಸಿನಿಮಾದ ಅಪ್‌ಡೇಟ್ ಕೇಳುತ್ತಿದಕ್ಕೆ, ಇತ್ತೀಚೆಗೆ ಯುವ ರಾಜ್‌ಕುಮಾರ್ ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಮುಗಿಯುತ್ತೆ, ಆಮೇಲೆ ಅಪ್‌ಡೇಟ್ ಸಿಗುತ್ತೆ ಎಂದು ತಿಳಿಸಿದ್ದರು. ಆದರೆ 
ಅಧಿಕೃತವಾಗಿ 'ಯುವ' ಪ್ರಮೋಷನ್‌ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಒಂದಷ್ಟು ಚರ್ಚೆ ನಡೆಯುತ್ತಿದೆ. ಕರ್ನಾಟಕದ ನಾಲ್ಕು ಬೇರೆ ಬೇರೆ ಜಿಲ್ಲೆಗಳಲ್ಲಿ ಅದ್ಧೂರಿ ಇವೆಂಟ್‌ ನಡೆಸಿ ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 

ಇದನ್ನೂ ಓದಿ: 15ನೇ ವಯಸ್ಸಿಗೆ ನಾಯಕಿ.. 100ಕ್ಕೂ ಹೆಚ್ಚು ಚಿತ್ರಗಳು.. ಈ ಚೆಲುವೆ ಯಾರೆಂದು ನೆನಪಿದೆಯಾ?

ಇದೇ ಮಾರ್ಚ್ 2ರಂದು 'ಯುವ' ಟೈಟಲ್ ಸಾಂಗ್ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಿಲೀಸ್‌ ಮಾಡಲಾಗುತ್ತಿದೆ ಎನ್ನಲಾಗ್ತಿದ್ದು, ಅದಕ್ಕಾಗಿ ವೇದಿಕೆ ಸಿದ್ಧವಾಗುತ್ತೆ ಎನ್ನುವ ಸುದ್ದಿ ಕುತೂಹಲ ಮೂಡಿಸಿದೆ. ಮತ್ತೆ ಇನ್ನೂ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಯುವ' ಪ್ರೀ ರಿಲೀಸ್ ಈವೆಂಟ್ ನಡೆಯುತ್ತದೆ ಎಂದು ಹೇಳಲಾಗ್ತಿದ್ದು, ಆದರೆ ಇದರ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ. ಒಟ್ಟಾರೆಯಾಗಿ ಹೇಳುವುದಾದರೇ ದೊಡ್ಡಮಟ್ಟದಲ್ಲೇ 'ಯುವ' ಪ್ರಮೋಷನಲ್ ಪ್ಲ್ಯಾನ್ ನಡೀತಿದ್ದು, ಈ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News