Yuva:ಯುವ ಚಿತ್ರದ ಫಸ್ಟ್‌ ಸಾಂಗ್‌ಗೆ ಡೇಟ್‌ ಫಿಕ್ಸ್‌!

Yuva First Song Update: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಅಭಿನಯದ ಯುವ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 26, 2024, 03:57 PM IST
  • ಯುವ ಚಿತ್ರದ ಶೂಟಿಂಗ್‌ ಈಗಾಗಲೇ ಕಂಪ್ಲೀಟ್‌ ಆಗಿದ್ದು, ಮಾರ್ಚ್‌ ತಿಂಗಳ ಕೊನೆಯಲ್ಲಿ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತಿದೆ.
  • ಯುವ ಸಿನಿಮಾದ ಫಸ್ಟ್‌ ಸಾಂಗ್‌ಗನ್ನು ಡಾ. ರಾಜ್‌ಕುಮಾರ್‌ ಹುಟ್ಟೂರು ಚಾಮರಾಜನಗರದಲ್ಲಿ ಸಾಂಗ್ ರಿಲೀಸ್ ಇವೆಂಟ್‌ನಲ್ಲಿ ರಿಲೀಸ್‌ ಮಾಡಲಾಗಿದೆ.
  • ಯುವ ಸಿನಿಮಾ ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಆಗಿದ್ದು, ಇದರಲ್ಲಿ ನಟಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ.
Yuva:ಯುವ ಚಿತ್ರದ ಫಸ್ಟ್‌ ಸಾಂಗ್‌ಗೆ ಡೇಟ್‌ ಫಿಕ್ಸ್‌! title=

Yuva First Single Release Date: ಸ್ಯಾಂಡಲ್‌ವುಡ್‌ನ ಹೊಸ ಪ್ರತಿಭೆ ಯುವ ರಾಜ್‌ಕುಮಾರ್‌ ನಟನೆಯ ಯುವ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಸದ್ಯ ಯುವ ಚಿತ್ರದ ಶೂಟಿಂಗ್‌ ಈಗಾಗಲೇ ಕಂಪ್ಲೀಟ್‌ ಆಗಿದ್ದು, ಮಾರ್ಚ್‌ ತಿಂಗಳ ಕೊನೆಯಲ್ಲಿ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತಿದೆ. ಸದ್ಯ ಚಿತ್ರರಂಗಕ್ಕೆ ಯುವರಾಜ್​ ಕುಮಾರ್ ಗ್ರ್ಯಾಂಡ್ ಎಂಟ್ರಿಗೆ ಭರ್ಜರಿ ತಯಾರಿ ನಡೆಯುತ್ತಿದೆ. 

ಯುವ ಸಿನಿಮಾದ ಫಸ್ಟ್‌ ಸಾಂಗ್‌ಗನ್ನು ಡಾ. ರಾಜ್‌ಕುಮಾರ್‌  ಹುಟ್ಟೂರು ಚಾಮರಾಜನಗರದಲ್ಲಿ ಸಾಂಗ್ ರಿಲೀಸ್ ಇವೆಂಟ್‌ನಲ್ಲಿ ರಿಲೀಸ್‌ ಮಾಡಲಾಗಿದೆ. ಚಾಮರಾಜನಗರದ ಟೆಂಪಲ್ ಗ್ರೌಂಡ್‌ನಲ್ಲಿ ಚಿತ್ರದ ಮೊದಲ ಹಾಡು  "ಒಬ್ಬನೇ ಶಿವ, ಒಬ್ಬನೇ ಯುವ" ಸಾಂಗ್‌ ರಿಲೀಸ್‌ ಆಗಲಿದೆ. ಈ ವಿಷಯವನ್ನು ಹೊಂಬಾಳೆ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

ಇದನ್ನೂ ಓದಿ: ಎಂಟು ಭಾಷೆಗಳಲ್ಲಿ.. ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ರೆಕಾರ್ಡ್ ಬ್ರೇಕ್" ಸಿನಿಮಾ!

ಇದಕ್ಕೂ ಮುಂಚೆ ಸಿನಿಮಾದ ಪೋಸ್ಟರ್​ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದ್ದು, ಇದರ ನಡುವೆ ಚಿತ್ರದ ಮೊದಲ ಸಾಂಗ್‌ ಬಿಡುಗಡೆಗಾಗಿ  ದೊಡ್ಡ ವೇದಿಕೆ ಕೂಡ ಸಿದ್ಧವಾಗಿದೆ. ಯುವ ಚಿತ್ರತಂಡ ಇತ್ತೀಚೆಗೆ ಲೇಹ್ ಲಡಾಖ್‌ಗೆ ಹೋಗಿ  ಅಲ್ಲಿ ಈ ರೋಮ್ಯಾಂಟಿಕ್ ಹಾಡನ್ನು ಚಿತ್ರೀಕರಿಸಿದೆ. ಶ್ರೀಶ ಕುದುವಳ್ಳಿ ಕ್ಯಾಮರಾ ಕಣ್ಣಲ್ಲಿ ಲೇಹ್ ಲಡಾಖ್‌ನ ಸುಂದರ ತಾಣಗಳೂ ಅದ್ಭುತವಾಗಿಯೇ ಮೂಡಿ ಬಂದಿವೆ.

ಯುವ ಸಿನಿಮಾ ಪಕ್ಕಾ ಆ್ಯಕ್ಷನ್ ಪ್ಯಾಕ್ಡ್  ಆಗಿದ್ದು, ಇದರಲ್ಲಿ ನಟಿ ಸಪ್ತಮಿ ಗೌಡ  ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಡೈರೆಕ್ಟರ್‌ ಆನಂದ್​ ರಾಮ್ ನಿರ್ದೇಶನ ಮಾಡಿದ್ದು, ದೊಡ್ಮನೆಯ ಕುಡಿಯನ್ನು ಮಾಸ್ ಅವತಾರದಲ್ಲಿ ತೋರಿಸಲು ಸಖತ್ ಪ್ಲಾನ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News