Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!

Yuva Film Story: ಚಂದನವನದ ಬಹುನಿರೀಕ್ಷಿತ 'ಯುವ' ಸಿನಿಮಾದ  ಕಥೆಯನ್ನು ಚಿತ್ರದ ಡೈರೆಕ್ಟರ್‌ ಸಂತೋಷ್‌ ಆನಂದ್‌ರಾಮ್‌ ರಿಲೀಸ್‌ಗೂ ಮುಂಚೆಯೇ ರಿವೀಲ್‌ ಮಾಡಿದ್ದಾರೆ. ಹಾಗಾದ್ರೆ ಯುವ ಚಿತ್ರದ ಕಥೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Last Updated : Mar 16, 2024, 11:38 AM IST
  • 'ಯುವ' ಸಿನಿಮಾ ತೆರೆಗೆ ಬರುವುದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಾಲೇ ಈ ಚಿತ್ರದ ಮೂರು ಸಾಂಗ್ಸ್‌ ರಿಲೀಸ್‌ ಆಗಿ, ಅಭಿಮಾನಿಗಳ ಗಮನ ಕೂಡ ಸೆಳೆದಿದೆ.
  • ಒಂದು ಪಕ್ಕಾ ಮಿಡ್ಲ್‌ ಕ್ಲಾಸ್ ಫ್ಯಾಮಿಲಿಯ ಕಥೆ ಇದು. ಅಂದ್ರೆ ಮಿಡ್ಲ್‌ಕ್ಲಾಸ್ ಫ್ಯಾಮಿಲಿಯಲ್ಲಿರುವ ಸಂಬಂಧಗಳು, ತಂದೆ ಮಗನ ಕಾಳಜಿಯ ವಿಚಾರಗಳು ಚಿತ್ರದಲ್ಲಿದೆ.
  • ಈ ಕಾಲದ ತಂದೆ-ಮಗನ ಕಥೆ ಇದು. ಮೊದಲಾರ್ಧ ಯುವ ಜನತೆಗೆ ಇಷ್ಟವಾಗುವಂತೆ ಡಿಸೈನ್ ಮಾಡಿದ್ದೀವಿ.
Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ! title=

Yuva Film Story Revealed By Director: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ನಟ ಯುವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ 'ಯುವ' ಸಿನಿಮಾ ತೆರೆಗೆ ಬರುವುದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಾಲೇ ಈ ಚಿತ್ರದ ಮೂರು ಸಾಂಗ್ಸ್‌ ರಿಲೀಸ್‌ ಆಗಿ, ಅಭಿಮಾನಿಗಳ ಗಮನ ಕೂಡ ಸೆಳೆದಿದೆ. ಹೀಗಿರುವಾಗ ಇದರ ನಡುವೆಯೇ ಈ ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಸಿನಿಮಾ ಕಥೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಡೈರೆಕ್ಟರ್‌ ಸಂತೋಷ್‌ ಆನಂದ್‌ರಾಮ್‌, "ಯುವ ಸಿನಿಮಾ ಕಥೆ ತಂದೆ- ಮಗನ ಪ್ರೇಮಕಥೆ ಎನ್ನಬಹುದು. ಅಂದ್ರೆ ಅಷ್ಟರಮಟ್ಟಿಗೆ ಭಿನ್ನಾಭಿಪ್ರಾಯ, ಕಷ್ಟಗಳು ಇರುತ್ತವೆ. ಅದನ್ನೆಲ್ಲಾ ಮೀರಿ ಅಷ್ಟೇ ತಂದೆ-ಮಗನ ನಡುವೆ ಬಾಂಧವ್ಯ ಇರುತ್ತದೆ. ಈ ಕಾಲದ ತಂದೆ-ಮಗನ ಕಥೆ ಇದು. ಮೊದಲಾರ್ಧ ಯುವ ಜನತೆಗೆ ಇಷ್ಟವಾಗುವಂತೆ ಡಿಸೈನ್ ಮಾಡಿದ್ದೀವಿ. ಟೀಸರ್ ಹಾಗೂ ಮೊದಲೆರಡು ಹಾಡುಗಳಲ್ಲಿ ಕಂಡಂತೆ. ಆದರೆ ಟ್ರೈಲರ್ ಬಿಡುಗಡೆ ಬಳಿಕ ನಿಮಗೆ ಈ ಸಿನಿಮಾದ ಒಟ್ಟಾರೆ ಚಿತ್ರಣ ಗೊತ್ತಾಗುತ್ತದೆ" ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: Samantha: ಹಿರೋಯಿನ್‌ ಆಗಿ ಅಲ್ಲ... ಸಮಂತಾ ಮೊದಲು ಕೆಲಸ ಮಾಡಿದ್ದು ಇಲ್ಲಿ!!

ಯುವ ಸಿನಿಮಾ ಕಥೆಯ ಬಗ್ಗೆ ಇನ್ನಷ್ಟು ಹೇಳುತ್ತಾ "ನಮ್ಮನ್ನು ಜಗತ್ತಿಗೆ ಪರಿಚಯಿಸುವುದು ತಾಯಿ. ಬದುಕಿಗೆ ಪರಿಚಯಿಸುವುದು ತಂದೆ. ಇದು ಔಟ್‌ ಆಫ್ ದಿ ಬಾಕ್ಸ್‌ ಕಥೆ ಅಲ್ಲ. ಈ ಚಿತ್ರದಲ್ಲಿ ಬರುವ ಮಾತುಗಳು ನಿಮ್ಮ ತಂದೆಯ ಜೊತೆಗೆ ನೀವು ನನ್ನ ತಂದೆ ಜೊತೆ ನಾನು ಮಾತನಾಡಿದಂತಿರುತ್ತದೆ. ಒಂದು ಪಕ್ಕಾ ಮಿಡ್ಲ್‌ ಕ್ಲಾಸ್ ಫ್ಯಾಮಿಲಿಯ ಕಥೆ ಇದು. ಅಂದ್ರೆ ಮಿಡ್ಲ್‌ಕ್ಲಾಸ್ ಫ್ಯಾಮಿಲಿಯಲ್ಲಿರುವ ಸಂಬಂಧಗಳು, ತಂದೆ ಮಗನ ಕಾಳಜಿಯ ವಿಚಾರಗಳು ಚಿತ್ರದಲ್ಲಿದೆ. ಅಪ್ಪುಗೆ ಹಾಡು ಇಡೀ ಚಿತ್ರಕ್ಕೆ ದೊಡ್ಡ ತಿರುವು ಕೊಡುತ್ತದೆ" ಎಂದು ಸಂತೋಷ್‌ ಆನಂದ್‌ರಾಮ್‌ ವಿವರಿಸಿದ್ದಾರೆ.

ಸಂತೋಷ್‌ ಆನಂದ್‌ರಾಮ್‌ ಯುವ ಪಾತ್ರದ ಬಗ್ಗೆ ಹೇಳುತ್ತಾ, "ಯುವ ಪವರ್‌ಫುಲ್ ಪಾತ್ರ, ಕಾಲೇಜು ವಿದ್ಯಾರ್ಥಿಯ ಪಾತ್ರ. ಕಥೆ ಬಿಟ್ಟು ಎಲ್ಲೂ ಹೊರ ಬರುವುದಿಲ್ಲ. ದೊಡ್ಮನೆಯಿಂದ ಗಡ್ಡ, ಮೀಸೆ ಬಿಟ್ಕೊಂಡು ಬಂದಿರುವ ಮೊದಲ ಹೀರೊ ಯುವ ರಾಜ್‌ಕುಮಾರ್. ಅದು ನನಗೆ ಹೊಸದು ಅನಿಸಿತು. ಯುವ ಕಣ್ಣುಗಳಲ್ಲಿ ಇಂಟೆನ್ಸ್ ಇದೆ. ಡ್ಯಾನ್ಸ್, ಫೈಟ್ ಎಲ್ಲದರಲ್ಲೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಯುವ ಪರ್ಫಾರ್ಮನ್ಸ್ ನೋಡಿ ಅಚ್ಚರಿ ಆಯಿತು" ಎಂದು ವಿವರಿಸಿದ್ದಾರೆ. ಈ ಚಿತ್ರ ಇದೇ ಮಾರ್ಚ್‌ 29ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News