ರಣಬೀರ್ ಕಪೂರ್ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?

ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್, ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಕುರಿತಾಗಿ ರಣಬೀರ್ ಕಪೂರ್ ನೀಡಿರುವ ಹೇಳಿಕೆಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

Written by - Zee Kannada News Desk | Last Updated : Apr 10, 2023, 04:14 PM IST
  • ಉರ್ಫಿ ಜಾವೇದ್ ಅವರ ಫ್ಯಾಷನ್ ಆಯ್ಕೆಗಳನ್ನು ಶ್ಲಾಘಿಸಿದ್ದರು
  • "ನಾನು ಉರ್ಫಿಯಂತೆ ಧೈರ್ಯಶಾಲಿಯಲ್ಲ, ಆದರೆ ಅದು ಅತ್ಯಂತ ಧೈರ್ಯಶಾಲಿ ನಡೆ ಎಂದು ನಾನು ಭಾವಿಸುತ್ತೇನೆ.
  • ಫ್ಯಾಷನ್ ಎಂದರೆ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ. ಅವಳು ಅದನ್ನು ಆತ್ಮವಿಶ್ವಾಸದಿಂದ ಮಾಡುತ್ತಿದ್ದಾಳೆ
 ರಣಬೀರ್ ಕಪೂರ್ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ? title=

ಮುಂಬೈ: ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್, ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಕುರಿತಾಗಿ ರಣಬೀರ್ ಕಪೂರ್ ನೀಡಿರುವ ಹೇಳಿಕೆಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾಳೆ.

ಮಾಧ್ಯಮಗಳಿಗೆ ತಾನು ಹೇಗೆ ನಟಿ ಕರೀನಾ ಕಪೂರ್ ನೀಡಿರುವ ಹೇಳಿಕೆಗೆ ಸಂತಸದಿಂದ ತೇಲುತ್ತಿದೆ ಎನ್ನುವುದನ್ನು ಉರ್ಫಿ ವಿವರಿಸಿದ್ದಾಳೆ."ನಾನು ತೇಲಿಹೋದೆ ಹೋದೆ, ಮೊದಲಿಗೆ ನನಗೆ ನಂಬಲಾಗಲಿಲ್ಲ.ಇದು ತಮಾಷೆ ಎಂದು ನಾನು ಭಾವಿಸಿದೆ, ಅವಳು ನನ್ನ ಬಟ್ಟೆಗಳನ್ನು ಟೀಕಿಸಿರಬೇಕು ಮತ್ತು ಜನರು ನನ್ನನ್ನು ಅವರು ನಿಜವಾಗಿಯೂ ಹೊಗಳಿದ್ದಾಳೆ ಎಂದು ಹೇಳುವ ಮೂಲಕ ನನ್ನನ್ನು ಮರುಳು ಮಾಡುತ್ತಿದ್ದಾರೆ. ಆದರೆ ನಂತರ ನಾನು ಕ್ಲಿಪ್ ಅನ್ನು ನೋಡಿದೆ ಮತ್ತುಆ ದಿನ ನಾನು ನನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದೇನೆ ಎಂದು ಅರಿತುಕೊಂಡೆ" ಎಂದು ಉರ್ಫಿ ಹೇಳಿದ್ದಾಳೆ.

ಇದನ್ನೂ ಓದಿ: "ನಾಯಕರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ಬಿಜೆಪಿಯಿಂದ ಪಟ್ಟಿ ಬಿಡುಗಡೆ ವಿಳಂಬ"

ಇದೆ ವೇಳೆ ಅವರು ರಣಭೀರ್ ಕಪೂರ್ ಆಕೆಯ ಉಡುಪಿನ ಬಗ್ಗೆ ಪ್ರತಿಕ್ರಿಯಿಸುತ್ತಾ ಇದೊಂದು ಕೆಟ್ಟದಾಗಿರುವ ಅಭಿರುಚಿ ಎಂದು ಹೇಳಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಉರ್ಫಿ ರಣಬೀರ್ ಹೇಳಿಕೆ ಬಗ್ಗೆ ನಾನು ಅಸಮಾಧಾನಗೊಂಡಿದ್ದೇನೆ, ಆದರೆ ಕರೀನಾ ಅವರ ಮೆಚ್ಚುಗೆಯ ನಂತರ, ನನಗೆ ರಣಬೀರ್ ಕಪೂರ್ ಬೇಕಾದ್ರೆ ನರಕ್ಕೆ ಹೋಗಲಿ ಎನ್ನುವ ರೀತಿಯಲ್ಲಿ ನಾನಿದ್ದೇನೆ ಎಂದು  ಹೇಳಿದ್ದಾರೆ.

ಇದನ್ನೂ ಓದಿ: "ದೇವೇಗೌಡರ ಸಾವನ್ನು ಬಯಸಿದವರಿಗೆ ಪಾಠ ಕಲಿಸಬೇಕು"

ರಣಬೀರ್ ಕಪೂರ್ ಅವರ ಕೆಲವು ದಿನಗಳ ನಂತರ, ಕರೀನಾ ಕಪೂರ್ ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಉರ್ಫಿ ಜಾವೇದ್ ಅವರ ಫ್ಯಾಷನ್ ಆಯ್ಕೆಗಳನ್ನು ಶ್ಲಾಘಿಸಿದ್ದರು"ನಾನು ಉರ್ಫಿಯಂತೆ ಧೈರ್ಯಶಾಲಿಯಲ್ಲ, ಆದರೆ ಅದು ಅತ್ಯಂತ ಧೈರ್ಯಶಾಲಿ ನಡೆ ಎಂದು ನಾನು ಭಾವಿಸುತ್ತೇನೆ. ಫ್ಯಾಷನ್ ಎಂದರೆ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ. ಅವಳು ಅದನ್ನು ಆತ್ಮವಿಶ್ವಾಸದಿಂದ ಮಾಡುತ್ತಿದ್ದಾಳೆ, ಅವಳು ನಿಜವಾಗಿಯೂ ಕೂಲ್ ಆಗಿ ಮತ್ತು ಅದ್ಭುತವಾಗಿ ಕಾಣುತ್ತಾಳೆ ಎಂದು ನಾನು ಭಾವಿಸುತ್ತೇನೆ.ಅವಳು ಬಯಸಿದಂತೆ ಅವಳು ನಿಖರವಾಗಿ ಮಾಡುತ್ತಾಳೆ, ಫ್ಯಾಷನ್ ಎಂದರೆ ನಿಮ್ಮ ಸ್ವಂತ ದೇಹ ದಲ್ಲಿ ನೀವು ಆರಾಮದಾಯಕವಾಗಿರುವುದು, ನಾನು ಆ ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ.ನಾನು ಆತ್ಮವಿಶ್ವಾಸದ ಹುಡುಗಿ, ಆದ್ದರಿಂದ ನಾನು ಆತ್ಮವಿಶ್ವಾಸದ ಪರವಾಗಿ ಇದ್ದೇನೆ. ನಾನು ಅವಳ ಆತ್ಮವಿಶ್ವಾಸ ಮತ್ತು ಅವಳು ನಡೆಯುವ ರೀತಿಯನ್ನು ಪ್ರೀತಿಸುತ್ತೇನೆ. ಆಕೆಗೆ ನಿಜಕ್ಕೂ ನನ್ನ ಹ್ಯಾಟ್ಸ್ ಆಫ್” ಎಂದು ಪ್ರತಿಕ್ರಿಯೆ ನೀಡಿದ್ದಾಳೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News