ಹೇಮಾ ಮಾಲಿನಿ ಜನ್ಮದಿನದ ವಿಶೇಷ; 'ಡ್ರೀಮ್‌ಗರ್ಲ್' ಮೊದಲ ಪ್ರೀತಿ ಯಾರ ಮೇಲೆ?

ಬಾಲಿವುಡ್‌ನ ಅತ್ಯಂತ ರೋಮ್ಯಾಂಟಿಕ್ ಜೋಡಿಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿ ಕೂಡಾ ಒಂದು. ಆದರೆ ಹೇಮಾ ಮಾಲಿನಿಯವರ ಮೊದಲ ಪ್ರೀತಿ ಧರ್ಮೇಂದ್ರ ಅವರಲ್ಲಾ... ಎಂಬುದು ನಿಮಗೆ ತಿಳಿದಿದೆಯೇ?

Last Updated : Oct 16, 2019, 10:34 AM IST
ಹೇಮಾ ಮಾಲಿನಿ ಜನ್ಮದಿನದ ವಿಶೇಷ; 'ಡ್ರೀಮ್‌ಗರ್ಲ್' ಮೊದಲ ಪ್ರೀತಿ ಯಾರ ಮೇಲೆ? title=
ಫೋಟೊ ಕೃಪೆ: Instagram @ hemamalini

ಬೆಂಗಳೂರು: ಬಾಲಿವುಡ್‌ನ ಅತ್ಯಂತ ರೋಮ್ಯಾಂಟಿಕ್ ಜೋಡಿಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿ ಕೂಡಾ ಒಂದು. ಇಂದಿಗೂ ಸಹ ಜನರು ಪ್ರೀತಿಗೆ ಈ ಜೋಡಿಯ ಉದಾಹರಣೆ ನೀಡುತ್ತಾರೆ. ಈಗಲೂ ಅವರ ವಯಸ್ಸಿನ ಅಂತರದ ಬಗ್ಗೆಯೂ ಈ ದಂಪತಿ ಮುಖ್ಯಾಂಶಗಳಲ್ಲಿರುತ್ತಾರೆ. ಆದರೆ ಹೇಮಾ ಮಾಲಿನಿಯವರ ಮೊದಲ ಪ್ರೀತಿ ಧರ್ಮೇಂದ್ರ ಅವರಲ್ಲಾ... ಎಂಬುದು ನಿಮಗೆ ತಿಳಿದಿದೆಯೇ? ಇಂದು ಬಾಲಿವುಡ್‌ನ 'ಡ್ರೀಮ್‌ಗರ್ಲ್' ಹೇಮಾ ಮಾಲಿನಿಯ 71 ನೇ ಜನ್ಮದಿನ. ಈ ಸಂದರ್ಭದಲ್ಲಿ ಹೇಮಾ ಅವರ ಮೊದಲ ಪ್ರೀತಿಯ ಬಗ್ಗೆ ನಾವು ತಿಳಿಸುತ್ತೇವೆ.

ಹೇಮಾ ಮಾಲಿನಿ ಉತ್ತಮ ನಟಿ ಮಾತ್ರವಲ್ಲ, ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾತಿಯೂ ಹೌದು. ಸಂದರ್ಶನವೊಂದರಲ್ಲಿ ಶಾಸ್ತ್ರೀಯ ನೃತ್ಯ ಕಲಿಯಲು ಕಾರಣ ಏನು ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದ ಹೇಮಾ ಮಾಲಿನಿ, ತನ್ನ ಮೊದಲ ಪ್ರೀತಿಯ ಸಲುವಾಗಿ ಬಾಲ್ಯದಿಂದಲೂ ನೃತ್ಯ ಕಲಿಯಲು ಶ್ರಮಿಸಿದ್ದೇನೆ ಎಂದಿದ್ದರು.

ಕೃಷ್ಣ ಭಜನೆಯಲ್ಲಿ ಹೇಮಾ ಮಾಲಿನಿ ನೃತ್ಯ (ಫೋಟೋ ಕೃಪೆ: Instagram@hemamalini)

ಹೇಮಾ (ಹೇಮಾ ಮಾಲಿನಿ) ಅವರ ಮೊದಲ ಪ್ರೀತಿ ಬೇರಾರು ಅಲ್ಲ 'ಶ್ರೀಕೃಷ್ಣ' ಎಂದು ಅವರು ಹೇಳಿದ್ದರು. ನೃತ್ಯವನ್ನು ತುಂಬಾ ಇಷ್ಟಪಡುವವರನ್ನು ಮತ್ತು ಅವರ ಜೀವನದ ಹಲವು ಅಂಶಗಳನ್ನು ಶಾಸ್ತ್ರೀಯ ನೃತ್ಯದಲ್ಲಿ ತೋರಿಸಲಾಗುತ್ತದೆ. ಆದ್ದರಿಂದ ನಾನು(ಹೇಮಾ ಮಾಲಿನಿ) ಶಾಸ್ತ್ರೀಯ ನೃತ್ಯ ಕಲಿಯಲು ಸಾಧ್ಯವಾಯಿತು. ನಾನು ಶ್ರೀಕೃಷ್ಣನನ್ನು ತುಂಬಾ ಇಷ್ಟಪಡುತ್ತಿದ್ದೆ. ಸದಾ ಅವನ ಫೋಟೋವನ್ನು ನನ್ನ ಪುಸ್ತಕದಲ್ಲಿ ಇಟ್ಟುಕೊಂಡಿರುತ್ತಿದ್ದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದರು.

ಬಂಕೆ ಬಿಹಾರಿ ದೇವಸ್ಥಾನದಲ್ಲಿ ಹೇಮಾ ಮಾಲಿನಿ, ಫೋಟೊ ಕೃಪೆ: Instagram @ hemamalini

ರಾಜ್ ಕಪೂರ್ ಅವರೊಂದಿಗೆ 'ಸಪ್ನಾ ಕಾ ಸೌದಾಗರ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಹೇಮಾ ಮಾಲಿನಿ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೇಮಾ ಮಾಲಿನಿ ಪ್ರಸ್ತುತ ಮಥುರಾ (ಉತ್ತರ ಪ್ರದೇಶ) ದಿಂದ ಭಾರತೀಯ ಜನತಾ ಪಕ್ಷದ ಲೋಕಸಭಾ ಸಂಸದರಾಗಿದ್ದಾರೆ. ಬಾಲಿವುಡ್‌ನ ಕೆಲವೇ ಕೆಲವು ನಟಿಯರಲ್ಲಿ ಹೇಮಾ ಮಾಲಿನಿ ಒಬ್ಬರು, ಇವರಲ್ಲಿ ಸೌಂದರ್ಯ ಮತ್ತು ನಟನೆಯ ವಿಶಿಷ್ಟ ಸಂಗಮವಿದೆ. ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಅವರು ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 

ಹೇಮಾ ಮಾಲಿನಿ ಅವರ ಮುಖ್ಯ ಚಿತ್ರಗಳು ಸೀತಾ ಮತ್ತು ಗೀತಾ (1972), ಪ್ರೇಮ್ ನಗರ ಅಮೀರ್ ಗರಿಬ್ (1974), ಶೋಲೆ (1975), ಮೆಹಬೂಬಾ ಚರಸ್ (1976), ಡ್ರೀಮ್ ಗರ್ಲ್. ಕಿನಾರಾ (1977), ತ್ರಿಶೂಲ್ (1978), ಮೀರಾ (1979), ಕುದ್ರಾತ್, ನಸೀಬ್, ಕ್ರಾಂತಿ (1980), ಆಂಧಾ ಲಾ, ರಜಿಯಾ ಸುಲ್ತಾನ್ (1983), ರಿಹಾಯ್ (1988), ಜಮೈ ರಾಜಾ (1990), ಬಾಗ್ಬನ್ (2003), ವೀರ್ ಜರಾ (2004) ಇತ್ಯಾದಿ.

Trending News