Fan asked for a kiss to Janhvi Kapoor: 'ಧಡಕ್' ಚಿತ್ರದ ಮೂಲಕ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಜಾಹ್ನವಿ ಕಪೂರ್ (Janhvi Kapoor) ಪ್ರಸ್ತುತ ತಮ್ಮ 'ರೂಹಿ' (Roohi) ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ. ತಮ್ಮ ಅಭಿನಯ ಮತ್ತು ಸೌಂದರ್ಯದಿಂದಾಗಿ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.
ಅಷ್ಟೇ ಅಲ್ಲದೆ ನಟಿ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದ (Social Media) ಮೂಲಕ ಸದಾ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಹಲವು ಬಾರಿ ಅವರು ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಾರೆ. ಆದರೆ ಇತ್ತೀಚಿಗೆ ನಟಿಯ ಅಭಿಮಾನಿಯೋರ್ವ ಆಕೆ ಊಹಿಸಲೂ ಸಾಧ್ಯವಿರದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆದರೆ ಈ ಪ್ರಶ್ನೆಗೆ ನಟಿ ಜಾಹ್ನವಿ ಕಪೂರ್ ಬಹಳ ನಾಜೂಕಾಗಿ ಪ್ರತಿಕ್ರಿಯಿಸಿದ್ದು ನಟಿಯ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ - WATCH: ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್! ವೈರಲ್ ಆಯ್ತು ವೀಡಿಯೋ
ವಾಸ್ತವವಾಗಿ, ಅಭಿಮಾನಿಯೊಬ್ಬರು ಜಾಹ್ನವಿ ಅವರನ್ನು 'ನಾವು ಕಿಸ್ ಮಾಡಬಹುದೇ' ಎಂದು ಕೇಳಿದ್ದಾರೆ. ಇದಕ್ಕೆ ಬಹಳ ನಾಜೂಕಾಗಿ ಬುದ್ದಿವಂತಿಕೆಯಿಂದ ಪ್ರತಿಕ್ರಿಯಿಸಿರುವ ನಟಿ ಜಾಹ್ನವಿ ಕಪೂರ್ (Janhvi Kapoor) ಮಾಸ್ಕ್ ಹಾಕಿರುವ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ನೇರವಾಗಿ 'ನೋ' (No) ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ - ಐದು ನಿಮಿಷದಲ್ಲಿ ನಿಮಗೆ ಸಿಕ್ಸ್ ಪ್ಯಾಕ್ ಬೇಕೆ ? ಹಾಗಾದರೆ ಈ ಜಾಹ್ನವಿ ಕಪೂರ್ ವಿಡಿಯೋ ನೋಡಿ
ಜಾಹ್ನವಿಯ ಈ ಜಾಣ್ಮೆಯ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.