ಒಂದೇ ವೇದಿಕೆಯಲ್ಲಿದ್ದರೂ ಮಾತನಾಡದ ದರ್ಶನ್‌ - ಧ್ರುವ ಸರ್ಜಾ..! ತಪ್ಪು ಯಾರದ್ದು ಗೊತ್ತಾ..?

ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದರ್ಶನ್‌ ಮತ್ತು ಧ್ರುವ ಸರ್ಜಾ ಒಬ್ಬರನ್ನೊಬ್ಬರು ಮಾತನಾಡಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

Written by - Krishna N K | Last Updated : Oct 1, 2023, 05:32 PM IST
  • ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆ.
  • ಪ್ರತಿಭಟನೆಯಲ್ಲಿ ಸತ್ಕರಿಸಿದ ದರ್ಶನ್‌ ಮತ್ತು ಧ್ರುವ.
  • ಧ್ರುವ ಸರ್ಜಾ ಮತ್ತು ದರ್ಶನ ನಡುವೆ ಏನಾಗಿದೆ.
ಒಂದೇ ವೇದಿಕೆಯಲ್ಲಿದ್ದರೂ ಮಾತನಾಡದ ದರ್ಶನ್‌ - ಧ್ರುವ ಸರ್ಜಾ..! ತಪ್ಪು ಯಾರದ್ದು ಗೊತ್ತಾ..? title=

Dhruva sarja Darshan : ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟ ದರ್ಶನ್‌ ಹಾಗು ಧ್ರುವ ಸರ್ಜಾ ಒಂದೇ ವೇದಿಕೆ ಮೇಲಿದ್ದರೂ ಸಹ ಒಬ್ಬರನೊಬ್ಬರು ನೋಡುವುದಿರಲಿ ಮಾತನಾಡಿಸಲೇ ಇಲ್ಲ. ಇದರಿಂದ ಇವರ ಮಧ್ಯ ಎಲ್ಲವೂ ಸರಿಯಾಗಿಲ್ಲ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

ಹೌದು... ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. 

ಇದನ್ನೂ ಓದಿ: ರಜನಿ ನಟನೆಯೆ ಬಹುನಿರೀಕ್ಷಿತ ಚಿತ್ರ ʼಲಾಲ್ ಸಲಾಮ್ʼ ರಿಲೀಸ್ ಡೇಟ್‌ ಫಿಕ್ಸ್‌..! ಯಾವಾಗ..?

ಬೆಳ್ಳಗ್ಗೆ 9 ಗಂಟೆಗೆ ಪ್ರಾರಂಭವಾದ ಸ್ಯಾಂಡಲ್‌ವುಡ್‌ ಕಾವೇರಿ ಪ್ರತಿಭಟನೆಯಲ್ಲಿ ಮೊದಲು ಶ್ರೀನಾಥ್‌, ಉಮಾಶ್ರೀ, ಲೂಸ್‌ ಮಾದ ಯೋಗಿ, ಅನಿರುದ್ಧ್‌, ಪದ್ಮಾ ವಸಂತಾ, ರೂಪಿಕಾ, ಪೂಜಾ ಗಾಂಧಿ, ಶ್ರೀನಿವಾಸ್‌ ಮೂರ್ತಿ, ನವೀನ್‌ ಕೃಷ್ಣ, ರವಿ ಚೇತನ್‌, ಅನು ಪ್ರಭಾಕರ್‌, ರಘು ಮುಖರ್ಜಿ, ಲಹರಿ ವೇಲು, ಧರ್ಮ ಕೀರ್ತಿ ರಾಜ್‌, ಸುಂದರ್‌ ರಾಜ್‌, ಪ್ರಮೀಳಾ ಜೋಯಿಸ್‌ ಸೇರಿದಂತೆ ಮುಂತಾದ ಕಾಲಾವಿದರು ಉಪಸ್ಥಿತರಿದ್ದರು.

ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್‌ ಪ್ರತಿಭಟನೆಯಲ್ಲಿ ಭಾಗಿಯಾದರು. ನಟ ದರ್ಶನ್‌ ಸ್ವಲ್ಪ ತಡವಾಗಿ ಬಂದರು. ರೆಡ್‌ ಕಾರು ಹತ್ತಿ ಬಂದ ದಾಸ ವೇದಿಕೆ ಮೇಲೆ ಏಂಟ್ರಿ ಕೊಟುತ್ತಿದ್ದಂತೆ ಶಿವರಾಜ್‌ಕುಮಾರ್‌ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು, ಹಾಗೆ ಪಕ್ಕದಲ್ಲಿ ಇದ್ದ ವಸಿಷ್ಠ ದಚ್ಚುಗೆ ಜಾಗ ಮಾಡಿಕೊಟ್ಟರು. ಉಮಾಶ್ರೀ ಸಹ ಎದ್ದು ನಿಂತು ಚಾಲೆಂಜಿಂಗ್ ಸ್ಟಾರ್‌ನನ್ನು ಬರಮಾಡಿಕೊಂಡರು.

ಇದನ್ನೂ ಓದಿ: ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ಡಿಸಿಪಿ ಹೇಳಿದ್ದೇನು?

ಆದರೆ ಧ್ರುವ ಮಾತ್ರ ದರ್ಶನ್‌ ಅವರನ್ನು ನೋಡಿದರೂ ನೋಡದಂತೆ ನಿಂತಿದ್ದರು. ಅಲ್ಲದೆ, ದರ್ಶನ್‌ ಶಿವಣ್ಣನನ್ನು ಮಾತನಾಡಿಸುವಾಗ ಕಾಟಾಚಾರಾಕ್ಕೆ ಎದ್ದು ನಿಂತರು. ನಂತರ ದರ್ಶನ್‌ ಮೈಕ್‌ ಮುಂದೆ ನಿಂತು ಮಾತನಾಡುವಾಗ ಆಕ್ಷನ್‌ ಪ್ರೀನ್ಸ್‌ ವೇದಿಕೆಯಿಂದ ಕೆಳಗೆ ಇಳಿದು ಹೊರಟರು. ಈ ಎಲ್ಲಾ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇಬ್ಬರ ನಡುವೆ ಏನಾಗಿದೆ ಎಂದು ಯೋಚಿಸುವಂತೆ ಮಾಡಿವೆ.

ಆದ್ರೆ ಇಬ್ಬರ ನಡುವೆ ಅಂತಹುದು ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ. ಏನೇನೋ ಕಲ್ಪಿಸೋದು ಸರಿಯಲ್ಲ.‌ ಚಿತ್ರರಂಗದವರು ಎಲ್ಲಾರು ಒಟ್ಟಾಗಿ ಚೆನ್ನಾಗೆಯೇ ಇದ್ದಾರೆ. ಅರ್ಜುನ್‌ ಸರ್ಜಾ ನಿರ್ದೇಶನದ ʼಪ್ರೇಮ ಬರಹʼ ಸಿನಿಮಾದ ಹಾಡಿನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದರು. ʼಜೈ ಹನುಮಾನʼ ಹಾಡಿನಲ್ಲಿ ಅರ್ಜುನ್‌ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆ ದರ್ಶನ್‌ ಹೆಜ್ಜೆ ಹಾಕಿದ್ದರು. ದರ್ಶನ್‌ ಹಾಗು ಸರ್ಜಾ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟವಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವು ಒಳ್ಳೆಯದಲ್ಲ ಅಂತ ದಚ್ಚು ಹಾಗೂ ಧ್ರುವ ಅಭಿಮಾನಿಗಳು ವಾದಿಸುತ್ತಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಎದುರು ನಟಿಸುತ್ತಿರುವ ಸ್ಟಾರ್ ಹೀರೋಯಿನ್ ಮಗಳು ಯಾರು?

ಆದ್ರೆ ಒಂದೇ ವೇದಿಕೆ ಮೇಲಿದ್ರೂ ಸಹ ಕನಿಷ್ಠ ಪಕ್ಷ ನೋಡಿ ಮಾತನಾಡುವುದು ಇರಲಿ ಒಂದು ಸ್ಮೈಲ್‌ ಕೂಡ ಮಾಡಿಲ್ಲ ಅಂದ್ರೆ ಇಬ್ಬರ ನಡುವೆ ಏನೋ ನಡೆದಿದೆ ಎಂದು ಟ್ರೋಲರ್ಸ್‌ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಕುರಿತು ದಚ್ಚು ಮತ್ತು ಆಕ್ಷನ್‌ ಪ್ರೀನ್ಸ್‌  ಸ್ಪಷ್ಟಪಡಿಸಿದರೆ ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News