ಹತ್ತು ವರ್ಷಗಳಿಂದ ಈ ಗಳಿಗೆಗಾಗಿ ನಾವಿಬ್ಬರು ಕಾಯ್ತಿದ್ವಿ: ಚಿರು-ಮೇಘನಾ

29 ವರ್ಷಗಳ ನಂತರ ಸರ್ಜಾ ಕುಟುಂಬದಲ್ಲಿ ಶುಭಕಾರ್ಯ. 

Last Updated : Oct 23, 2017, 05:37 PM IST
ಹತ್ತು ವರ್ಷಗಳಿಂದ ಈ ಗಳಿಗೆಗಾಗಿ ನಾವಿಬ್ಬರು ಕಾಯ್ತಿದ್ವಿ: ಚಿರು-ಮೇಘನಾ title=

ಲೀಲಾ ಪ್ಯಾಲೇಸ್ ನಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥದಲ್ಲಿ ಚಿರು - ಮೇಘಾನಾ ಜೋಡಿಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ಈ ಸವಿಗಲಿಗೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡ ಸ್ಯಾಂಡಲ್ ವುಡ್ ಜೋಡಿ ಹತ್ತು ವರ್ಷಗಳಿಂದ ಈ ಗಳಿಗೆಗಾಗಿ ನಾವಿಬ್ಬರು ಕಾಯ್ತಿದ್ವಿ, ಆ ಗಳಿಗೆ ಈಗ ಕೋಡಿ ಬಂದಿದೆ ಎಂದು ತಿಳಿಸಿದೆ. ಅಲ್ಲದೆ ಸರ್ಜಾ ಕುಟುಂಬದಲ್ಲಿ 29 ವರ್ಷಗಳ ನಂತರ ನಡೆಯುತ್ತಿರುವ ಶುಭಕಾರ್ಯ ಇದಾಗಿದೆ. 29 ವರ್ಷಗಳ ಹಿಂದೆ ಅರ್ಜುನ್ ಸರ್ಜಾ ಅವರ ಮದುವೆ ಆಗಿತ್ತು. 

ಮೇಘನಾ ಚಿರುಸರ್ಜಾ ನಿಶ್ಚಿತಾರ್ಥಕ್ಕೆ ನಿರ್ದೇಶಕ ಪನ್ನಗಾಭರಣ ಹಾಗೂ ನಟ ಪ್ರಜ್ವಲ್ ದೇವರಾಜ್ ವಿಭಿನ್ನವಾಗಿ ಪ್ಲಾನ್ ಮಾಡಿದ್ದರು. ಪ್ರಿನ್ಸ್ ಹಾಗೂ‌ ಪ್ರಿನ್ಸಸ್ ಸ್ಟೈಲ್ ನಲ್ಲಿ‌ ಮೇಘನಾ ಹಾಗೂ ಚಿರು ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದರು. ಒಟ್ಟಿನಲ್ಲಿ ಸಿನಿಮಾ ಸ್ಟೈಲ್ ನಲ್ಲೇ ಅದ್ದೂರಿ ನಿಶ್ಚಿತಾರ್ಥ ನಡೆಯಿತು.  

ನಿಶ್ಚಿತಾರ್ಥದಲ್ಲಿ ಮೊದಲು ಚಿರು ಸರ್ಜಾ, ಮೇಘನಾಗೆ 'ನಕ್ಷತ್ರದ ಡೈಮಂಡ್ ರಿಂಗ್' ತೊಡಿಸುವ ಮೂಲಕ ಪ್ರೀತಿಯ ನಿವೇದನೆ ಮಾಡಿದರೆ, ನಂತರ ಮೇಘನಾ ಚಿರುಗೆ 'ಸಿಂಬಲ್ ಆಫ್ ಸ್ಟ್ರೆಂತ್ ಎಂಡ್ ಟುಗೆದರ್ ನೆಸ್' ಗಂಢಬೇರುಂಡ ಉಂಗುರವನ್ನು ತೊಡಿಸಿ ತಮ್ಮ ಪ್ರೀತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮೇಘನಾ ಗೌನ್ ನಲ್ಲಿ ಮಿಂಚಿದರೆ,  ಥ್ರೀ ಪೀಸ್ ಇಂಡಿಗೋ ಸೂಟ್ನಲ್ಲಿ ಚಿರು ಕಂಗೊಳಿಸುತ್ತಿದ್ದರು.

ಲೀಲಾ ಪ್ಯಾಲೇಸ್ ನಲ್ಲಿ ನಡೆದ ನಿಶ್ಚಿತಾರ್ಥದಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರು ಹಾಗೂ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಜಗ್ಗೇಶ್ ದಂಪತಿ, ಭಾರತಿ, ಅನಿರುದ್ಧ, ದ್ವಾರಕೀಶ್ , ಸುದೀಪ್ ತಂದೆ ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು. 

ನಂತರ ಸುದ್ದಿಗೋಷ್ಠಿ ನಡೆಸಿದ ಚಿರು-ಮೇಘನಾ ಜೋಡಿ ಹೀಗೆ ಹೇಳಿದರು:

ಮೊದಲು ಮಾತನಾಡಿದ ಚಿರಂಜೀವಿ ಸರ್ಜಾ- ಮೇಘನ ಜೊತೆ ನನ್ನ ಒಡನಾಟ ಬಹಳ ವರ್ಷಗಳದ್ದು.
ಒಂದು ಫಂಕ್ಷನ್ ನಲ್ಲಿ ನಾನು ಮೇಘನ ಅವರನ್ನು ಭೇಟಿಯಾಗಿದ್ದೆ, ತದ ನಂತರ ಸ್ನೇಹಿತರಾದೆವು. ನಮ್ಮಿಬ್ಬರ ನಡುವೆ ಹೊಂದಾವಣಿಕೆ ತುಂಬಾ ಚೆನ್ನಾಗಿತ್ತು. ನಂತರದಲ್ಲಿ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಯಿತು ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ, ನಮ್ಮಿಬ್ಬರದ್ದೂ ಕೂಡ ಕಲಾವಿದರ ಕುಟುಂಬ ಹೀಗಾಗಿ ನಮ್ಮ ಜವಾಬ್ದಾರಿ ಹಿಚ್ಚಿದೆ ಎಂದು ಚಿರು ತಿಳಿಸಿದರು.

ಅವರ ಲವ್ ಪ್ರಪೋಸಲ್ ಬಗ್ಗೆ ತಿಳಿಸಿದ ಚಿರು, ಮೇಘನಾ ಅವರಿಗೆ ಪ್ರಪೋಸ್ ಮಾಡಲು ತುಂಬಾ ಕಷ್ಟ ಆಯ್ತು, ನಂತರದಲ್ಲಿ ಮೇಘಾ ಅವರ ತಾಯಿಯ ಜೊತೆ ನಾನು ಮಾತನಾಡಿದೆ. ನಮಗೂ ಮುನ್ನ ನಮ್ಮ ಆಪ್ತರಿಗೆ ನಾವು ಮುಂದೆ ಒಂದಾಗುತ್ತಿವಿ ಅನ್ನಿಸಿತ್ತು. ಈ ಸಂದರ್ಭದಲ್ಲಿ ನಾವು ಮಾಧ್ಯಮಗಳಿಗೆ ತುಂಬಾ ಧನ್ಯವಾದ ಹೇಳುತ್ತೇವೆ. ಏಕೆಂದರೆ, ಮನೆಯಲ್ಲಿ ಹೇಳಲು ನಮಗೂ ಹೆದರಿಕೆ ಇತ್ತು, ಆ ಸಂದರ್ಭದಲ್ಲಿ ಮಿಡಿಯಾ ನಮಗೆ ಸಹಕಾರಿಯಾಗಿದೆ ಎಂದು ಚಿರು ಮಾಧ್ಯಮಗಳಿಗೆ ತಮ್ಮ ಧನ್ಯವಾದ ತಿಳಿಸಿದರು.

ನಂತರ ಮಾತನಾಡಿದ ಮೇಘನಾ- ಎಂಗೇಜ್ ಮೆಂಟ್ ಸಿದ್ಧತೆ ಬಹಳ ಬೇಗ ಆಯಿತು. ಚಿರು ತುಂಬಾ ರಫ್ ಎಂಡ್ ಟಫ್ ಬಾಯ್, ಹಾಗೇ ಚಿರು ಬಳಿ ಯಾರಾದ್ರು ಕಷ್ಟ ಅಂತ ಬಂದ್ರೆ ಹೆಲ್ಪ್ ಮಾಡ್ತಾರೆ‌ ಇದು ನನಗೆ ಚಿರುವಿನಲ್ಲಿ ತುಂಬ ಇಷ್ಟವಾದ ಗುಣ. ಅಲ್ಲದೆ, ಚಿರು ತುಂಬಾ ಜವಾಬ್ದಾರಿ ಇರೋ ವ್ಯಕ್ತಿ ಎಂದು ಚಿರುವನ್ನು ಮೇಘನಾ ಹೊಗಳಿದರು.

Trending News