WATCH: ಸಾಗರದಾಳದಲ್ಲಿ ಪತ್ನಿ ಜೊತೆ ಫರಾನ್ ಅಖ್ತರ್ ರೋಮ್ಯಾನ್ಸ್...!

ಈ ವರ್ಷದ ಆರಂಭದಲ್ಲಿ ನಟಿ-ಗಾಯಕಿ ಶಿಬಾನಿ ದಾಂಡೇಕರ್ ಅವರೊಂದಿಗೆ ವಿವಾಹವಾದ ನಟ ಫರ್ಹಾನ್ ಅಖ್ತರ್ ಅವರು ಈಗ ತಮ್ಮ ಪತ್ನಿಯೊಂದಿಗೆ ಸಾಗರದಾಳದಲ್ಲಿ ಇಳಿದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Jun 17, 2022, 08:42 PM IST
  • ಇನ್ನೂ ಫರ್ಹಾನ್ ಮತ್ತು ಶಿಬಾನಿ ಸಂಬಂಧದ ವಿಚಾರವಾಗಿ ಬರುವುದಾದರೆ, ಈ ಇಬ್ಬರು ಮದುವೆಯಾಗುವುದಕ್ಕೂ ಮೊದಲು ಒಂದೆರೆಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು.
WATCH: ಸಾಗರದಾಳದಲ್ಲಿ ಪತ್ನಿ ಜೊತೆ ಫರಾನ್ ಅಖ್ತರ್ ರೋಮ್ಯಾನ್ಸ್...! title=
file photo

ನವದೆಹಲಿ: ಈ ವರ್ಷದ ಆರಂಭದಲ್ಲಿ ನಟಿ-ಗಾಯಕಿ ಶಿಬಾನಿ ದಾಂಡೇಕರ್ ಅವರೊಂದಿಗೆ ವಿವಾಹವಾದ ನಟ ಫರ್ಹಾನ್ ಅಖ್ತರ್ ಅವರು ಈಗ ತಮ್ಮ ಪತ್ನಿಯೊಂದಿಗೆ ಸಾಗರದಾಳದಲ್ಲಿ ಇಳಿದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫರಾನ್ ಪ್ರಸ್ತುತ ಶಿಬಾನಿಯೊಂದಿಗೆ ಸೆಲೆಬ್ರಿಟಿಗಳ ನೆಚ್ಚಿನ ತಾಣವಾದ ಮಾಲ್ಡೀವ್ಸ್‌ನಲ್ಲಿ ತಮ್ಮ ಹನಿಮೂನ್ ದಿನಗಳನ್ನು ಕಳೆಯುತ್ತಿದ್ದಾರೆ.ಈಗ ಈ ಕ್ಷಣಗಳ ಕೆಲವು ಸ್ನ್ಯಾಪ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.ಈ ಹಿನ್ನೆಲೆಯಲ್ಲಿ ಈಗ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "Zindagi Na Milegi Dobara redone" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿಯೊಬ್ಬರು, "ಬ್ರೋ ನಿಜವಾಗಿಯೂ ಜಿಂದಗಿ ನ ಮಿಲೆಗಿ ದೋ ಬಾರಾ ವೈಬ್ ನಲ್ಲಿ ವಾಸಿಸುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Farhan Akhtar (@faroutakhtar)

ಫರಾನ್ ಕಳೆದ ವರ್ಷ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ನಟಿಸಿರುವ ತಮ್ಮ ಮುಂದಿನ ನಿರ್ದೇಶನದ 'ಜೀ ಲೇ ಜರಾ'ವನ್ನು ಸಹ ಅವರು ಘೋಷಿಸಿದರು.ಇದರ ಚಿತ್ರೀಕರಣದ ವಿವರಗಳು ಇನ್ನೂ ಬಹಿರಂಗವಾಗಿಲ್ಲ ಆದರೆ ಚಿತ್ರವು 2023 ರಲ್ಲಿ ಬಿಡುಗಡೆಯಾಗಲಿದೆ.

Farhan Akhtar

ಇನ್ನೂ ಫರ್ಹಾನ್ ಮತ್ತು ಶಿಬಾನಿ ಸಂಬಂಧದ ವಿಚಾರವಾಗಿ ಬರುವುದಾದರೆ, ಈ ಇಬ್ಬರು ಮದುವೆಯಾಗುವುದಕ್ಕೂ ಮೊದಲು ಒಂದೆರೆಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು.ಇದಾದ ನಂತರ ಅವರು ಫೆಬ್ರುವರಿಯಲ್ಲಿ ಮದುವೆಯಾಗಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಶಿಬಾನಿ ಸಹೋದರಿ ಅನುಷಾ ದಾಂಡೇಕರ್, ರಿಯಾ ಚಕ್ರವರ್ತಿ, ಅಮೃತಾ ಅರೋರಾ ಮತ್ತು ಹೃತಿಕ್ ರೋಷನ್ ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News