Funny Video: Bollywood ಸ್ಟೈಲ್ ನಲ್ಲಿ ಉಗ್ರರಿಗೆ ಧಮ್ಕಿ ಹಾಕಿದ US ಅಧ್ಯಕ್ಷ, ಜನರ ರಿಯಾಕ್ಷನ್ ಇಲ್ಲಿದೆ

Viral Video: ಅಮೆರಿಕಾದ ರಾಷ್ಟ್ರಾಧ್ಯಕ್ಷ ಜೋ ಬಿಡೆನ್ ಉಗ್ರರಿಗೆ (Terrorist) ನೀಡಿರುವ ಒಂದು ಧಮ್ಕಿಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ಥಿಗಳು ಇದು ಬಾಲಿವುಡ್ ನಟರಾಗಿದ್ದ ರಾಜಕುಮಾರ್ (Rajkumar) ಅವರ ಡೈಲಾಗ್ ಡಿಲೆವರಿಯನ್ನು ಕಾಪಿ ಮಾಡಿದ್ದಾರೆ ಎಂದು ಜರಿಯುತ್ತಿದ್ದಾರೆ. 

Written by - Nitin Tabib | Last Updated : Aug 31, 2021, 04:12 PM IST
  • ಬಾಲಿವುಡ್ ಸ್ಟೈಲ್ ನಲ್ಲಿ ಧಮ್ಕಿ ಹಾಕಿದ ಯುಎಸ್ ಅಧ್ಯಕ್ಷ
  • ರಾಜಕುಮಾರ್ ಡೈಲಾಗ್ ಶೈಲಿಯ ಕಾಪಿ ಎಂದ ನೆಟ್ಟಿಗರು
  • ವಿಡಿಯೋ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗುತ್ತಿದೆ.
Funny Video: Bollywood ಸ್ಟೈಲ್ ನಲ್ಲಿ ಉಗ್ರರಿಗೆ ಧಮ್ಕಿ ಹಾಕಿದ US ಅಧ್ಯಕ್ಷ, ಜನರ ರಿಯಾಕ್ಷನ್ ಇಲ್ಲಿದೆ title=
Funny Video (File Photo)

ನವದೆಹಲಿ: Funny Video - ಅಫ್ಘಾನಿಸ್ತಾನದ (Afghanistan) ಬಹುತೇಕ ಪ್ರದೇಶಗಳನ್ನು ತಾಲಿಬಾನ್ (Taliban) ತನ್ನ ವಶಕ್ಕೆ ಪಡೆದುಕೊಂಡಿದೆ. ಇತ್ತೀಚೆಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ (Kabul Air Port) ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ISIS-K ವಹಿಸಿಕೊಂಡಿದೆ. ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಅನೇಕ ಅಮೇರಿಕನ್ ಸೈನಿಕರು ಹುತಾತ್ಮರಾಗಿದ್ದಾರೆ. ಈ ದಾಳಿಯನ್ನು ಖಂಡಿಸಿದ್ದ ಯುಎಸ್ ಅಧ್ಯಕ್ಷ (US President) ಜೋ ಬಿಡೆನ್ (Joe Biden),  ನಾವು ಈ ದಾಳಿಯ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಜೋ ಬಿಡೆನ್ ಅವರ ಈ ಎಚ್ಚರಿಕೆ ನೀಡುವ ಶೈಲಿಗೆ ಭಾರಿ ಪ್ರತಿಕ್ರಿಯೆಗಳು ಬರುತ್ತಿವೆ. ಭಾರತೀಯ ನೆಟ್ಟಿಗರು ಬಿಡೆನ್ ಅವರ ಧಮ್ಕಿ ಹಾಕುವ ಶೈಲಿಯನ್ನು ಖ್ಯಾತ ನಟರಾಗಿದ್ದ ರಾಜ್ ಕುಮಾರ್ ಅವರ ಡೈಲಾಗ್ (Bollywood Dialogue) ಹಾಕುವ ಶೈಲಿಯ ಜೊತೆಗೆ ಹೊಲಿಸುತ್ತಿದ್ದಾರೆ.

ಇದನ್ನೂ ಓದಿ-Viral Video: ನೀರಿನಲ್ಲಿ ಅದ್ಭುತವಾಗಿ ಈಜಿ ನೋಡುಗರ ಹುಬ್ಬೇರಿಸಿದ ಮೊಲ..!

ಬಾಲಿವುಡ್ ಸ್ಟೈಲ್ ನಲ್ಲಿ ಜೋ ಬಿಡೆನ್ ಧಮ್ಕಿ
ಹೌದು, ಈ ಸಂದರ್ಭದಲ್ಲಿ ಜೋ ಬಿಡೆನ್ ಅವರು ನೀಡಿದ್ದ ಭಾಷಣ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.  ಇದರಲ್ಲಿ ಅವರು ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಯೋತ್ಪಾದಕ ಸಂಘಟನೆಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಅವರ ಈ ಬೆದರಿಕೆ ಬಾಲಿವುಡ್‌ನ ಪ್ರಸಿದ್ಧ ಚಿತ್ರ 'ಸೌದಾಗರ್'ನ (Soudagar) ನಕಲು ಎಂಬಂತೆ ತೋರುತ್ತಿದೆ. ಚಿತ್ರದಲ್ಲಿ, ಹಿರಿಯ ನಟ ರಾಜಕುಮಾರ್, "ಜಾನಿ .. ಹಮ್ ತುಮ್ಹೇ ಮಾರೆಂಗೆ, ಔರ್ ಜರೂರ್ ಮಾರೆಂಗೆ ... ಲೆಕಿಂಗ್ ವೋ ಬಂದೂಕ್ ಭಿ ಹಮಾರಿ ಹೋಗಿ, ಗೋಲಿ ಭಿ ಹಮಾರಿ ಹೋಗಿ ಔರ್ ವಕ್ತ್ ಭಿ ಹಮಾರಾ ಹೋಗಾ" (ಅಂದರೆ ಜಾನೀ..ನಾವು ನಿಮ್ಮನ್ನು ಕೊಳ್ಳುತ್ತೇವೆ, ಖಂಡಿತವಾಗಿ ಕೊಳ್ಳುತ್ತೇವೆ... ಆದರೆ, ಆ ಬಂದೂಕು ಕೂಡ ನಮ್ಮದಾಗಿರಲಿದೆ, ಗುಂಡೂ ಕೂಡ ನಮ್ಮದಾಗಿರಲಿದೆ ಹಾಗೂ ಆ ಸಮಯ ಕೂಡ ನಮ್ಮದಾಗಿರಲಿದೆ) ಎಂದು ಹೇಳಿದ್ದರು.

ಇದನ್ನೂ ಓದಿ-Viral Video: Vaccine ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದ ಸುಂದರ ಮಹಿಳೆ, ಮೆಲ್ಲಗೆ ವ್ಯಾಕ್ಸಿನ್ ಹಾಕಿದ ನರ್ಸಮ್ಮ, ಮುಂದೇನಾಯ್ತು? See Video...

ಬಿಡೆನ್ ಅವರು ರಾಜಕುಮಾರ್ ಡೈಲಾಗ್ ಶೈಲಿಯನ್ನು ಕಾಪಿ ಮಾಡಿದ್ದಾರೆ ಎನ್ನುತ್ತಿರುವ ನೆಟ್ಟಿಗರು 
ಯುಎಸ್ ಅಧ್ಯಕ್ಷ ಜೋ ಬಿಡೆನ್ ತಮ್ಮ ಭಾಷಣದಲ್ಲಿ, 'ನಾವು ನಮ್ಮ ಕ್ರಮವನ್ನು ನಮ್ಮ ಸಮಯ, ನಮ್ಮ ಜಾಗ ಹಾಗೂ ನಮ್ಮ ಮೊಮೆಂಟ್ ಅನ್ನು ಆಯ್ಕೆ ಮಾಡಿ ಜರುಗಿಸುವೆವು' ಎಂದು ಹೇಳಿದ್ದರು. ಈ ವಿಡಿಯೋವನ್ನು (Funny Video) IAS ಅಧಿಕಾರಿಯಾಗಿರುವ  ಅವನಿಶ್ ಶರಣ್ ಟ್ವೀಟ್ ಮಾಡಿದ್ದಾರೆ. ವಿಡಿಯೋ ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದ ಅವನೀಶ್ 'ಬಿಡೆನ್ ಮೇಲೆ ರಾಜಕುಮಾರ್ ಅವರ ನಕಲು ಮಾಡಿದ ಆರೋಪ' ಎಂದು ಬರೆದುಕೊಂಡಿದ್ದರು. ಈ ವಿಡಿಯೋ ಅನ್ನು ಸುಮಾರು 1 ಲಕ್ಷಕ್ಕೂ ಅಧಿಕ ಜನರು ವಿಕ್ಷೀಸಿದ್ದು, ಸುಮಾರು 8 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ-Viral Video : ಮದುವೆಗೆ ಬಂದ ಕುಟುಂಬಸ್ಥರು, ಸ್ನೇಹಿತರ ಮುಂದೆಯೇ ಹೊಡೆದಾಡಿಕೊಂಡ ವಧು ಮತ್ತು ಮೈದುನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News