Watch: ಮಕ್ಕಳೊಂದಿಗೆ ಅರಸನಕೋಟೆ ಅಖಿಲಾಂಡೇಶ್ವರಿ ಹುಟ್ಟುಹಬ್ಬ ಆಚರಣೆ ಹೇಗಿದೆ ನೋಡಿ...!

ಜೀ ವಾಹಿನಿಯ ಪ್ರಸಿದ್ಧ 'ಪಾರು' ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ಚಂದನವನದ ಖ್ಯಾತ ನಟಿ ವಿನಯಾ ಪ್ರಸಾದ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 

Last Updated : Nov 22, 2019, 03:55 PM IST
Watch: ಮಕ್ಕಳೊಂದಿಗೆ ಅರಸನಕೋಟೆ ಅಖಿಲಾಂಡೇಶ್ವರಿ ಹುಟ್ಟುಹಬ್ಬ ಆಚರಣೆ ಹೇಗಿದೆ ನೋಡಿ...! title=
Photo courtesy: ZeeKannada

ಮಾತಿನಲ್ಲಿ 'ನಯ', ಹಾಡಿನಲ್ಲಿ 'ಲಯ' ಹೆಸರಿಗೆ ತಕ್ಕಂತೆ 'ವಿನಯಾ' ದಕ್ಷಿಣ ಭಾರತವೇ ಮೆಚ್ಚಿದ ಕನ್ನಡದ ಸುಪ್ರಸಿದ್ಧ ಕಲಾವಿದೆ ವಿನಯಾ ಪ್ರಸಾದ್. 1965ರ ನವೆಂಬರ್ 22ರಂದು ಕೃಷ್ಣಾ ಭಟ್, ವತ್ಸಲಾ ಭಟ್ ದಂಪತಿಗಳ ದ್ವಿತೀಯ ಪುತ್ರಿಯಾಗಿ ವಿನಯಾ ಪ್ರಸಾದ್ ಧಾರವಾಡದಲ್ಲಿ ಜನಿಸಿದರು. 

ರಂಗಭೂಮಿಯಿಂದ ನಟನೆ ಆರಂಭಿಸಿದ ಇವರು 1986ರಲ್ಲಿ ಮಧ್ವಾಚಾರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅರ್ಧ ಶತಕಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಮೆ ಇವರದು. ಬೆಳ್ಳಿತೆರೆಯಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕಿರುತೆರೆಯಲ್ಲಿಯೂ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟನೆಯಷ್ಟೇ ಅಲ್ಲದೇ ವಿನಯಾ ಪ್ರಸಾದ್ ಉತ್ತಮ ಕಂಠದ ಸಂಗೀತಗಾರ್ತಿಯೂ ಹೌದು.

ಜೀ ವಾಹಿನಿಯ ಪ್ರಸಿದ್ಧ 'ಪಾರು' ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರ ನಿರ್ವಹಿಸುತ್ತಿರುವ ಚಂದನವನದ ಖ್ಯಾತ ನಟಿ ವಿನಯಾ ಪ್ರಸಾದ್ ಅವರ ಜನ್ಮದಿನದಂದು ಅವರ ಪುತ್ರಿ ಪ್ರಥಮ  ಹಾಗೂ 'ಪಾರು' ಧಾರಾವಾಹಿಯಲ್ಲಿ ಅವರ ಮಕ್ಕಳ ಪಾತ್ರ ನಿರ್ವಹಿಸುತ್ತಿರುವ ಆದಿ ಮತ್ತು ಪ್ರೀತು ಅವರಿಗೆ ಒಂದು #Surprise ಗಿಫ್ಟ್ ನೀಡಿದ್ದಾರೆ. ಆ #Surprise ಗಿಫ್ಟ್ ಹೇಗಿತ್ತು. ಅದರಿಂದ ವಿನಯಾ ಪ್ರಸಾದ್ ಅವರಿಗೆ ಖುಷಿ ಆಯ್ತಾ ಅನ್ನೋದನ್ನ ನೀವೇ ನೋಡಿ... ಜೊತೆಗೆ ನಮ್ಮ ಜೀ ವಾಹಿನಿಯ ಮೂಲಕ ನೀವೂ ಕೂಡ ವಿನಯಾ ಪ್ರಸಾದ್ ಅವರಿಗೆ ಜನ್ಮ ದಿನದ ಶುಭಾಷಯಗಳನ್ನು ತಿಳಿಸಬಹುದು.

Weekend With Ramesh ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ಅವರ ವಿಶೇಷ ಸಂಚಿಕೆಯನ್ನು ಇಲ್ಲಿ ವೀಕ್ಷಿಸಿ...

Trending News