Vijay Devarkonda : ಸಮಂತಾ ನನ್ನ ಕ್ರಷ್‌ ಎಂದ ರೌಡಿಬಾಯ್‌; ಹಾಗಿದ್ರೆ ನ್ಯಾಷನಲ್‌ ಕ್ರಷ್ ಕಥೆ ಏನು ಎಂದ ನೆಟಿಜನ್ಸ್‌!‌

Vijay Devarkonda Reveal his crush name : ಖುಷಿ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೆ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಚಿತ್ರದ  ಹಾಡುಗಳು, ಟ್ರೇಲರ್‌ ರಿಲೀಸ್‌ ಆಗಿದ್ದು ಸಿನಿಮಾ ತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಈ ನಡುವೆ ವಿಜಯ್‌ ದೇವರಕೊಂಡ ಹೇಳಿಕೆಯೊಂದು ಸಖತ್‌ ವೈರಲ್‌ ಆಗಿದೆ.   

Written by - Savita M B | Last Updated : Aug 16, 2023, 03:57 PM IST
  • ವಿಜಯ್‌ ದೇವರಕೊಂಡ ಟಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ತಮ್ಮ ಪ್ರತಿಭೆಯಿಂದಲೇ ಬೆಳೆದವರು.
  • ಅದ್ಭುತ ನಟನೆ, ಮಾಸ್‌ ಲುಕ್‌ನಿಂದಲೇ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿರುವ ರೌಡಿಬಾಯ್‌
  • ಸದ್ಯ ವಿಜಯ್‌ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ
Vijay Devarkonda : ಸಮಂತಾ ನನ್ನ ಕ್ರಷ್‌ ಎಂದ ರೌಡಿಬಾಯ್‌; ಹಾಗಿದ್ರೆ ನ್ಯಾಷನಲ್‌ ಕ್ರಷ್ ಕಥೆ ಏನು ಎಂದ ನೆಟಿಜನ್ಸ್‌!‌ title=

Vijay Devarkonda : ವಿಜಯ್‌ ದೇವರಕೊಂಡ ಟಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ತಮ್ಮ ಪ್ರತಿಭೆಯಿಂದಲೇ ಬೆಳೆದವರು. ಅದ್ಭುತ ನಟನೆ, ಮಾಸ್‌ ಲುಕ್‌ನಿಂದಲೇ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿರುವ ರೌಡಿಬಾಯ್‌ ವಿಜಯ್‌ ದೇವರಕೊಂಡ ತುಂಬಾ ಸ್ರ್ಟೇಟ್‌ ಪಾರ್ವರ್ಡ್‌. 

ಸದ್ಯ ಖುಷಿ ಸಿನಿಮಾದ ಪ್ರಮೋಷನ್‌ ಕೆಲಸಗಳು ನಡೆಯುತ್ತಿವೆ. ಇನ್ನು ಈ ನಡುವೆ ಮೊನ್ನೆ ನಡೆದ ಖುಷಿ ಸಿನಿಮಾದ ಸಾಂಗ್‌ ರಿಲೀಸ್‌ ಈವೆಂಟ್‌ನಲ್ಲಿ ವಿಜಯ್‌ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ ಏನದು  ಅಂತೀರಾ ಮುಂದೆ ಓದಿ..

ಇದನ್ನೂ ಓದಿ-Bigg Boss OTT : ಬಿಗ್ ಬಾಸ್ ಕನ್ನಡ ಓಟಿಟಿಗೆ ಕೋಕ್‌..!

ಹೈದರಾಬದ್‌ನಲ್ಲಿ ನಡೆದ ಖುಷಿ ಸಿನಿಮಾದ ಸಾಂಗ್‌ ರಿಲೀಸ್‌ ಈವೆಂಟ್‌ನಲ್ಲಿ ವಿಜಯ್‌ ನಿಮ್ಮ ಕ್ರಷ್‌ ಯಾರು ಎಂದು ಕೇಳಿದ್ದಕ್ಕೆ ರೌಡಿ ಬಾಯ್‌ ಸಮಂತಾ ಹೆಸರು ಹೇಳಿದ್ದಾರೆ. ಇದಷ್ಟೇ ಅಲ್ಲ ಒಮ್ಮೆ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿಯೂ ಸಹ ನಟ ಸಮಂತಾ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದರು. ಹೀಗೆ ಸಮಂತಾ ಕುರಿತು ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್‌ಗಳು ವೈರಲ್‌ ಆಗುತ್ತಿದ್ದು ಹಾಹಾದರೆ ರಶ್ಮಿಕಾ ಕಥೆ ಏನು ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. 

ಇನ್ನು ಅದೇ ಇವೆಂಟ್‌ಗೆ ವಿಜಯ್‌ ದೇವರಕೊಂಡ ಹಾಗೂ ಸಮಂತಾ ಕೈ ಕೈ ಹಿಡಿದು ಬಂದಿದ್ದಾರೆ. ತೆರೆ ಮೇಲೆ ಅಷ್ಟೇ ಅಲ್ಲ ವೇದಿಕೆ ಮೇಲೆ ಸಹ ಇಬ್ಬರು ಸಖತ್‌ ಡ್ಯಾನ್ಸ್‌ ಕೂಡಾ ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ ನೋಡಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ-Ram charan : ಧ್ವಜಾರೋಹಣ ಮಾಡಿದ ಮೆಗಾ ಪ್ರಿನ್ಸೆಸ್‌: ರಾಮ್‌ಚರಣ್ ಮಗಳ ಮೊದಲ ಫೋಟೊ ರಿವೀಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News