ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲ್ಲ ಎಂದ ವಿಜಯ್‌ ಸೇತುಪತಿ..! ಕಾರಣ ಇದೆ

Vijay sethupathi : ನಟಿ ಕೃತಿ ಶೆಟ್ಟಿ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಚಿತ್ರವೊಂದರಲ್ಲಿ ತಮಿಳು ಸ್ಟಾರ್ ಹೀರೋ ವಿಜಯ್ ಸೇತುಪತಿ ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲು ನಿರಾಕರಿಸಿದ್ದಾರೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

Written by - Krishna N K | Last Updated : Sep 28, 2023, 04:58 PM IST
  • ನಟಿ ಕೃತಿ ಶೆಟ್ಟಿ ರೊಮ್ಯಾನ್ಸ್‌ ದೃಶ್ಯದಲ್ಲಿ ನಟಿಸಲು ವಿಜಯ್‌ ಸೇತುಪತಿ ನಿರಾಕರಣೆ
  • ಇದೀಗ ಚರ್ಚೆಗೆ ಗ್ರಾಸವಾಯ್ತು ಖ್ಯಾತ ನಟ ವಿಜಯ್ ಸೇತುಪತಿ ಹೇಳಿಕೆ
  • ಈ ಕುರಿತು ಸಂದರ್ಶನವೊಂದರಲ್ಲಿ ವಿಜಯ್‌ ಸ್ಪಷ್ಟತೆ ನೀಡಿದ್ದಾರೆ
ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲ್ಲ ಎಂದ ವಿಜಯ್‌ ಸೇತುಪತಿ..! ಕಾರಣ ಇದೆ title=

Vijay Sethupathi on Krithi shetty : ಮೊದಲ ಸಿನಿಮಾದಿಂದಲೇ ಉತ್ತಮ ಜನಪ್ರಿಯತೆ ಗಳಿಸಿದ ನಾಯಕಿಯರಲ್ಲಿ ಕರಾವಳಿ ಸುಂದರಿ ಕೃತಿ ಶೆಟ್ಟಿ ಕೂಡ ಒಬ್ಬರು. ಆದರೆ ಈ ಬ್ಯೂಟಿ ಜೊತೆ ರೊಮ್ಯಾನ್ಸ್ ಮಾಡುವುದಿಲ್ಲ ಎಂದು ಕಾಲಿವುಡ್ ಸ್ಟಾರ್ ಹೀರೋ ವಿಜಯ್ ಸೇತುಪತಿ ಹೇಳಿಕೆ ನೀಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕೃತಿ ಶೆಟ್ಟಿ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರು. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ನಟ ಪಂಜಾ ತೇಜ್ ಜೊತೆ ಕೃತಿ ನಟಿಸಿದ್ದರು. ಈ ಚೆಲುವೆ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ತೆಲುಗು ಸೇರಿದಂತೆ ಸೌಥ್‌ ಸಿನಿ ಪ್ರೇಕ್ಷಕರ ಮನ ಗೆದ್ದರು. 

ಇದನ್ನೂ ಓದಿ: ಭಾರತದ ಮೊದಲ ಬಯೋ ಸೈನ್ಸ್‌ ಸಿನಿಮಾ ʼದಿ ವ್ಯಾಕ್ಸಿನ್‌ ವಾರ್‌ʼ ಇಂದು ರಿಲೀಸ್‌ : ವಿಮರ್ಶೆ ಇಲ್ಲಿದೆ

ಈ ಸಿನಿಮಾದ ಯಶಸ್ಸಿನ ನಂತರ ಕೃತಿಗೆ ಸಾಲು ಸಾಲು ಆಫರ್‌ಗಳು ಬಂದವು. ನಾನಿ ನಟನೆಯ ಶ್ಯಾಮ್ ಸಿಂಹರಾಯ್, ನಾಗಾರ್ಜುನ ಅಭಿನಯದ ಬಂಗಾರರಾಜು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ ಕೃತಿ ನಟನೆಯ ಮಾಚರ್ಲಾ ಕ್ಷೇತ್ರ, ಕಸ್ಟಡಿ, ದಿ ವಾರಿಯರ್, ಸೇರಿದಂತೆ ಹಲವು ಸಿನಿಮಾಗಳು ಬಾಕ್ಸ್ ಆಫೀಸ್ ಹೆಚ್ಚಾಗಿ ಮ್ಯಾಜಿಕ್‌ ಮಾಡಲಿಲ್ಲ.

ಇದೀಗ ಕೃತಿ ಕಮ್‌ಬ್ಯಾಕ್‌ ಮಾಡಬೇಕು ಅಂದ್ರೆ, ಸರಿಯಾದ ಹಿಟ್ ಸಿಗಬೇಕು. ಸದ್ಯ ಈ ನಟಿ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಚಿತ್ರವೊಂದರಲ್ಲಿ ತಮಿಳು ಸ್ಟಾರ್ ಹೀರೋ ವಿಜಯ್ ಸೇತುಪತಿ ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಕುರಿತು ವಿಜಯ್‌ ಸ್ಪಷ್ಟತೆ ನೀಡಿದರು.

ಇದನ್ನೂ ಓದಿ:ಇಂಟರ್‌ನೆಟ್‌ನಲ್ಲಿ ನಿಲ್ಲುತ್ತಿಲ್ಲ ನಟಿ ಜ್ಯೋತಿ ರೈ ಅಂದದ ಹಾವಳಿ : ಫೋಟೋಸ್‌ ವೈರಲ್‌

ಉಪ್ಪೇನ ಚಿತ್ರದಲ್ಲಿ ನಾನು ಕೃತಿ ತಂದೆಯಾಗಿ ನಟಿಸಿದ್ದೇನೆ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ನಂತರ ನಾನು ತಮಿಳಿನ ಚಿತ್ರಕ್ಕೆ ಸಹಿ ಹಾಕಿದೆ. ಅದರಲ್ಲಿ ನನಗೆ ಜೋಡಿಯಾಗಿ ಕೃತಿ ಶೆಟ್ಟಿ ಇದ್ದರೆ ಒಳ್ಳೆಯದು ಎಂದು ನಿರ್ಮಾಪಕರು ಭಾವಿಸಿದರು. ಈ ವಿಚಾರ ತಿಳಿದ ತಕ್ಷಣ ಸಿನಿಮಾ ಯೂನಿಟ್‌ಗೆ ಫೋನ್ ಮಾಡಿ ಬೇಡ ಅಂದೆ. ನಾನು ತಂದೆಯಾಗಿ ನಟಿಸಿದ ನಟಿ ಜತೆ ರೊಮ್ಯಾನ್ಸ್ ಮಾಡಲು ಇಷ್ಟವಿಲ್ಲ.. ಅದಕ್ಕೇ ಬೇಡ ಎಂದೆ ಎಂದು  ವಿಜಯ್‌ ಹೇಳಿದ್ದಾರೆ.

ಸದ್ಯ ವಿಜಯ್ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಕಾಲಿವುಡ್‌, ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಜವಾನ್ ಚಿತ್ರದಲ್ಲಿ ವಿಜಯ್ ವಿಲನ್ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಸದ್ಯ ಅವರು ಮಹಾರಾಜ, ಮೇರಿ ಕ್ರಿಸ್‌ಮಸ್, ಗಾಂಧಿ ಟಾಕ್ಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News